Advertisement

ಯಕ್ಷಸೌಂದರ್ಯ ಸಾಕಾರಗೊಳಿಸಿದ ಆಶ್ರಮದಾಟ

08:24 PM Dec 12, 2019 | mahesh |

ಕಲೆಯ ಉನ್ನತಿ ಮತ್ತು ಅವನತಿಗೆ ಪ್ರೇಕ್ಷಕವರ್ಗವೂ ಬಹುಮಟ್ಟಿಗೆ ಕಾರಣರಾಗುತ್ತಾರೆ. ಈ ದೃಷ್ಟಿಯಿಂದ ಪ್ರೇಕ್ಷಕವರ್ಗವೇ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ
ಎನ್ನಬಹುದು.

Advertisement

ನಿರಂತರ ಹತ್ತು ವರುಷಗಳಿಂದ ಉತ್ತಮ ಯಕ್ಷಗಾನ ಕಲಾಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಶ್ರೀ ರಾಮಕೃಷ್ಣ ಮಠ ಮತ್ತು ವಿಭಿನ್ನ ಮಂಗಳೂರು ತನ್ನ ಹನ್ನೊಂದನೆಯ ಕಾರ್ಯಕ್ರಮವನ್ನು ಇತ್ತೀಚೆಗೆ ಪ್ರಸ್ತುತಪಡಿಸಿತು.

ತೆಂಕು-ಬಡಗುತಿಟ್ಟಿನ ವೃತ್ತಿಪರ ಪ್ರಸಿದಟಛಿ ಕಲಾವಿದರ ಸಮ್ಮಿಲನದಿಂದ ನಡೆದ ನರಕಾಸುರವಧೆ ಮತ್ತು ಶ್ರೀರಾಮ ದರ್ಶನ ಎಂಬೆರಡು ಪ್ರದರ್ಶನಗಳು ಮೆಚ್ಚುಗೆಗೆ ಪಾತ್ರವಾಯಿತು. ಪ್ರಸಾದ ಬಲಿಪ, ರಾಮಕೃಷ್ಣ ಹಿಲ್ಲೂರು, ರಾಘವೇಂದ್ರ ಆಚಾರ್‌ ಜನ್ಸಾಲೆ, ಕೃಷ್ಣಪ್ರಕಾಶ ಉಳಿತ್ತಾಯ, ಸುನಿಲ್‌ ಭಂಡಾರಿ, ಚೈತನ್ಯ ಪದ್ಯಾಣ,  ಶ್ರೀನಿವಾಸ ಪ್ರಭು, ರಾಜೇಂದ್ರ ಭಟ್‌, ಗಜಾನನ ಹೆಗಡೆ, ಲಕ್ಷ್ಮೀನಾರಾಯಣ ಸಂಪ ಹಿಮ್ಮೇಳಕ್ಕೆ ಕಳೆ ನೀಡಿದರೆ ; ಮುಮ್ಮೇಳದಲ್ಲಿ ಜಯಪ್ರಕಾಶ ಶೆಟ್ಟಿ ಪೆರ್ಮುದೆ (ನರಕಾಸುರ), ನೀಲ್ಕೋಡು ಶಂಕರ ಹೆಗಡೆ(ಶ್ರೀಕೃಷ್ಣ), ಶಶಿಕಾಂತ ಶೆಟ್ಟಿ ಕಾರ್ಕಳ (ಸತ್ಯಭಾಮೆ), ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ
(ದೇವೇಂದ್ರ), ತಾರಾನಾಥ ವರ್ಕಾಡಿ(ನಾರದ), ಕುಳಿಮನೆ ನಾಗೇಶ (ಮುರಾಸುರ), ಚಪ್ಪರಮನೆ
ಶ್ರೀಧರ ಹೆಗಡೆ(ಹಾಸ್ಯ), ಲೋಕೇಶ್‌ ಮುಚ್ಚಾರು (ಪ್ರಸೇನ), ಸದಾಶಿವ ಶೆಟ್ಟಿಗಾರ್‌(ಸಿಂಹ),
ಸುಬ್ರಾಯ ಹೊಳ್ಳ (ತೆಂಕಿನ ಜಾಂಬವ), ಮೂರೂರು ಸುಬ್ರಹ್ಮಣ್ಯ ಹೆಗಡೆ(ಬಲರಾಮ),
ತೋಟಿಮನೆ ಗಣಪತಿ ಹೆಗಡೆ(ಕೃಷ್ಣ), ಮಾರುತಿ ನಾಯ್ಕ (ಜಾಂಬವತಿ), ಕೊಂಡದಕುಳಿ ರಾಮಚಂದ್ರ
ಹೆಗಡೆ (ಬಡಗಿನ ಜಾಂಬವ) ಪಾತ್ರಧಾರಿಗಳಾಗಿ ರಂಗವೈಭವವನ್ನು ಸಾಕ್ಷಾತ್ಕರಿಸಿದರು.

ಈ ಪ್ರದರ್ಶನವನ್ನು ಕಣ್ತುಂಬಿಕೊಂಡ ಪ್ರೇಕ್ಷಕವರ್ಗವನ್ನು ಅಭಿನಂದಿಸಲೇಬೇಕು. ಕಲೆಯ ಉನ್ನತಿ ಮತ್ತು ಅವನತಿಗೆ ಪ್ರೇಕ್ಷಕವರ್ಗವೂ ಬಹುಮಟ್ಟಿಗೆ ಕಾರಣರಾಗುತ್ತಾರೆ. ಈ ದೃಷ್ಟಿಯಿಂದ ಪ್ರೇಕ್ಷಕವರ್ಗವೇ
ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರಧಾರಿಗಳಾಗಿದ್ದಾರೆ ಎನ್ನಬಹುದು.
ಆಹಾರ್ಯ ಮತ್ತು ಒಳವಿನ್ಯಾಸಗಳಲ್ಲಿ ತೆಂಕು ಮತ್ತು ಬಡಗುತಿಟ್ಟು ಭಿನ್ನವಾಗಿ ಕಂಡರೂ ತಾಳ
ವ್ಯವಸ್ಥೆಯಲ್ಲಿ ಒಂದೇ ಆಗಿದೆ. ಪ್ರೇಕ್ಷಕರಲ್ಲೂ ಆಯಾ ಪ್ರದೇಶದ ಅಭಿಮಾನಿಗಳೂ ಇದ್ದಾರೆ.

ಉಭಯತಿಟ್ಟಿನ ಕಲಾವಿದರು ಒಂದೇ ವೇದಿಕೆಯಲ್ಲಿ ಒಂದಾಗಿ ನೀಡಿದ ಈ ಪ್ರದರ್ಶನ ಎರಡೂತಿಟ್ಟಿನ
ಸಭಾಸದರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ದೇವ ಕಾನದವರ ತೆಂಕುತಿಟ್ಟಿನ ವೇಷಭೂಷಣ, ಲಕ್ಷ್ಮಣ ನಾಯ್ಕ ಮಂಕಿ ಅವರ ಬಡಗುತಿಟ್ಟಿನ ಪ್ರಸಾದನ ಆಹಾರ್ಯಾಭಿನಯದ ಅಂದಕ್ಕೆ ಮೆರುಗು ನೀಡಿತು. ತಪೋವನದಂತಿರುವ ಪ್ರಶಾಂತ ಪರಿಸರದಲ್ಲಿ ಆರೇಳು ಘಂಟೆಗಳ ಕಾಲ ನಡೆದ ಯಕ್ಷಗಾನ ಒಂದು ಮಾದರಿ ಪ್ರದರ್ಶನವೆಂದರೆ ಅತಿಶಯೋಕ್ತಿಯೆನಿಸದು. ಉಭ ಯತಿಟ್ಟುಗಳ ಸಾಹೋದರ್ಯ
ಸಂಬಂಧ, ಸೌಂದರ್ಯ, ಅನನ್ಯತೆಯನ್ನು ಸಾಕಾರಗೊಳಿಸಿದ ಈ ಆಶ್ರಮದಾಟ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು.

Advertisement

ತಾರಾನಾಥ ವರ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next