Advertisement
“ನೋಡಪ್ಪಾ, ನೀನು ಮಾಮೂಲಿ ಪಾತ್ರಗಳನ್ನು ಮಾಡ ಬೇಡ. ಅದನ್ನು ಮಾಡೋಕೆ ತುಂಬಾ ಜನ ಇದ್ದಾರೆ. ನೀನು ರಾಜ್‌ಕುಮಾರ್ ಅವರನ್ನು ಹೋಲುತ್ತೀಯ. ಹಾಗಾಗಿ, ಅವರ ಪಾತ್ರಗಳನ್ನೇ ಅನುಸರಿಸು. ಇದು ಹೆತ್ತವರು ಕೊಟ್ಟಪುಣ್ಯ ಅಂತ ತಿಳ್ಕೊ. ಎಷ್ಟೋ ಜನ ರಾಜಕುಮಾರರ ರೀತಿ ಇರಬೇಕು ಅಂದುಕೊಳ್ಳುತ್ತಾರೆ. ಅವರಿಗೆ ಈ ಭಾಗ್ಯ ಇಲ್ಲ. ನಿನಗೆ ಮಾತ್ರ ಒಲಿದಿದೆ – ಹೀಗೆ ಹೇಳಿ ನಮ್ಮ ಗುರುಗಳು ಬಣ್ಣ ಹಚ್ಚಿಸಿದರು. ಆವತ್ತಿಂದ ಇವತ್ತಿನ ತನಕ ರಾಜುRಮಾರರನ್ನು ಅನುಕರಿ ಸುತ್ತಾ, ಅವರು ಮಾಡಿದ ಪಾತ್ರಗಳನ್ನು ಆವಾಹಿಸಿಕೊಳ್ಳುತ್ತಾ, ಹಾವ ಭಾವ, ನಡೆ, ನುಡಿ ಎಲ್ಲದರಲ್ಲೂ ರಾಜಕುಮಾರರೇ ಆಗಿ ದ್ದೀನಿ. ಜನ, “ಓ ರಾಜ್‌ಕುಮಾರ್ ನೋಡ್ರಪ್ಪಾ’ ಅಂಥ ಚಪ್ಪಾಳೆ ತಟ್ಟುತ್ತಾರೆ. ಅಂಥ ಸಂದರ್ಭದಲ್ಲಿ ತುಂಬಾ ಖುಷಿಯಾಗುತ್ತೆ. ಮನೆಯಲ್ಲಿ ದೇವರಿಗಿಂತ ಹೆಚ್ಚು ಪೂಜಿಸುವುದು ಅಣ್ಣಾವ್ರನ್ನ. ಹೀಗಾಗಿ ನಾನು ರಾಜಕುಮಾರರ ನೆರಳಾಗಿದ್ದೇನೆ.
Related Articles
Advertisement
ಹಾಗಂತ, ರಾಜ್‌ಕುಮಾರರಿಂದ, ಅವರ ಪಾತ್ರಗಳ ಅನುಕರಣೆಯಿಂದ ನನಗೆ ತೊಂದರೆ ಆಗಿಲ್ಲ. ಬದಲಾಗಿ, ರಾಜಕುಮಾರ್ ಪಾತ್ರಗಳಿಂದಲೇ ಇಡೀ ಜಗತ್ತು ನನ್ನನ್ನು ಗುರುತಿಸುವಂತೆ ಮಾಡಿದೆ. ಆದರೆ ನನ್ನೊ ಳಗಿರುವ ಒಬ್ಬ ನಟ ಕಾಣೆಯಾಗಿಬಿಟ್ಟನಲ್ಲ ಅನ್ನೋ ಬೇಸರ ಹಾಗೇ ಇದೆ. ರಾಜ್‌ಕುಮಾರರು ರಂಗದ ಮೇಲೆ, ರಂಗದ ಹೊರಗೆ ಇಂಚಿಂಚೂ ನನ್ನೊಳಗೆ ಸೇರಿಬಿಟ್ಟಿದ್ದಾರೆ. ಇವರು ನನ್ನ ಖಾಸಗಿ ಬದುಕಿನ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂದರೆ, ಅಲ್ಲೂ ಕೂಡ ನಾನು ರಾಜುRಮಾರರ ಶಾಂತಿ ಮಂತ್ರ ಪಠಿಸುತ್ತಿರುತ್ತೇನೆ. ಸರಳ ಜೀವನ, ಉಡುಪು, ಯೋಗಾಭ್ಯಾಸ ಎಲ್ಲವೂ ಅವರಿಂದ ಕಲಿತದ್ದೇ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅವರಿಗೆ ಕೋಪ ಬರೋದು. ನನಗೂ ಹಾಗೇ ಆಗಿದೆ. ಎಷ್ಟೋ ಸಲ ಕೋಪ ಬಂದಾಗ “ಒಡಹುಟ್ಟಿದವರು’ ಚಿತ್ರದಲ್ಲಿ ರಾಜುRಮಾರರು ಮನೆ ಬಿಟ್ಟು ಹೋಗ್ತಾರಲ್ಲ. ಒಬ್ಬಂಟಿಯಾಗಿ. ಹಾಗೇ ನಾನೂ ಏಕಾಂಗಿಯಾಗುತ್ತೇನೆ. ನಂತರ ನನಗೆ ನಾನೇ ಸಮಾಧಾನ ಮಾಡಿಕೊಂಡು ಶಾಂತವಾಗುತ್ತೇನೆ. ದೇವರ ಮುಂದೆ ಕೂತಾಗಲಂತೂ ಅವರಿಗೆ ಒಳ್ಳೇ ಬುದ್ಧಿ ಕೊಡಪ್ಪಾ, ಇವರನ್ನು ಸರಿ ಮಾಡಪ್ಪ ಅಂತ ಕೇಳ್ಳೋಲ್ಲ. ಬದಲಾಗಿ ನನಗೆ ಅವರನ್ನು ಸಹಿಸುವ ಸೈರಣೆ ಕೊಡು ಅಂತ ಕೇಳಿಕೊಳ್ಳುತ್ತೇನೆ. ಹೀಗೆ ರಾಜ್‌ಕುಮಾರ್ ಅವರು ನನ್ನ ಪಾಲಿಗೆ ರಂಗದ ಮೇಲೆ ಅಭಿನಯಿಸುವ ಪಾತ್ರವಷ್ಟೇ ಆಗಿಲ್ಲ. ನನ್ನ ಬದುಕೇ ಆಗಿಹೋಗಿದ್ದಾರೆ. ಕಟ್ಟೆ ಗುರುರಾಜ್