Advertisement

ಸಕಲ ಸರ್ಕಾರಿ ಗೌರವ, ಕೋವಿಡ್ 19 ನಿಯಮಾನುಸಾರ ಅಶೋಕ್ ಗಸ್ತಿ ಅಂತ್ಯಕ್ರಿಯೆ

02:39 PM Sep 18, 2020 | keerthan |

ರಾಯಚೂರು: ಕೋವಿಡ್-19 ನಿಂದಾಗಿ ಮೃತಪಟ್ಟ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರ ಪಾರ್ಥಿವ ಶರೀರವನ್ನು ಜಿಲ್ಲಾಡಳಿತದ ವತಿಯಿಂದ ಸಕಲ ಸರ್ಕಾರಿ ಗೌರವ ಹಾಗೂ ಕೋವಿಡ್ 19 ನಿಯಮಾವಳಿ ಪ್ರಕಾರ ತಾಲೂಕಿನ ಪೋತಗಲ್ ಗ್ರಾಮದಲ್ಲಿ ಕಾಯ್ದಿರಿಸಿದ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಶೋಕ್ ಗಸ್ತಿ ಅವರು ನಿನ್ನೆ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ನಗರಕ್ಕೆ ತರಲಾಗಿತ್ತು. ನಗರದ ಆರ್.ಟಿ.ಓ ವೃತ್ತದಲ್ಲಿ ಕೆಲ ಕ್ಷಣ ವಾಹನ ನಿಲ್ಲಿಸಿ ಅವರ ಅಭಿಮಾನಿಗಳು ಹಾಗೂ ಸಮಾಜದವರಿಂದ ಸಂತಾಪ ಸೂಚಿಸಿದರು. ನಂತರ ನೇರವಾಗಿ ಅವರ ಪಾರ್ಥಿವ ಶರೀರವು ತಾಲೂಕಿನ ಪೋತಗಲ್ ಗ್ರಾಮದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಇದನ್ನೂ ಓದಿ: ಲಾಕ್ ಡೌನ್ ಕಾರಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟ

ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಡಾ. ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಎಸ್ಪಿ ಪ್ರಕಾಶ ನಿಕ್ಕಂ, ಡಿಎಚ್ಒ ಡಾ. ರಾಮಕೃಷ್ಣ, ಸಹಾಯಕ ಆಯುಕ್ತ ಸಂತೋಷ್, ತಹಶಿಲ್ದಾರ ಡಾ. ಹಂಪಣ್ಣ, ಕುಟುಂಬದ ಸದಸ್ಯರು ಸ್ಥಳದಲ್ಲಿದ್ದರು.

Advertisement

ಅದಕ್ಕೂ ಮುಂಚೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಗಸ್ತಿ ನಿಧನಕ್ಕೆ ಬಿಜೆಪಿ ಮುಕಂಡರು ಕಾರ್ಯಕರ್ತರು ಹಾಗು ಸವಿತಾ ಸಮಾಜದವದರಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next