Advertisement

ಬೂದಿ ಮಳೆ: ಎನ್‌ಐಟಿಕೆಗೆ ಪರೀಕ್ಷೆಗಾಗಿ ಮಾದರಿ ರವಾನೆ 

09:19 AM Aug 05, 2018 | Harsha Rao |

ಉಡುಪಿ: ಉಡುಪಿ ನಗರ ಸುತ್ತಮುತ್ತ ಆ.3ರಂದು ಬೂದಿ ಮಳೆಯಾದ ಬಗ್ಗೆ ವರದಿಯಾಗುತ್ತಿದ್ದಂತೆ, ಮಾಲಿನ್ಯ ನಿಯಂತ್ರಣಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿಯ ಮಳೆ ಇದೇ ಮೊದಲ ಬಾರಿ ಆಗಿದ್ದು, ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಶನಿವಾರ ಕರಂಬಳ್ಳಿ, ದ.ಕ.ದ ಪುತ್ತೂರು ಭಾಗದಲ್ಲೂ ಬೂದಿ ಮಳೆಯಾಗಿದೆ.

Advertisement

ಇದರ ಮಾದರಿಯನ್ನು ಸುರತ್ಕಲ್‌ನ ಎನ್‌ಐಟಿಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 3-4 ದಿನಗಳಲ್ಲಿ ವರದಿ ದೊರೆಯಲಿದೆ. ಇದಕ್ಕೆ ಕಾರಣವೇನೆಂಬುದು ವರದಿ ಬಂದ ಅನಂತರವಷ್ಟೇ ಖಚಿತವಾಗಲಿದೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ತಿಳಿಸಿದ್ದಾರೆ.

ಯುಪಿಸಿಎಲ್‌ಗೆ ಸೂಚನೆ
ಉಡುಪಿ ನಗರ ಭಾಗದಿಂದ 29 ಕಿ.ಮೀ ದೂರದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್‌ ಸ್ಥಾವರ ಅದಾನಿ ಯುಪಿಸಿಎಲ್‌ನಿಂದ ಬಂದಿರುವ ಹಾರುಬೂದಿ ಇದಾಗಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಾವರದ ಕಾರ್ಯಾಚರಣೆ, ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರ ಮಾಹಿತಿ ನೀಡಲು ಸೂಚಿಸಲಾಗಿದೆ.

ವಿಜ್ಞಾನಿಗಳಿಂದ ಮಾದರಿ ಸಂಗ್ರಹ
“ಬೂದಿಯಂತಹ ಮಾದರಿಯನ್ನು ಸಂಗ್ರಹಿಸಿದ್ದೇವೆ. ಅದನ್ನು ಹೈ ವಾಲ್ಯೂಂ ಏರ್‌ ಫಿಲ್ಟರ್‌ ಸ್ಯಾಂಪ್ಲರ್‌ ನೆರವಿನಿಂದ ಪತ್ತೆ ಹಚ್ಚಲು ಸಾಧ್ಯವಿದೆ’ ಎಂದು ಮಣಿಪಾಲ ಎಂಐಟಿ ಭೂ ವಿಜ್ಞಾನ ವಿಭಾಗದ ವಿಜ್ಞಾನಿಗಳಾದ ಡಾ| ಎಚ್‌.ಎನ್‌.ಉದಯ ಶಂಕರ್‌ ಮತ್ತು ಡಾ| ಕೆ.ಬಾಲಕೃಷ್ಣ  ತಿಳಿಸಿದ್ದಾರೆ. 

ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಿದ್ಧತೆ  
ಉಡುಪಿ ಪರಿಸರದಲ್ಲಿ ಕಂಡು ಬಂದಿರುವ ಬೂದಿ/ಧೂಳು ಮಿಶ್ರಿತ ಮಳೆಯ ಕುರಿತು ಸಮಗ್ರವಾದ ತನಿಖೆ ನಡೆಸಬೇಕು ಎಂದು ಉಡುಪಿಯ ಪರಿಸಾರಸಕ್ತರ ತಂಡ ಶನಿವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next