ಹೊಸದಿಲ್ಲಿ: ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭೆ ಚುನಾವಣೆಯ ಬಗ್ಗೆ NDTV-CSDS ಲೋಕನೀತಿ ಸಮೀಕ್ಷೆ ನಡೆಸಿದೆ. ಇದರ ಫಲಿತಾಂಶ ಹೊರಬಿದ್ದಿದೆ. ಶೇ. 37 ರಷ್ಟು ಮತದಾರರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಸಮೀಕ್ಷೆ ಕಂಡುಕೊಂಡಿದೆ. ಇದೇ ವೇಳೆ 32 ಪ್ರತಿಶತದಷ್ಟು ಜನರು ಅಶೋಖ್ ಗೆಹ್ಲೋಟ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಖ್ಯಮಂತ್ರಿಯಾಗಬಹುದು ಎಂದು ಕೇಳಿದ ಪ್ರಶ್ನೆಗೆ ಶೇ.39ರಷ್ಟು ಜನರು ಅಶೋಕ್ ಗೆಹ್ಲೋಟ್ ಅವರಿಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಅವರ ಪ್ರತಿಸ್ಪರ್ಧಿ ಮಾಜಿ ಡಿಸಿಎಂ ಅವರಿಗೆ ಶೇ.20ರಷ್ಟು ಮಾತ್ರ ಮತ ಬಿದ್ದಿದೆ. ಉಳಿದಂತೆ ಗೋವಿಂದ್ ಸಿಂಗ್ ದೋಸ್ತಾರಾ ಮತ್ತು ಸಿಪಿ ಜೋಶಿ ಅವರಿಗೆ ತಲಾ ಶೇ.3ರಷ್ಟು ಜನರು ಒಲವು ತೋರಿದ್ದಾರೆ.
ಬಿಜೆಪಿಯಿಂದ ಯಾರು ಸಿಎಂ ಆಗಬಹುದು ಎಂದು ಕೇಳಿದ ಪ್ರಶ್ನೆಗೆ ಶೇ.27ರಷ್ಟು ಜನರು ವಸುಂಧರಾ ರಾಜೆ ಅವರಿಗೆ ಮತ ಹಾಕಿದ್ದರೆ, ಶೇ.13ರಷ್ಟು ಜನರು ಬಲಕ್ ನಾಥ್ ಅವರಿಗೆ, ಶೇ.6ರಷ್ಟು ಜನರು ಗಜೇಂದ್ರ ಸಿಂಗ್ ಶೇಖಾವತ್ ಅವರತ್ತ ಒಲವು ತೋರಿದ್ದಾರೆ.
ಇದನ್ನೂ ಓದಿ:Kidnapping: ದುಡ್ಡು ವಾಪಸ್ ಕೊಡದ್ದಕ್ಕೆ ಬೆಸ್ಕಾಂ ಗುತ್ತಿಗೆ ನೌಕರನ ಅಪಹರಣ
ಇದೇ ವೇಳೆ ಅಭಿವೃದ್ದಿಗಾಗಿ ಯಾವ ಪಕ್ಷದತ್ತ ನೋಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಶೇ.48ರಷ್ಟು ಜನರು ಬಿಜೆಪಿ ಎಂದಿದ್ದರೆ, ಶೇ.34ರಷ್ಟು ಜನರು ಕಾಂಗ್ರೆಸ್ ಎಂದಿದ್ದಾರೆ.