Advertisement

Ram Temple: ಅಯೋಧ್ಯೆ ರಾಮಮಂದಿರ ನಿರ್ಮಾಣದ ವಿರುದ್ಧ ವಿಶ್ವಸಂಸ್ಥೆ ಕದ ತಟ್ಟಿದ ಪಾಕ್!

03:22 PM Jan 27, 2024 | Team Udayavani |

ಇಸ್ಲಾಮಾಬಾದ್:‌ ಇತ್ತೀಚೆಗಷ್ಟೇ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠೆ ವೈಭವಯುತವಾಗಿ ನೆರವೇರಿದ್ದು, ಏತನ್ಮಧ್ಯೆ ಭಾರತೀಯರ ಸಂತೋಷವನ್ನು ಅರಗಿಸಿಕೊಳ್ಳಲಾರದ ಪಾಕಿಸ್ತಾನ ಇದೀಗ ರಾಮಮಂದಿರ ನಿರ್ಮಾಣದ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Panaji: ಗ್ರಾಹಕರಿಗೆ ಮಾದಕ ವಸ್ತು ಸರಬರಾಜು… ಗೋವಾದಲ್ಲಿ ಮುಂಬೈ ಮೂಲದ ವ್ಯಕ್ತಿಯ ಬಂಧನ

ರಾಮಮಂದಿರದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪಾಕ್‌ ಅಳಲು!

ವಿಶ್ವಸಂಸ್ಥೆಯಲ್ಲಿ ಪಾಕ್‌ ರಾಯಭಾರಿ ಮುನೀರ್‌ ಅಕ್ರಮ್‌ ಸೇರಿದಂತೆ ಪಾಕ್‌ ಮುಖಂಡರು ಭಾರತದ ವಿರುದ್ಧ ಸದಾ ಆಕ್ಷೇಪ ಎತ್ತುತ್ತಲೇ ಇದ್ದಾರೆ. ಪಾಕಿಸ್ತಾನ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿದ್ದರು ಕೂಡಾ ಭಾರತದ ವಿಚಾರದಲ್ಲಿ ಪದೇ, ಪದೇ ಮೂಗು ತೂರಿಸುವುದನ್ನು ಮುಂದುವರಿಸಿದೆ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿರುವ ಬಗ್ಗೆ ಅಸಮಾಧಾನಗೊಂಡಿರುವ ಪಾಕಿಸ್ತಾನ ವಿಶ್ವಸಂಸ್ಥೆಗೆ ಪತ್ರ ಬರೆದಿರುವುದಾಗಿ ವರದಿ ವಿವರಿಸಿದೆ.

ಪಾಕ್‌ ಬರೆದ ಪತ್ರದಲ್ಲೇನಿದೆ?

Advertisement

ಪಾಕ್‌ ರಾಯಭಾರಿ ವಿಶ್ವಸಂಸ್ಥೆಗೆ ರವಾನಿಸಿದ ಪತ್ರದಲ್ಲಿ, ಭಾರತದ ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಪಾಕ್‌ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.

ಈ ಬೆಳವಣಿಗೆಯು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ ಹಾಗೂ ಕೋಮು ಸಾಮರಸ್ಯಕ್ಕೆ ಗಂಭೀರ ಅಪಾಯ ತಂದೊಡ್ಡಲಿದೆ ಎಂದು ಪಾಕ್‌ ಆರೋಪಿಸಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಇಸ್ಲಾಮಿಕ್‌ ಪಾರಂಪರಿಕ ತಾಣಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ತುರ್ತಾಗಿ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಪಾಕ್‌ ಆರೋಪ ಏನು?

ಭಾರತದಲ್ಲಿ ಬಾಬ್ರಿ ಮಸೀದಿಯಂತೆ ಇತರ ಮಸೀದಿಗಳು ಕೂಡಾ ಇದೇ ರೀತಿಯ ಅಪಾಯವನ್ನು ಎದುರಿಸುತ್ತಿರುವುದಾಗಿ ಆರೋಪಿಸಿರುವ ಪಾಕಿಸ್ತಾನ, ಭಾರತ ಸರ್ಕಾರ ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಇತರ ಮಸೀದಿಗಳು ಕೂಡಾ ಅಪಾಯವನ್ನು ಎದುರಿಸುತ್ತಿದೆ ಎಂದು ಪತ್ರದಲ್ಲಿ ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next