Advertisement
ಜಾಸನ್ ರಾಯ್ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ನಾಯಕ ಜೋ ರೂಟ್ ಮತ್ತು ರೋರಿ ಬರ್ನ್ಸ್ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 132 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿ ದರು. ಈ ಜೋಡಿಯನ್ನು ಪೀಟರ್ ಸಿಡ್ಲ್ ಮುರಿದರು. 57 ರನ್ ಗಳಿಸಿದ ರೂಟ್ ಅವರು ಸಿಡ್ಲ್ಗೆ ಬಲಿಯಾದರು. ಬರ್ನ್ಸ್ 82 ರನ್ನುಗಳಿಂದ ಆಡುತ್ತಿದ್ದಾರೆ.
ಸ್ಟುವರ್ಟ್ ಬ್ರಾಡ್ ಸಹಿತ ಇಂಗ್ಲೆಂಡಿನ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಆಗಾಗ್ಗೆ ವಿಕೆಟ್ ಕಳೆದುಕೊಳ್ಳುತ್ತ ಹೋಯಿತು. 122 ರನ್ ತಲುಪಿದಾಗ ತಂಡ 8 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಈ ಹಂತದಲ್ಲಿ ಸ್ಟೀವನ್ ಸ್ಮಿತ್ ಅವರಿಗೆ ಹೆಗಲು ಕೊಟ್ಟವರು ಪೀಟರ್ ಸಿಡ್ಲ್. 9ನೇ ವಿಕೆಟಿಗೆ ಅವರಿಬ್ಬರೂ 88 ರನ್ನುಗಳ ಜತೆಯಾಟ ನಡೆಸಿದ್ದರಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು. ಸ್ಮಿತ್ ಅಂತಿಮ ವಿಕೆಟಿಗೆ ನಥನ್ ಲಿಯೋನ್ ಜೆಎ 74 ರನ್ ಪೇರಿಸಿದರು. ಕೊನೆಯವರಾಗಿ ಔಟಾಗುವ ಮೊದಲು ಸ್ಮಿತ್ 144 ರನ್ ಹೊಡೆದಿದ್ದರು. ಅವರು 16 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 284 (ಸ್ಟೀವನ್ ಸ್ಮಿತ್ 144, ಸಿಡ್ಲ್ 44, ಬ್ರಾಡ್ 86ಕ್ಕೆ 5, ವೋಕ್ಸ್ 58ಕ್ಕೆ 3); ಇಂಗ್ಲೆಂಡ್ 2 ವಿಕೆಟಿಗೆ 170 (ಎರಡನೇ ದಿನದ ಟಿ ವಿರಾಮದ ವೇಳೆಗೆ).
Related Articles
ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸ್ಟೀವನ್ ಸ್ಮಿತ್ ಅವರು ವಿರಾಟ್ ಕೊಹ್ಲಿ ಅವರ ಅತೀ ವೇಗದ 24ನೇ ಶತಕ ದಾಖಲೆಯನ್ನು ಮುರಿದಿದ್ದಾರೆ.
Advertisement
ಸ್ಮಿತ್ ಅವರು ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗದ 24ನೇ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯದವರೇ ಆದ ಸರ್ ಡಾನ್ ಬ್ರಾಡ್ಮನ್ ಕೇವಲ 66 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ವಿರಾಟ್ ಕೊಹ್ಲಿ 123 ಇನ್ನಿಂಗ್ಸ್‌ಗಳಲ್ಲಿ 24ನೇ ಶತಕ ಸಿಡಿಸಿ ದಾಖಲೆ ಮಾಡಿದ್ದರು. ಈ ದಾಖಲೆಯನ್ನು ಇದೀಗ ಸ್ಮಿತ್ ಅಳಿಸಿ ಹಾಕಿದ್ದಾರೆ. ಸ್ಮಿತ್ ಕೇವಲ 118 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಪೂರ್ತಿಗೊಳಿಸಿದರು. ಸಚಿನ್ ತಂಡುಲ್ಕರ್ ಈ ಸಾಧನೆ ಮಾಡಲು 125 ಇನ್ನಿಂಗ್ಸ್ ತೆಗೆದುಕೊಂಡಿದ್ದರು.