ಅಡಿಲೇಡ್: ಟಿ20 ವಿಶ್ವಕಪ್ ಅಂತ್ಯವಾಗಿ ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ದ್ವಿಪಕ್ಷೀಯ ಸರಣಿ ಆರಂಭವಾಗಿದೆ. ಇಂದು ಅಡಿಲೇಡ್ ಓವಲ್ ನಲ್ಲಿ ಏಕದಿನ ಸರಣಿಯ ಮೊದಲ ಪಂದ್ಯದ ನಡೆಯುತ್ತಿದೆ. ಇದರಲ್ಲಿ ಆಸೀಸ್ ನ ಆ್ಯಶ್ಟನ್ ಆ್ಯಗರ್ ಮಾಡಿದ ಫೀಲ್ಡಿಂಗ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ ಬಾರಿಸಿದ ಚೆಂಡು ಸಿಕ್ಸರ್ ಕಡೆ ಸಾಗುತ್ತಿತ್ತು. ಈ ವೇಳೆ ಬೌಂಡರಿ ಗೆರೆ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆ್ಯಗರ್ ಅವರು ಹಾರಿ ಚೆಂಡನ್ನು ತಡೆದು ಮೈದಾನದ ಒಳಗೆಸೆದರು. ಬ್ಯಾಟರ್ ಗಳು ಕೇವಲ ಒಂದು ರನ್ ಓಡಿದರು. ಹೀಗಾಗಿ ಆ್ಯಗರ್ ತಮ್ಮ ಅತ್ಯದ್ಭುತ ಫೀಲ್ಡಿಂಗ್ ನಿಂದ ತಂಡಕ್ಕೆ ಐದು ರನ್ ಉಳಿಸಿದರು.
ವೀಡಿಯೊ ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಡೇವಿಡ್ ಮಲಾನ್ ಅವರು 45 ನೇ ಓವರ್‌ನಲ್ಲಿ ಹೊಡೆದ ಚೆಂಡನ್ನು ಆ್ಯಗರ್ ಸೂಪರ್ ಮ್ಯಾನ್ ಶೈಲಿಯಲ್ಲಿ ಹಿಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿದೆ. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ಮಲಾನ್ ಭರ್ಜರಿ ಶತಕ ಸಿಡಿಸಿದರು. ಕುಸಿದ ತಂಡಕ್ಕೆ ಆಧಾರವಾದ ಮಲಾನ್ 134 ರನ್ ಗಳಿಸಿದರು. ಆಸೀಸ್ ಪರ ಜಂಪಾ ಮತ್ತು ನಾಯಕ ಕಮಿನ್ಸ್ ತಲಾ ಮೂರು ವಿಕೆಟ್ ಕಿತ್ತರು.