Advertisement
ಕಳೆದ ಜನವರಿ ತಿಂಗಳಿನಿಂದ ಈವರೆಗೆ 10 ಮನವಿ ಪತ್ರಗಳನ್ನು ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸಂಘದಿಂದ ಸಲ್ಲಿಸಲಾದ ಈ ಮನವಿ ಪತ್ರಗಳಲ್ಲಿನ ವಿಷಯ ಕುರಿತು ಸ್ಪಂದಿಸಿ, ಚರ್ಚಿಸಲು ಈ ವರೆಗೂ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸದಿರುವುದು ವಿಷಾದನೀಯ ಸಂಗತಿ. ಇದೀಗ ಪರಿಸ್ಥತಿ ಇನ್ನೂ ಬಿಗಡಾಯಿಸಿದೆ. ರಾಜ್ಯದಲ್ಲಿ ಪ್ರತಿ ಆಶಾ ಕಾರ್ಯಕರ್ತೆಗೆ ಈಗಾಗಲೇ ಮಾಸಿಕ ಸರಾಸರಿ8000-9000 ರೂ. ಪ್ರೋತ್ಸಾಹ ಧನದ ವಿವಿಧ ಕೆಲಸಗಳ ಹಣವನ್ನು ಮತ್ತು ಗೌರವಧನ ಹಣವನ್ನು ಬಿಡಿಬಿಡಿಯಾಗಿ ನೀಡಲಾಗುತ್ತದೆ. ಎಲ್ಲ ಚಟುವಟಿಕೆಗಳನ್ನು ಬಿಡಿಬಿಡಿಯಾಗಿ ಪೋರ್ಟಲ್‌ನಲ್ಲಿ ದಾಖಲು ಮಾಡಬೇಕಾಗಿರುವುದರಿಂದ ಈ ಹಣ ಸರಿಯಾಗಿ ತಲುಪುತ್ತಿಲ್ಲ. ಆದ್ದರಿಂದ ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ಒಂದೇ ನಿಶ್ಚಿತ ಗೌರವಧನ 12,000 ರೂ. ಪ್ರತಿ ತಿಂಗಳು ನೀಡಬೇಕು. ಕೋವಿಡ್ ಸೋಂಕು ನಿಯಂತ್ರಿಸಲು ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಿಸುವುದು, ಸೋಂಕಿತ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡುವುದು ಮತ್ತು ಎಲ್ಲ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ವಿನಂತಿಸಿದರು.
Advertisement
12 ಸಾವಿರ ರೂ. ಗೌರವಧನ ನೀಡಲು ಮನವಿ
04:29 PM Jul 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.