ಜಿಲ್ಲೆಯ ಕುಳತ್ತೂರು ನಿವಾಸಿಯಾಗಿರುವ ಇವರು ಬೆಷಿಟ್ ಡಿಸೀಸ್ ಎಂಬ ಅತ್ಯಪರೂಪ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಂತಹಂತವಾಗಿ ದೇಹದ ಎಲ್ಲ ಅಂಗಾಗಗಳನ್ನೂ ಕ್ಷೀಣಿಸುವಂತೆ ಮಾಡುವ ಈ ರೋಗ ಈಗಾಗಲೇ ಇವರನ್ನು ಸಾಕಷ್ಟು ಬಳಲಿಸಿದೆ. ಮಾತನಾಡಲು, ಬಾಯಿ ತೆರೆಯಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇವರು ತೊಳಲುತ್ತಿದ್ದಾರೆ.
ಕಾಸರಗೋಡು: ತಮಗಿರುವ ಮಿತಿಗಳನ್ನು ಹಿಂದೇಟು ಹಾಕಿಸಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ 1,200ರಲ್ಲಿ 1,133 ಅಂಕಗಳಿಸಿರುವ ಆಶ್ರಯ್ ಕುಮಾರ್ ಇತರರಿಗೆ ಮಾದರಿಯಾಗಿದ್ದಾರೆ.
ಆಶ್ರಯ್ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ವಿಜ್ಞಾನ ಇವರ ಪ್ರಧಾನ ಕಲಿಕಾ ವಿಷಯವಾಗಿದೆ. ರೋಗಬಾಧೆಯ ಪರಿಣಾಮ ಕೆಲವು ತಿಂಗಳು ಮಾತ್ರ ಶಾಲೆಗೆ ತೆರಳಲು ಇವರಿಗೆ ಸಾಧ್ಯವಾಗಿತ್ತು. ಮನೆಯಲ್ಲಿ ಕುಳಿತು ಇವರು ನಡೆಸಿದ ಅಹೋರಾತ್ರಿ ಕಲಿಕೆಯ ಹಿನ್ನೆಲೆಯಲ್ಲಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ನಾಡಿಗೆ ಅಭಿಮಾನ ತಂದಿದ್ದಾರೆ. ಎಸ್.ಎಸ್.ಎಲ್.ಸಿ.ಯಲ್ಲೂ ಇವರು ಎಲ್ಲ ವಿಷಯಗಳಲ್ಲೂ “ಎ’ ಶ್ರೇಣಿ ಪಡೆದಿದ್ದರು. ವಿಜ್ಞಾನದಲ್ಲಿ ಈಗಾಗಲೇ ಇವರು ತಮ್ಮ ನೈಪುಣ್ಯವನ್ನು ಖಚಿತಪಡಿಸಿದ್ದಾರೆ.
ಐರಿಶ್ ವಿಜ್ಞಾನ ಮೇಳದಲ್ಲಿ
ರಾಜ್ಯದ ಪ್ರತಿನಿಧಿ
ದೇಶದ ಅತಿ ಶ್ರೇಷ್ಠ ವಿಜ್ಞಾನ ಮೇಳಗಳಲ್ಲಿ ಒಂದಾದ ಐರಿಶ್ ವಿಜ್ಞಾನ ಮೇಳದಲ್ಲಿ ಎರಡು ಬಾರಿ ರಾಜ್ಯದ ಪ್ರತಿನಿ ಧಿಯಾಗಿ ಭಾಗವಹಿಸಿ ಸೈ ಎನಿಸಿದ್ದಾರೆ. 2018ರಲ್ಲಿ ನಡೆದಿದ್ದ ಐರಿಶ್ ವಿಜ್ಞಾನ ಮೇಳದಲ್ಲಿ ಆಯ್ಕೆಗೊಂಡಿದ್ದ ಮೂರು ಪ್ರಬಂಧಗಳಲ್ಲಿ ಒಂದು ಇವರದಾಗಿತ್ತು. ಎಂಡೋಸಲಾ #ನ್ ಸಂತ್ರಸ್ತ ಮಕ್ಕಳ ಉದರದಲ್ಲಿ ಮೈಕ್ರೋ ಆರ್ಗನೈಸಂನ ಕುರಿತು ಇವರು ಅಂದು ಪ್ರಬಂಧ ರಚಿಸಿ, ಮಂಡಿಸಿದ್ದರು.
ಕೂಲಿಕಾರ್ಮಿಕ ರವೀಂದ್ರನ್-ದೀಪಾ ದಂಪತಿಯ ಎರಡನೇ ಮಗ ಈ ಆಶ್ರಯ್. ಬಾಲ್ಯದಿಂದಲೇ ಶಿಕ್ಷಣದಲ್ಲಿ ಅಪಾರ ಚುರುಕುತನ ಹೊಂದಿದ್ದರು. ರವೀಂದ್ರನ್ ಅವರ ಅಕಾಲಿಕ ಮರಣದ ನಂತರ ಕೊಳತ್ತೂರು ಗ್ರಾಮ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿರುವ ದೀಪಾ ಅವರ ಅಲ್ಪ ವೇತನವೇ ಈ ಮನೆಗೆ ಆಧಾರವಾಗಿದೆ. ನರ್ಸಿಂಗ್ ಕಲಿಕೆ ನಡೆಸುತ್ತಿರುವ ಅಣ್ಣ ಮತ್ತು ಹತ್ತನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ತಮ್ಮನೂ ಆಶ್ರಯ್‌ಗೆ ಇದ್ದಾರೆ.
ಬೆಳಗ್ಗೆ 5 ರಿಂದ 7 ಗಂಟೆ ವರೆಗೆ , ರಾತ್ರಿ 7 ರಿಂದ 11 ಗಂಟೆ ವರೆಗೆ ಇವರು ಕಲಿಕೆ ನಡೆಸುತ್ತಾರೆ. ತಮ್ಮ ಕಲಿಕೆ ಅತ್ಯಧಿ ಕ ಪ್ರೋತ್ಸಾಹ ನೀಡುತ್ತಿರುವ ತಮ್ಮ ತಾಯಿ, ಕೇಂದ್ರ ವಿವಿಯ ಸಹಾಯಕ ಪ್ರಾಚಾರ್ಯ ಟೋನಿ ಗ್ರೇಸ್ ಮತ್ತು ಶಾಲಾ ಪ್ರಾಂಶುಪಾಲ ನಾರಾಯಣನ್ ಅವರನ್ನು ಆಶ್ರಯ್ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಒಬ್ಬ ಉತ್ತಮ ಡಾಕ್ಟರ್ ಆಗಬೇಕು ಎಂಬುದು ಆಶ್ರಯ್ ಅವರ ಬದುಕಿನ ಕನಸಾಗಿದೆ. ನೀಟ್ ಪರೀಕ್ಷೆಯ ಫಲಿತಾಂಶ ತಮ್ಮ ಆಗ್ರಹಕ್ಕೆ ಪೂರಕವಾಗಲಿದೆ ಎಂದವರು ನಿರೀಕ್ಷಿಸಿದ್ದಾರೆ.