Advertisement
ಎಡಗೈ ಆಟಗಾರ ಡೇವಿಡ್ ಮಾಲನ್ ಮೊದಲ ಟೆಸ್ಟ್ ಶತಕದ ಸಂಭ್ರಮವನ್ನಾಚರಿಸಿದ್ದು, 110 ರನ್ ಬಾರಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 75 ರನ್ ಮಾಡಿರುವ ಬೇರ್‌ಸ್ಟೊ ಇದ್ದಾರೆ. ಇವರಿಬ್ಬರಿಂದ ಮುರಿಯದ 5ನೇ ವಿಕೆಟಿಗೆ 174 ರನ್ ಸಂಗ್ರಹಗೊಂಡಿದೆ. ಇದು 1936ರ ಬಳಿಕ ಆ್ಯಶಸ್‌ನಲ್ಲಿ ಇಂಗ್ಲೆಂಡಿನ 5ನೇ ವಿಕೆಟಿಗೆ ಪೇರಿಸಲ್ಪಟ್ಟ ಅತ್ಯಧಿಕ ಗಳಿಕೆ. ಅಂದು ಡೆನ್ನಿಸ್ ಕಾಂಪ್ಟನ್-ಎಡ್ಡಿ ಪೇಂಟರ್ 206 ರನ್ ಒಟ್ಟುಗೂಡಿಸಿದ್ದರು.
Related Articles
ಆರಂಭಕಾರ ಅಲಸ್ಟೇರ್ ಕುಕ್ 150 ಟೆಸ್ಟ್ ಆಡಿದ ವಿಶ್ವದ 8ನೇ ಹಾಗೂ ಇಂಗ್ಲೆಂಡಿನ ಮೊದಲ ಕ್ರಿಕೆಟಿಗನೆನಿಸಿದರು. ಇದನ್ನು ಸ್ಮರಣೀಯಗೊಳಿಸಲು ಅವರಿಂದಾಗಲಿಲ್ಲ. ಆದರೆ 150 ಟೆಸ್ಟ್‌ಗಳನ್ನು ಅತಿ ಕಡಿಮೆ ಅವಧಿಯಲ್ಲಿ ಆಡಿದ ದಾಖಲೆ ಕುಕ್ ಆವರದಾಯಿತು. ಇದಕ್ಕಾಗಿ ಅವರು 11 ವರ್ಷ, 288 ದಿನ ತೆಗೆದುಕೊಂಡರು. ಉಳಿದವರೆಲ್ಲ 14ಕ್ಕೂ ಹೆಚ್ಚು ವರ್ಷ ತೆಗೆದುಕೊಂಡಿದ್ದರು.
Advertisement
ಕುಕ್ ಅತಿ ಕಡಿಮೆ ವಯಸ್ಸಿನಲ್ಲಿ 150 ಟೆಸ್ಟ್ ಆಡಿದ ದಾಖಲೆಯನ್ನೂ ಸ್ಥಾಪಿಸಿದರು (32 ವರ್ಷ, 254 ದಿನ). ಹಿಂದಿನ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಲ್ಲಿತ್ತು (35 ವರ್ಷ, 106 ದಿನ).
ಇಂಗ್ಲೆಂಡ್ 1966ರ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ ಆಡಲಾದ ಟೆಸ್ಟ್ ಪಂದ್ಯದ ಮೊದಲ ದಿನ 300 ಪ್ಲಸ್ ರನ್ ಪೇರಿಸಿತು. ಅಂದಿನ ಮೆಲ್ಬರ್ನ್ ಟೆಸ್ಟ್ ಪಂದ್ಯದ ಪ್ರಥಮ ದಿನ 5ಕ್ಕೆ 312 ರನ್ ಒಟ್ಟುಗೂಡಿಸಿತ್ತು. ಅಂದಹಾಗೆ, ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್ ಗಳಿಸಿದ ಸಂದರ್ಭದಲ್ಲಿ ಇಂಗ್ಲೆಂಡ್ ಸೋತದ್ದಿಲ್ಲ!
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-4 ವಿಕೆಟಿಗೆ 305 (ಮಾಲನ್ ಬ್ಯಾಟಿಂಗ್ 110, ಬೇರ್‌ಸ್ಟೊ ಬ್ಯಾಟಿಂಗ್ 75, ಸ್ಟೋನ್‌ಮ್ಯಾನ್ 56, ಸ್ಟಾರ್ಕ್ 79ಕ್ಕೆ 2).