Advertisement

ಆಶ್ರಯ ಮನೆ ನಿವಾಸಿಗಳಿಗೆ ತೊಂದರೆ; ನ್ಯಾಯಕ್ಕಾಗಿ ಮನವಿ

02:21 PM Nov 08, 2020 | sudhir |

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಢವಳೇಶ್ವರ ಗ್ರಾಮದ ಸರ್ವೇ ನಂ.6/2ಇ ಗೆ ಸಂಬಂಧಿಸಿದ ಆಸ್ತಿಯಲ್ಲಿ
ವಾಸಿಸುತ್ತಿದ್ದು, ನಮಗೆ ಕೆಲವರು ತೊಂದರೆ ಕೊಡುತ್ತಿದ್ದಾರೆ. ಈ ಆಸ್ತಿ ಮೋಜನಿ ಮಾಡಿ, ನಮಗೆ ನ್ಯಾಯ ಕೊಡಿಸಬೇಕು ಆಶ್ರಯ
ಮನೆಯ ನಿವಾಸಿ ಇಮಾಮ್‌ಬಿ ಮುಲ್ಲಾ ಒತ್ತಾಯಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈರಪ್ಪ ನಾವಿ ಎಂಬುವವರು ಸರ್ವೆ ನಂ. 6/2ಇ ಗೆ ಸಂಬಂಧಿಸಿದಂತೆ
9 ಗುಂಟೆ ಜಾಗವನ್ನು ಸರ್ಕಾರಕ್ಕೆ ದಾನ ನೀಡಿದ್ದಾರೆ. ಅದರಲ್ಲಿ ಪಂಚಾಯಿತಿ ಮೂಲಕ 9 ಕುಟುಂಬಗಳಿಗೆ ಆಶ್ರಯ ಮನೆ
ನೀಡಿದ್ದು ಇದರ ಹಕ್ಕು ಪತ್ರ ಸಹ ಇದೆ. ಈಗ ನಾವಿ ಕುಟುಂಬ ಅರ್ಧ ಗುಂಟೆ ಜಾಗ ನಮಗೆ ಸೇರಿದೆ ಎಂದು ತಕಾರರು ತೆಗೆದಿದ್ದು,
9 ಕುಟುಂಬಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ:ಉರಿಯುತ್ತಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಕೊಲೆ ಮಾಡಿ ಸುಟ್ಟಿರುವ ಶಂಕೆ

ಅವರ ಜಾಗ ಇದ್ದರೆ ಪಂಚಾಯಿತಿ ಅಥವಾ ಸರ್ಕಾರವಾಗಲಿ ನಮ್ಮದು ಜಾಗ ಎಷ್ಟು ಇದೆ ಎಂದು ಸಮೀಕ್ಷೆ ಮಾಡಿಕೊಡಲಿ.
ಆದರೆ ನಾವಿ ಕುಟುಂಬದವರು ಮಹಾಲಿಂಗಪುರ ಪೊಲೀಸ್‌ ಠಾಣೆಯ ಅಧಿಕಾರಿಗಳು ಹಾಗೂ ಅಲ್ಲಿಯ ಬೀಟ್‌ ಪೊಲೀಸ್‌ರ
ಮೂಲಕ ಪ್ರತಿದಿನ ನಮಗೆ ಕಿರುಕುಳ ನೀಡಿಸುತ್ತಿದ್ದಾರೆ. ನಮ್ಮನ್ನು ಪೊಲೀಸ್‌ ಠಾಣೆಗೆ ಕರೆದು ತೊಂದರೆ ನೀಡುತ್ತಿದ್ದಾರೆ. ಕೂಡಲೇ
ನಮಗೆ ನ್ಯಾಯ ಕೊಡಬೇಕು ಎಂದು ಕೇಳಿಕೊಂಡರು. ಮೌಲಾನಾ ಮುಲ್ಲಾ, ಮುಜಾವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next