Advertisement

ಡಿ.9ರಿಂದ ಆರಂಭವಾಗಲಿದೆ ಆ್ಯಷಸ್‌ ಕ್ರಿಕೆಟ್‌ ಸರಣಿ

07:46 AM May 13, 2021 | Team Udayavani |

ಮೆಲ್ಬರ್ನ್: ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ ಬಹುನಿರೀಕ್ಷೆಯ ಆ್ಯಷಸ್‌ ಕ್ರಿಕೆಟ್‌ ಸರಣಿ ಡಿ. 9ರಿಂದ ಬ್ರಿಸ್ಬೇನ್‌ನಲ್ಲಿ ಆರಂಭಗೊಳ್ಳಲಿದೆ. 5 ಪಂದ್ಯಗಳ ಈ ಸರಣಿ 2022ರ ಜನವರಿ ಮಧ್ಯಭಾಗದ ತನಕ ಮುಂದುವರಿಯಲಿದೆ.

Advertisement

ಈ ಕುರಿತು “ಏಜ್‌’ನಲ್ಲಿ ವರದಿಯಾಗಿದ್ದು, ವೇಳಾಪಟ್ಟಿ ಇನ್ನಷ್ಟೇ ಅಧಿಕೃತವಾಗಿ ಪ್ರಕಟಗೊಳ್ಳಬೇಕಿದೆ. ಈ  ಸರಣಿಯ ಅಂತಿಮ ಟೆಸ್ಟ್‌ ಪಂದ್ಯ ಸಿಡ್ನಿ ಬದಲು ಪರ್ತ್ ನಲ್ಲಿ ನಡೆಯಲಿದೆ. ಆಗ 1995ರ ಬಳಿಕ ಮೊದಲ ಬಾರಿಗೆ ಆ್ಯಷಸ್‌ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದ ಆತಿಥ್ಯ ಸಿಡ್ನಿಯ ಕೈತಪ್ಪಿದಂತಾಗುತ್ತದೆ.

ಇದನ್ನೂ  ಓದಿ:ಚೋಪ್ರಾ ರಚಿಸಿದ ಟೀಮ್‌ ಇಂಡಿಯಾ ತಂಡಕ್ಕೆ ಶಿಖರ್‌ ಧವನ್‌ ನಾಯಕ

ಬ್ರಿಸ್ಬೇನ್‌ ಟೆಸ್ಟ್‌ ಬಳಿಕ ಅಡಿಲೇಡ್‌ನ‌ಲ್ಲಿ ಹಗಲು-ರಾತ್ರಿ ಪಂದ್ಯ ನಡೆಯಲಿದೆ. ಮೆಲ್ಬರ್ನ್ ನಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌, ಸಿಡ್ನಿಯಲ್ಲಿ ಹೊಸವರ್ಷದ ಪಂದ್ಯ ಏರ್ಪಡಲಿದೆ

Advertisement

Udayavani is now on Telegram. Click here to join our channel and stay updated with the latest news.

Next