Advertisement
ಅದರಂತೆ, ಈ ಪಾಸ್ ಹೊಂದಿದ ನಾಗರಿಕರಿಗೆ ವಾರಕ್ಕೆ ಇಂತಿಷ್ಟು ತೈಲ ಎಂದು ನಿಗದಿಪಡಿಸಲಾಗುತ್ತದೆ.
ಗೋಟಬಯಾ ಉತ್ತರಾಧಿಕಾರಿ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೇರಲು ಹಂಗಾಮಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ಪ್ರತಿಪಕ್ಷ ನಾಯಕ ಸಜಿತ್ ಪ್ರೇಮದಾಸ, ಮಾರ್ಕ್ಸಿಸ್ಟ್ ಜೆವಿಪಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಮತ್ತು ದಲ್ಲಾಸ್ ಅಲಹಪ್ಪೆರುಮಾ ಅವರು ರೇಸ್‌ನಲ್ಲಿದ್ದಾರೆ. ಇದೇ 20ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
Related Articles
ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶಕ್ಕೆ ನೆರವಾಗಲು ಈಗ ವಿದೇಶಗಳಲ್ಲಿರುವ ಲಂಕನ್ನರೇ ಮುಂದೆ ಬಂದಿದ್ದಾರೆ. ತಮ್ಮ ದೇಶ ಉಳಿಯಬೇಕು ಎಂಬ ಉದ್ದೇಶದಿಂದ ಡಾಲರ್‌ಗಳನ್ನು ರವಾನಿಸಲು ಆರಂಭಿಸಿದ್ದಾರೆ.
Advertisement
“ದಯವಿಟ್ಟು ಕಾನೂನಾತ್ಮಕ, ಅಧಿಕೃತ ಬ್ಯಾಂಕಿಂಗ್ ಮಾಧ್ಯಮಗಳ ಮೂಲಕ ಡಾಲರ್‌ಗಳನ್ನು ಕಳುಹಿಸಿ’ ಎಂದು ವಿದೇಶದಲ್ಲಿರುವ ಲಂಕನ್ನರಿಗೆ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಮನವಿ ಮಾಡಿದ ಬೆನ್ನಲ್ಲೇ, ಟ್ವಿಟರ್‌ನಲ್ಲಿ “ಶ್ರೀಲಂಕಾ ಡಾಲರ್ ಚಾಲೆಂಜ್’ ಟ್ರೆಂಡ್ ಆಗಿದೆ.
ಈಗ ಹಲವರು “ಡೆಪಾಸಿಟ್ ಸ್ಲಿಪ್’ಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಹಣ ರವಾನಿಸಿದ್ದಾಗಿ ಹೇಳಿದ್ದಾರೆ. ತಾಯ್ನಾಡಿನ ಉಳಿವಿಗಾಗಿ ಏನು ಬೇಕಿದ್ದರೂ ಮಾಡುತ್ತೇವೆ ಎಂದಿದ್ದಾರೆ.