Advertisement
ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಆಶ್ರಯದಲ್ಲಿ ನಗರದ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿ ಸಲಾದ ಆಟಿಡೊಂಜಿ ಕೂಟ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
12 ರಾಶಿಗಳಲ್ಲಿ ದೇವರು ಪಥ ಬದ ಲಾಯಿಸುವ ಇಷ್ಟದ ರಾಶಿ ಕರ್ಕಾಟಕ ಆಷಾಢ ಮಾಸದಲ್ಲೇ ಬರುವುದು. ಈ ತಿಂಗಳು ಅಮ್ಮನ ಆರಾಧನೆಯ ತಿಂಗಳು ಎಂಬ ಕಾರಣಕ್ಕೆ ಕಲ್ಲುರ್ಟಿಯ ಆರಾಧನೆ ನಡೆಯುತ್ತಿದೆ. ಕರ್ನಾಟಕ ಸಂಕ್ರಮಣದಲ್ಲಿ ಗುಳಿಗ ದೈವ ಭೂಮಿಗೆ ಬಂದ ಸಮಯ. ಅನೇಕ ಹಬ್ಬಗಳು ಆರಂಭವಾಗುವುದೂ ಆಷಾಢ ಮಾಸದಲ್ಲಿ. ಕೃಷಿಯ ಸಂದರ್ಭದಲ್ಲಿ ಹಿರಿಯರಿಗೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಈ ತಿಂಗಳಲ್ಲಿ ಸಾಧ್ಯವಾಗದೇ ಇರುವುದರಿಂದ, ವಿಪರೀತ ಮಳೆಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗದೇ ಇರು ವುದರಿಂದ ಹಿರಿಯರು ಆಷಾಢ ಮಾಸ ದಲ್ಲಿ ಕಾರ್ಯಕ್ರಮಗಳನ್ನು ಕಡಿಮೆ ಮಾಡುತ್ತಿದ್ದರು. ಹತ್ತನಾವಧಿಯ ಬಳಿಕ ದೈವಗಳು ಘಟ್ಟ ಹತ್ತುತ್ತವೆ ಎನ್ನುವುದು ತಪ್ಪು ಕಲ್ಪನೆ ಎಂದರು.
Related Articles
ವರಮಹಾಲಕ್ಷ್ಮೀ ವ್ರತ ಎನ್ನುವುದು ತುಳುನಾಡಿನ ಆಚರಣೆಯೇ ಅಲ್ಲ ಎಂದು ಹೇಳಿದ ಅವರು, ತುಳುನಾಡಿನಲ್ಲಿ ಐಶ್ವರ್ಯ, ಮುತ್ತೈದೆ ಭಾಗ್ಯಕ್ಕಾಗಿ ಕೆಡ್ಡಸದ ಆಚರಣೆಯನ್ನು ಹಿರಿಯರು ಮಾಡಿ ಕೊಂಡು ಬಂದಿದ್ದಾರೆ. ಅಕ್ಷಯ ತೃತೀಯಾ ಎನ್ನುವುದರ ಬದಲು ಪಗ್ಗು 18 ಶುಭದಿನ ಎಂಬುದನ್ನು ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ತಹಶೀಲ್ದಾರ್ ಕುಲಾಲ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಿ.ಎಸ್. ಕುಲಾಲ್, ಇಂದು ಶಿಕ್ಷಣವಿದ್ದರೂ ಧರ್ಮದ ಸೂತ್ರ ಮರೆಯಾಗುತ್ತಿದೆ. ಸಂಘಟನೆಯ ಮೂಲಕ ರಾಜಕೀಯ, ಪ್ರತಿಭಟನೆಯ ಶಕ್ತಿ ಬೆಳೆಸಿಕೊಂಡು ಮುಂಚೂಣಿಗೆ ಬರ ಬೇಕು. ಇದಕ್ಕಾಗಿ ಸಮುದಾಯ ಸಂಘಟ ನಾತ್ಮಕವಾಗಿ ಒಂದಾಗಬೇಕು ಎಂದರು.
Advertisement
ಸಮವಸ್ತ್ರ ವಿತರಣೆ, ಸಮ್ಮಾನಈ ಸಂದರ್ಭ ಸಮುದಾಯ ಸುಮಾರು 36 ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಸಂಘದ ವತಿಯಿಂದ ಶಾಲಾ ಸಮವಸ್ತ್ರ ವಿತರಿಸಲಾಯಿತು. ನವದಂಪತಿಯನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಗಿರಿಜಾ ಧರ್ಣಪ್ಪ ಶುಭಹಾರೈಸಿದರು. ಹಿರಿ ಯರಾದ ಬಿ.ಎಸ್. ಕುಲಾಲ್ ಹಾಗೂ ಶೀನಪ್ಪ ಕುಲಾಲ್ ಚೆನ್ನೆಮಣೆ ಆಡುವ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್ ಕಬಕ ಶಾಖೆಯ ಪ್ರಬಂಧಕ ಅಶೋಕ್ ಮೂಲ್ಯ ಬ್ಯಾಂಕ್ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಉದ್ಯಮಿ ಯು. ರಾಮ ಉಪ್ಪಿನಂಗಡಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾಕೃಷ್ಣಪ್ಪ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ ಉಪಸ್ಥಿತರಿದ್ದರು.
ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ ಪ್ರಾಸ್ತಾ ವಿಸಿದ ರು. ಸೇವಾ ಸಂಘದ ಕಾರ್ಯದರ್ಶಿ ಮಹೇಶ್ ಕೆ. ಸವಣೂರು ಸ್ವಾಗತಿಸಿದರು. ಕೋಶಾಧಿಕಾರಿ ಪಿ. ಧರ್ಣಪ್ಪ ಮೂಲ್ಯ ನೆಹರೂನಗರ ವಂದಿ ಸಿದರು. ಕೃಷ್ಣ ಎಂ. ಅಳಿಕೆ ಅವರು ಕಾರ್ಯ ಕ್ರಮ ನಿರ್ವಹಿಸಿದರು. ಸಮುದಾಯದ ವಿವಿಧ ಮನೆಗಳಲ್ಲಿ ತಯಾರಿಸಿ ತಂದ 35 ಬಗೆಯ ಆಟಿ ತಿಣಿಸು ಗಳ ಸಹಭೋಜನ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಸ್ವಜಾತಿ ಬಾಂಧವರಿಗೆ ವಿವಿಧ ಸ್ಪರ್ಧೆಗಳನ್ನು ಈ ಸಂದರ್ಭ ಆಯೋಜಿಸಲಾಯಿತು.