Advertisement

ಕಾಬೂಲ್‌ ಸನಿಹ ತಾಲಿಬಾನ್‌

01:29 AM Aug 15, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದರಾಜಧಾನಿ ಕಾಬೂಲ್‌ನಿಂದ ಕೇವಲ 10 ಕಿ.ಮೀ. ದೂರದಲ್ಲಿ ತಾಲಿಬಾನಿಗಳು ತಲುಪಿದ್ದಾರೆ. ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ರಾಜೀನಾಮೆ ಬಗ್ಗೆ ಪ್ರಸ್ತಾವ ಮಾಡಿಲ್ಲ. ಆದರೆ ಅಫ್ಘಾನಿಸ್ಥಾನದ ಭದ್ರತ ಪಡೆಗಳ ಪುನರ್‌ನಿರ್ಮಾಣವೇ ತಮ್ಮ ಆದ್ಯತೆ ಎಂದಿದ್ದಾರೆ.

Advertisement

ಶನಿವಾರ ರಾತ್ರಿ ಅಶ್ರಫ್ ಘನಿ ಅವರು ತಾಲಿಬಾನ್‌ ಉಗ್ರರ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ್ದು, ಮುಂದಿನ ಕ್ರಮಗಳಿಗಾಗಿ ತಂಡವೊಂದನ್ನು ರಚಿಸುವುದಾಗಿ ಹೇಳಿದ್ದಾರೆ. ತಾಲಿಬಾನಿಗರ ಜತೆ ಮಾತುಕತೆಯ ಹೊಣೆಯನ್ನೂ ಈ ತಂಡಕ್ಕೆ ವಹಿಸಲಾಗಿದೆ. ಶಾಂತಿಗಾಗಿ ಸೂತ್ರವೊಂದನ್ನು ರಚಿಸುವ ಸುಳಿವನ್ನೂ ಘನಿ ನೀಡಿದ್ದಾರೆ.

ಮಜರ್‌ ಎ ಶರೀಫ್ ನಗರದಲ್ಲಿ ಉಗ್ರರು ಮತ್ತು ರಕ್ಷಣ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಆದರೂ ಉಗ್ರರು ಹಿಡಿತ ಸಾಧಿಸಿದ್ದಾರೆ.

ಉಗ್ರರು ಕಾಬೂಲ್‌ ಸನಿಹ ಬರುತ್ತಿದ್ದಂತೆ ಕಚೇರಿಗಳ ಸೂಕ್ಷ್ಮ ದಾಖಲೆಗಳನ್ನು ನಾಶ ಮಾಡುವಂತೆ ಅಮೆರಿಕ ತನ್ನ ಪಡೆಗಳಿಗೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next