Advertisement
ಹಗಲು-ರಾತ್ರಿ ಟೆಸ್ಟ್ ಪಂದ್ಯಗಳ 6 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಆಸ್ಟ್ರೇಲಿಯದ ಹೆಗ್ಗುರುತೇ ಕಾಣಿಸುತ್ತದೆ. ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಗೆದ್ದ ಹಿರಿಮೆ ಕಾಂಗರೂಗಳದು. ಇದರಲ್ಲಿ 4 ಗೆಲುವು ಅಡಿಲೇಡ್‌ನಲ್ಲೇ ಒಲಿದಿದೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ 120 ರನ್ ಗೆಲುವು ಸಾಧಿಸಿದ್ದು ಇದೇ ಅಂಗಳದಲ್ಲಿ.
ತಮ್ಮ ಮೊದಲ ಟೆಸ್ಟ್ ಕ್ಯಾಪ್ಟನ್ಸಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿರುವುದು ಆಸ್ಟ್ರೇಲಿಯದ ಪಾಲಿಗೊಂದು ಸಿಹಿ ಸುದ್ದಿ. ಆದರೆ ಮತ್ತೋರ್ವ ವೇಗಿ ಜೋಶ್ ಹ್ಯಾಝಲ್‌ವುಡ್ ಗಾಯಾಳಾಗಿ ಹೊರಬಿದ್ದಿದ್ದಾರೆ. ಈ ಸ್ಥಾನದಲ್ಲಿ ಜೇ ರಿಚರ್ಡ್‌ಸನ್ ಕಾಣಿಸಿಕೊಳ್ಳಲಿರು ವುದರಿಂದ ಹೆಚ್ಚಿನ ಆತಂಕವೇನೂ ಇಲ್ಲ.
Related Articles
Advertisement
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ವೇಳೆ ಗಾಯಾಳಾಗಿದ್ದರೂ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಮೆನೆಗೆ ತೆರಳಿದ ಅವರು ಈಗಾಗಲೇ ಅಡಿಲೇಡ್‌ಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ.
ಬ್ರಿಸ್ಬೇನ್‌ನಲ್ಲಿ 150 ರನ್ ಬಾರಿಸಿದ್ದ ಹೆಡ್ ಸೇರಿದಂತೆ ಲಬುಶೇನ್, ಸ್ಮಿತ್, ಗ್ರೀನ್ ಅವರನ್ನೊಳಗೊಂಡ ಕಾಂಗರೂ ಬ್ಯಾಟಿಂಗ್ ಬಲಿಷ್ಠವಾಗಿದೆ.
ಆ್ಯಂಡಿ, ಬ್ರಾಡ್ ಕಣಕ್ಕೆಇಂಗ್ಲೆಂಡಿಗೆ ಈ ಟೆಸ್ಟ್ ಪಂದ್ಯದಲ್ಲಿ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಸೇವೆ ಲಭಿಸುವುದರಿಂದ ಉತ್ತಮ ಹೋರಾಟ ನೀಡೀತು ಎಂಬುದೊಂದು ಲೆಕ್ಕಾಚಾರ. ಬೆನ್ ಸ್ಟೋಕ್ಸ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದಾರೆ.