Advertisement

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.24 ರಿಂದ ಸಂಜೆಯೂ ನಡೆಯಲಿದೆ ಆಶ್ಲೇಷ ಸೇವೆ

06:03 PM Sep 23, 2020 | sudhir |

ಸುಬ್ರಹ್ಮಣ್ಯ:  ಕುಕ್ಕೆ ದೇಗುಲದಲ್ಲಿ ಸೆ.24ರಿಂದ ಆಶ್ಲೇಷ ಸೇವೆಗಳನ್ನು ಹೆಚ್ಚಳಗೊಳಿಸಲಾಗುತ್ತಿದೆ.ಸಂಜೆ ಆಶ್ಲೇಷ ಸೇವೆ ಆರಂಬಿಸಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ತಿಳಿಸಿದ್ದಾರೆ.

Advertisement

ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸೆ.24 ರಿಂದ ಬೆಳಗ್ಗೆ ಎರಡು ಹಂತದಲ್ಲಿ ತಲಾ 75 ರಂತೆ 150.ಸಂಜೆ 75 ರಂತೆ ದಿನವೊಂದಕ್ಕೆ 225 ಸೇವೆ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.ರವಿವಾರ ಮತ್ತು ಆಶ್ಲೇಷ ನಕ್ಷತ್ರದಂತ ವಿಶೇಷ ದಿನಗಳಲ್ಲಿ 75ರ ಬದಲಿ ತಲಾ 100 ಪೂಜೆ ನೆರವೇರಿಸಲಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸೇವೆ ನಡೆಸಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಸಣ್ಣ ಮಕ್ಕಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗುತಿಲ್ಲ ಎಂದು ಹೇಳಿದರು. ಸಿಒ ರವೀಂದ್ರ ಎಂ.ಎಚ್ ಉಪಸ್ಥಿತರಿದ್ದರು. ಈ ಸಂದರ್ಭ ಅವರು ಅಭಿವ್ರದ್ದಿ ಕಾಮಗಾರಿಗಳನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next