Advertisement
ಕ್ರೈಸ್ತ ಸಂಪ್ರದಾಯದಂತೆ ಜರುಗಿದ ಈ ಮದುವೆಯಲ್ಲಿ, ಬ್ರಿಟನ್‌ನ ಹೆಸರಾಂತ ವಸ್ತ್ರ ವಿನ್ಯಾಸಕಿ ಕ್ಲೇರ್ ವೇಯ್ ಕೆಲ್ಲರ್ ಅವರು ವಿಶೇಷವಾಗಿ ಸಿದ್ಧಪಡಿಸಿದ್ದ ವಧುವಿನ ಉಡುಗೆಯಲ್ಲಿ ಮೆಘನ್ ಕಂಗೊಳಿಸುತ್ತಿದ್ದರು. ಕೆಲ ಸಾಂಪ್ರದಾಯಿಕ ವಿಧಿವಿಧಾನಗಳ ತರುವಾಯ ಬಿಷಪ್ ಮೈಕಲ್ ಬ್ರೂಸ್ ಕರಿ ಅವರು ಹ್ಯಾರಿ-ಮೆಘನ್ ಮದುವೆಯನ್ನು ಅಧಿಕೃತವಾಗಿ ಘೋಷಿಸಿದರು. ಘೋಷಣೆ ಹೊರಬೀಳುತ್ತಿದ್ದಂತೆ ಜೋಡಿಯು ತಡ ಮಾಡದೇ ಪರಸ್ಪರ ತುಟಿಗಳಿಗೆ ಮುತ್ತಿಕ್ಕಿದರು. ಸಭಾಂಗಣದಲ್ಲಿದ್ದ ಎಲ್ಲಾ ಗಣ್ಯರು ಚಪ್ಪಾಳೆ ತಟ್ಟುತ್ತಾ ಶುಭಾಶಯ ಸಲ್ಲಿಸಿದರು. ಅಲ್ಲಿಗೆ, ಹ್ಯಾರಿ, ಮೆಘನ್ ನಡು ವಿನ ಪ್ರೇಮಕ್ಕೆ ವಿವಾಹದ ಮುದ್ರೆ ಬಿತ್ತು. ನಂತರ, ಚರ್ಚ್‌ನಿಂದ ಹೊರ ಬಂದ ಜೋಡಿ, ಸಾಂಪ್ರದಾಯಿಕ ವಾಹನದಲ್ಲಿ ತೆರಳಿತು. ವಿವಾಹ ಮುಗಿದ ನಂತರ, ಮಹಾರಾಣಿ 2ನೇ ಎಲಿಜಬೆತ್, ತಮ್ಮ ಮೊಮ್ಮಗ ಪ್ರಿನ್ಸ್ ಹ್ಯಾರಿ ಮತ್ತು ಮೆಘ ನ್‌ಗೆ ಕ್ರಮವಾಗಿ “ಡ್ನೂಕ್ ಆಫ್ ಸಸ್ಸೆಕ್ಸ್’, “ದ ಡಚೆಸ್ ಆಫ್ ಸಸ್ಸೆಕ್ಸ್’ ಎಂಬ ಸಾಂಪ್ರದಾಯಿಕ ಬಿರುದುಗಳನ್ನು ನೀಡಿದ್ದಾರೆ.
ಹ್ಯಾರಿ, ಮೆಘನ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವಿಶ್ವದ ಸಿನಿ ತಾರಾ ಸಮೂಹದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಲಿಲ್ಯಾಕ್ ಮಾದರಿಯ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದರು. ಸಮಾರಂಭದಲ್ಲಿ ಮುಂಬೈನ ಮೈನಾ ಮಹಿಳಾ ಫೌಂಡೇ ಷ ನ್‌ನ ಸಂಸ್ಥಾ ಪಕಿ ಸುಹಾನಿ ಜಲೋಟಾ ಮತ್ತು ಅವರ ಸಹಚರರಾದ ದೆಬೊರಾ ದಾಸ್, ಅರ್ಚನಾ ಆಂಬ್ರೆ ಮತ್ತು ಇಮೊಗನ್ ಮ್ಯಾನ್ಸ್ ಫೀಲ್ಡ್ , ರೇಷ್ಮೆ ಸೀರೆಯುಟ್ಟು ಓಡಾಡುತ್ತಾ ಎಲ್ಲರ ಗಮನ ಸೆಳೆದರು. ಇನ್ನು, ಯುಕೆಯಲ್ಲಿ ಬಾದಾಮಿ ಹಾಗೂ ಎಳ ನೀರಿನಿಂದ ವಿಶೇಷ ಬಿಸ್ಕತ್ ತಯಾರಿಸುವ ಪ್ರಸಿದ್ಧಿ ಪಡೆದಿರುವ ಭಾರತೀಯ ಶೆಫ್ ರೋಸಿಗಿಂಡೆ ಅವರೂ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು, ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಪೆಟಾ ಸಂಸ್ಥೆ, ಮಹಾರಾಷ್ಟ್ರದ ಪ್ರಾಣಿ ಸಂರಕ್ಷಣಾ ಧಾಮದಲ್ಲಿರುವ ಎತ್ತನ್ನು ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದೆ. ಇದಕ್ಕೆ ಮೇರಿ ಎಂದು ಹೆಸರಿಡಲಾಗಿದ್ದು, ಇದು ಹ್ಯಾರಿ ಮತ್ತು ಮೆಘನ್ ಅವರ ಹೆಸರುಗಳ ಸಂಯುಕ್ತ ರೂಪ ಎಂದು ಪೆಟಾ ಹೇಳಿದೆ.