Advertisement

ಸ್ವಾವಲಂಬಿ ಉದ್ಯೋಗಿಗಳಾಗಿ: ಪಾರ್ಥಸಾರಥಿ

06:32 PM Jul 19, 2022 | Team Udayavani |

ಬಳ್ಳಾರಿ: ಇಂದಿನ ಜಾಗತಿಕ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದು ಮುಖ್ಯವಲ್ಲ. ಇದರ ಜೊತೆಗೆ ನಿರ್ವಹಣಾ ಶಾಸ್ತ್ರದಲ್ಲಿ ವಿನೂತನ ತಂತ್ರಾಂಶಗಳುಳ್ಳ ಇತರೆ ವೃತ್ತಿಪರ ಪದವಿಗಳನ್ನು ಹೊಂದಬೇಕು ಎಂದು ಇನ್ಸ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಟ್ಯಾಕ್ಸ್‌ ಪ್ರಾಕ್ಟೀಷನರ್ ಆಫ್‌ ಇಂಡಿಯಾದ ಅಧ್ಯಕ್ಷ ಶ್ರೀಧರ ಪಾರ್ಥಸಾರಥಿ ಹೇಳಿದರು.

Advertisement

ನಗರದ ಅಲ್ಲಂ ಕರಿಬಸಪ್ಪ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್, ಎಂಬಿಎ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭ, ರ್‍ಯಾಂಕ್‌ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಂಬಿಎ ವಿದ್ಯಾರ್ಥಿಗಳು ಪದವಿಯೊಂದಿಗೆ ನಿರ್ವಹಣಾ ಶಾಸ್ತ್ರದಲ್ಲೂ ಪದವಿ ಹೊಂದುವ ಮೂಲಕ ದೇಶ ವಿದೇಶಗಳಲ್ಲಿ ಉದ್ಯಮಿಗಳಾಗಿ ಸ್ವಾವಲಂಬಿಗಳಾಗಿ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು. ವಿವಿಧ ವಲಯಗಳಲ್ಲಿ ಉನ್ನತ ವೃತ್ತಿಪರ ಸ್ಥಾನಗಳನ್ನು ಹೊಂದಿ ಸಂಸ್ಥೆಗಳ ಉತ್ತಮ ನಿರ್ವಹಣೆಯೊಂದಿಗೆ ಸಂಘದ ಮತ್ತು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಜಿಂದಾಲ್‌ ಸಂಸ್ಥೆಯ ಎಕ್ಷಿಕ್ಯೂಟಿವ್‌ ಉಪಾಧ್ಯಕ್ಷ ವಿಶ್ವನಾಥ ಸರ್ಯನಾರಾಯಣನ್‌ ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು. ವೃತ್ತಿಯಲ್ಲಿ ಶ್ರದ್ಧೆ, ಆಸಕ್ತಿ, ಕ್ರಿಯಾಶೀಲತೆಯನ್ನು ಅಳವಡಿಸಿಕೊಳ್ಳಬೇಕು. ನಿರ್ವಹಣೆ ಮತ್ತು ಆಡಳಿತ ವಿಭಾಗದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಇವೆ.

ಕಲಿಕೆಯ ಜೊತೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಭಾವ ಬೆಳಸಿಕೊಳ್ಳಬೇಕು. ಈ ಕಾರ್ಯವನ್ನು ನಾನು ಮಾಡಬಲ್ಲೆ ಎಂಬ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು
ಎಂದು ತಿಳಿಸಿದರು. ವೀ.ವಿ. ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಳಿಕ 2019-21ನೇ ಸಾಲಿಗೆ ವಿಜಯನಗರ
ಶ್ರೀ ಕೃಷ್ಣದೇವರಾಯ ವಿವಿ ಪ್ರಕಟಿಸಿರುವ ಎಲ್ಲ ಮೂರು ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ ಇವರು ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಸಣ್ಣಬಸವರಾಜ, ಆಡಳಿತ ಮಂಡಳಿ ಸದಸ್ಯ ನಾಗರಾಜ ಶರ್ಮ ವಿ, ವೈ. ರವಿ, ಬಿ.ರವೀಂದ್ರನಾಥ ಇದ್ದರು.

Advertisement

ನಿರ್ದೇಶಕ ಡಾ| ಕೆ.ಟಿ. ಗೋಪಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹ ಪ್ರಾಧ್ಯಾಪಕಿ ಡಾ| ಶೈಲಜಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ರಂಜಿತ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಕೆ. ಜ್ಯೋತಿ, ಬಿ.ದಿವಾಕರ, ಎನ್‌.ವಿದ್ಯಾಶ್ರೀ, ಬೋಧಕೇತರ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next