Advertisement

12 ಸಾವಿರ ಗೌರವ ಧನಕ್ಕೆ ಆಗ್ರಹ

08:32 AM Jul 28, 2020 | Suhan S |

ಚಿಕ್ಕಬಳ್ಳಾಪುರ: ಪ್ರೋತ್ಸಾಹ ಹಾಗೂ ಗೌರವ ಧನ ಸೇರಿ ಒಟ್ಟಿಗೆ ತಿಂಗಳಿಗೆ ಕನಿಷ್ಠ 12 ಸಾವಿರ ರೂ. ಗೌರವ ಧನ ನೀಡ ಬೇಕೆಂದು ಆಗ್ರಹಿಸಿ ಸೋಮವಾರ ಜಿಲ್ಲೆಯ ಮಂಚೇನಹಳ್ಳಿಗೆ ಭೇಟಿ ನೀಡಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.

Advertisement

ಕಳೆದ 18 ದಿನಗಳಿಂದ 12 ಸಾವಿರ ರೂ. ಗೌರವ ಧನ ನೀಡಬೇಕು ಹಾಗೂ ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ಸುರಕ್ಷತಾ ಕಿಟ್‌ಗಳನ್ನು ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಮಂಚೇನಹಳ್ಳಿ ಹೋಬಳಿಯ ಶಾಂಪೂರ್‌ ಗ್ರಾಪಂ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಮಂಚೇನಹಳ್ಳಿಗೆ ಆಗಮಿಸಿದ್ದ ಸಚಿವರಿಗೆ ಆಶಾ ಕಾರ್ಯ ಕರ್ತೆಯರು ಸುತ್ತುವರೆದು ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದರು.

ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಯರು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ತಮ್ಮ ಬೇಡಿಕೆ ಗಳಿಗೆ ಸ್ಪಂದಿಸ ಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆ ಯರ ಸಂಘದ ಜಿಲ್ಲಾ ಮುಖಂಡರಾದ ಸರಸ್ವತಮ್ಮ, ಲಕ್ಷ್ಮೀ, ಪಂಕಜಾರೆಡ್ಡಿ, ಮಮತಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next