Advertisement

ಆಷಾಢ ವಾರ್ಕರಿ ಪಲ್ಲಕ್ಕಿ ಸಮಾರಂಭ ಮೇ 30ರ ಬಳಿಕ ನಿರ್ಣಯ: ಅಜಿತ್‌ ಪವಾರ್‌

06:12 PM May 18, 2020 | Suhan S |

ಪುಣೆ, ಮೇ 17: ಕೋವಿಡ್ ಸ್ಥಿತಿಯನ್ನು ಪರಿಗಣಿಸಿ ಮೇ 30ರ ಅನಂತರ ಡೆಹು, ಆಳಂದಿ ಮತ್ತು ಆಷಾಢ ವಾರ್ಕರಿ ಪಲ್ಲಕ್ಕಿ ಸಮಾರಂಭಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ನಿರ್ಧಾರ ತೆಗೆದುಕೊಳ್ಳುವಾಗ ವಾರ್ಕರಿ ಪಂಥದಗಣ್ಯರೊಂದಿಗೆ ಸಭೆ ನಡೆಸಲಗುವುದು ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆಷಾಢ ವಾರ್ಕರಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಂತ ಜ್ಞಾನೇಶ್ವರ ಮಹಾರಾಜ್‌ ಮತ್ತು ಸಂತ ತುಕಾರಂ ಮಹಾರಾಜರ ಪಲ್ಲಕ್ಕಿಯು ವಾರ್ಕರಿ ಪಂಥದಲ್ಲಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ವಾರ್ಕರಿ ಅನೇಕ ವರ್ಷಗಳ ಸಂಪ್ರದಾಯವನ್ನು ಹೊಂದಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಅಪಾಯವನ್ನು ಪರಿಗಣಿಸಿ, ಮುಂದಿನ 15 ದಿನಗಳ ಅನಂತರ ವಾರ್ಕರಿ ಪಂಥದ ಗಣ್ಯರೊಡನೆ ಚರ್ಚೆ ನಡೆಸುವ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಜಿತ್‌ ಪವಾರ್‌ ಹೇಳಿದ್ದಾರೆ.

ಆಳಂದಿ ಪಂಢರಪುರ ಮತ್ತು ಡೆಹುವಿನಿಂದ ಪಂಢರಪುರ ಪಲ್ಲಕ್ಕಿ ನಿರ್ಗಮನಕ್ಕೆ ಆಲಂಡಿ ಮತ್ತು ಡೆಹು ಸಂಸ್ಥೆಗಳ ಮುಖ್ಯಸ್ಥರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಷಾಢ ವಾರಿ ಪಲ್ಲಕ್ಕಿ ಸಮಾರಂಭಕ್ಕೆ ಸಂಬಂಧಿಸಿದಂತೆ ಸೊಲ್ಲಾಪುರ, ಸತಾರಾ ಮತ್ತು ಪಂಢರಪುರದ ಗಣ್ಯರ ಅಭಿಪ್ರಾಯಗಳನ್ನು ಪರಿಗಣಿಸ ಲಾಗುವುದು. ಈ ವಿಷಯವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಆ ಬಳಿಕವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next