Advertisement

Tulu movie ಒರಿಯರ್ದೊರಿ ಅಸಲ್ ಖ್ಯಾತಿಯ ಅಶೋಕ್ ಶೆಟ್ಟಿ ನಿಧನ

09:14 PM Aug 12, 2024 | Team Udayavani |

ಉಳ್ಳಾಲ: ತುಳು ರಂಗಭೂಮಿಯ ಖ್ಯಾತ ಕಲಾವಿದ, ನಾಟಕ ರಚನಾಕಾರ ಒರಿಯರ್ದೊರಿ ಅಸಲ್‌ ತುಳು ಸಿನಿಮಾದಲ್ಲಿ ತೆಂಗಿನ ಕಾಯಿ ಕೀಳುವ ನಾಥು ಪಾತ್ರದ ಖ್ಯಾತಿಯ,ಅಶೋಕ್‌ ಶೆಟ್ಟಿ ಅಂಬ್ಲಿಮೊಗರು(53) ಅವರು ಆ.12ರಂದು ಸೋಮವಾರ ನಿಧನ ಹೊಂದಿದರು.

Advertisement

ಸೋಮವಾರ ಬೆಳಿಗ್ಗೆ ಅಂಬ್ಲಿಮೊಗರುವಿನ ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವೃತ್ತಿಪರ ಕಲಾವಿದರಾದ ಅಶೋಕ್‌ ಅವರು ವಿಜಯ ಕುಮಾರ್‌ ಕೊಡಿಯಾಲ್‌ ಬೈಲ್‌ ಅವರ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ‌ ಕಾಲದ ಕಲಾ ಸೇವೆ ಸಲ್ಲಿಸಿದ್ದರು. ನಾಟಕ,ಸಿನೆಮಾ ,ಧಾರವಾಹಿಗಳಲ್ಲಿ ನಟಿಸಿದ್ದ ಅವರು ಅನೇಕ ನಾಟಕಗಳನ್ನೂ ರಚಿಸಿದ್ದರು.ಅವರ ಅಗಲಿಕೆಗೆ ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next