Advertisement

ಹಿಂದುತ್ವದ ರಕ್ಷಣೆಗೆ ಸದಾ ಬದ್ಧ: ಆಶಾ ತಿಮ್ಮಪ್ಪ ಗೌಡ

12:55 AM Apr 21, 2023 | Team Udayavani |

ಪುತ್ತೂರು: ನಗರದ ರಸ್ತೆಯುದ್ದಕ್ಕೂ ಕೇಸರಿ ಧ್ವಜ, ಬಿಜೆಪಿ ಬಾವುಟದ ಹಾರಾಟದೊಂದಿಗೆ ಸಹಸ್ರಾರು ಕಾರ್ಯಕರ್ತರ ಘೋಷಣೆ ಯೊಂದಿಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೆರವಣಿಗೆಯ ಮೂಲಕ ಸಾಗಿ ಗುರುವಾರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

Advertisement

ಬೆಳಗ್ಗೆ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಮಹಾಮಾಯಿ ದೇವಸ್ಥಾನ, ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನ, ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಂಸದ ತೇಜಸ್ವಿ ಸೂರ್ಯ, ನಟಿ ಶ್ರುತಿ ಅವರ ಉಪಸ್ಥಿತಿಯಲ್ಲಿ ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ಪ್ರಾರಂಭಗೊಂಡಿತು.

ನಾನು ಸಂಘದ ಕಾರ್ಯಕರ್ತೆ
ನಾಮಪತ್ರ ಸಲ್ಲಿಸಿದ ಬಳಿಕ ಕಿಲ್ಲೆ ಮೈದಾನದಲ್ಲಿ ನೆರೆದಿದ್ದ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಆಶಾ ತಿಮ್ಮಪ್ಪ, ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಪಕ್ಷವು ನನಗೆ ಅವಕಾಶ ನೀಡಿದೆ. ಹಿಂದೂಗಳಿಗೆ ಯಾ ವುದೇ ಸಂದರ್ಭದಲ್ಲಿಯು, ಯಾವುದೇ ಹೊತ್ತಿನಲ್ಲಿಯು ರಕ್ಷಣೆ ನೀಡಲು ನಾನು ಕಟಿಬದ್ದಳಾಗಿದ್ದೇನೆ ಎಂದರು.

50 ಸಾವಿರ ಮತಗಳ ಗೆಲುವು
ಬಿಜೆಪಿ ಯುವಮೋರ್ಚಾ ರಾ. ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ. ಪ್ರತೀ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲುವ ಮೂಲಕ ರಾಷ್ಟ್ರೀಯ ವಿಚಾರಧಾರೆಗಳಿಗೆ ಶಕ್ತಿ ತುಂಬಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈ ಬಾರಿ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಆಶಾ ತಿಮ್ಮಪ್ಪ ಅವರು 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಚಿತ್ರನಟಿ, ಬಿಜೆಪಿ ಮುಖಂಡೆ ಶ್ರುತಿ ಮಾತನಾಡಿ, ಸಮಾಜದಲ್ಲಿ ಮಹಿಳೆಗೆ ಸ್ಥಾನಮಾನ ನೀಡಿದ ಏಕೈಕ ಪಕ್ಷ ಬಿಜೆಪಿ. ತಾಯಿಯಂತೆ ಮಹಿಳೆಯರನ್ನು ಪೂಜಿಸುವ ಪಕ್ಷವೊಂದಿದ್ದರೆ ಅದು ಬಿಜೆಪಿ ಎಂದರು.

Advertisement

ವೇದಿಕೆಯಲ್ಲಿ ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಸುಳ್ಯ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ರಾಧಾಕೃಷ್ಣ ಬೂಡಿಯಾರ್‌, ಆರ್‌.ಸಿ.ನಾರಾಯಣ, ರಾಜೇಶ್‌ ಕಾವೇರಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ ವಂದಿಸಿದರು. ರಾಜೇಶ್‌ ಬನ್ನೂರು ನಿರೂಪಿಸಿದರು.

ಸಂಚಲನ ಮೂಡಿಸಿದ ತೇಜಸ್ವಿ ಸೂರ್ಯ ಭೇಟಿ
ಬಿಜೆಪಿ ಯುವ ಮೂರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಚಲನಚಿತ್ರ ನಟಿ ಶ್ರುತಿ ಪುತ್ತೂರು ಹೊರವಲಯದ ಹನುಮಗಿರಿಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದರು. ಹನುಮಗಿರಿಗೆ ತೆರಳಿ ಬಳಿಕ ಪುತ್ತೂರಿಗೆ ಆಗಮಿಸಿದರು. ಈ ಭೇಟಿ ಕಾರ್ಯಕರ್ತರಲ್ಲಿಯು ಸಂಚಲನ ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next