Advertisement

ಮತ್ತೆ ಅಡಕೆ ದರ ಆರೋಹಣ ಕಾಲ

12:56 PM Mar 24, 2017 | Team Udayavani |

ದಾವಣಗೆರೆ: ಅಡಕೆ ಬೆಲೆ ಇದೀಗ ಮತ್ತೆ ಏರುಮುಖವಾಗಿದೆ. ತಿಂಗಳ ಹಿಂದೆ ಕ್ವಿಂಟಾಲ್‌ ಅಡಕೆಗೆ 20ರಿಂದ 28 ಸಾವಿರದ ಆಸುಪಾಸಲ್ಲಿ ಇದ್ದ ಧಾರಣೆ ಇದೀಗ 40,000 ರೂ. ದಾಟಿದೆ. ನೆರೆಯ ಜಿಲ್ಲೆಯಲ್ಲಿ 55 ಸಾವಿರದ ಸನಿಹ ಬಂದಿದೆ. ಇದು ಅಡಕೆ ಬೆಳೆಗಾರರಲ್ಲಿ ಒಂದಿಷ್ಟು ಮಂದಹಾಸ ಬೀರುವಂತೆ ಮಾಡಿದೆ. 

Advertisement

ದಾವಣಗೆರೆ ಜಿಲ್ಲೆ ಅಡಕೆ ಬೆಳೆಯಲ್ಲೂ ಮುಂಚೂಣಿಯಲ್ಲಿದೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕು ಅಡಕೆ ನಾಡೆಂದೇ ಕರೆಯಲ್ಪಡುತ್ತದೆ. ಜಿಲ್ಲೆಯಲ್ಲಿ ಒಟ್ಟು 38,000 ಹೆಕೇrರ್‌ ಪ್ರದೇಶದಲ್ಲಿ ಅಡಕೆ ಬೆಳೆಯಲಾಗಿದೆ. ಕಳೆದ ವರ್ಷ ಕ್ವಿಂಟಾಲ್‌ ಅಡಕೆ ಬೆಲೆ ಏಕಾಏಕಿ 1 ಲಕ್ಷ ರೂ. ವರೆಗೆ ಏರಿತ್ತು. ನಂತರ ಕೆಲವೇ ದಿನಗಳಲ್ಲಿ ಅಷ್ಟೇ ವೇಗದಲ್ಲಿ ಧಾರಣೆ ಕುಸಿತ ಕಂಡಿತು.

ಇದೀಗ ಮತ್ತೆ ಏರುಮುಖ ಆಗಿರುವ ಬೆಲೆ ಮತ್ತೆ ಎಲ್ಲಿಯವರೆಗೆ ಹೋಗುತ್ತದೆಯೋ ಎಂಬುದನ್ನ ಬೆಳೆಗಾರರ ಕಾದುನೋಡುವಂತಾಗಿದೆ. ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಕ್ವಿಂಟಾಲ್‌ ಅಡಕೆ 27,000-29,000 ರೂ. ಇತ್ತು. ದಾಮೊಸ್‌ ನಲ್ಲಿ 27,000 ರೂ. ಇದ್ದರೆ, ತುಮೊRàಸ್‌ನಲ್ಲಿ 28,899 ರೂ. ಇತ್ತು. 5ನೇ ತಾರೀಕಿನವರೆಗೆ 31 ಸಾವಿರ ರೂ.ನ ಆಸುಪಾಸಲ್ಲಿ ಇತ್ತು.

ಆದರೆ, 6ರಿಂದ ಧಾರಣೆ ಏಕಾಏಕಿ 3ರಿಂದ 4 ಸಾವಿರ ರೂ.ನ ಏರಿಕೆ ಕಂಡಿತು. 6ರಂದು ರಾಶಿ ಅಡಕೆ 31,199 ರೂ.ನಿಂದ 33,333 ರೂ.  ಇತ್ತು. ಮತ್ತೆ ಎರಡು ದಿನ ಕಳೆಯುತ್ತಲೇ 32,000- 36,199 ರೂ.ಗೆ ಏರಿಕೆ ಆಯಿತು. 13ರಂದು 31,199 ರೂ.ನಿಂದ 34,729ರ ವರೆಗೆ ಧಾರಣೆ ಸಿಕ್ಕಿದೆ. ಗುರುವಾರದ ಮಾರುಕಟ್ಟೆಯಲ್ಲಿ 43,000 ರೂ. ತಲುಪಿದೆ.

ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 55,000 ರೂ.ಗೆ ಏರಿದೆ. ಬೆಲೆ ಏರಿಕೆಗೆ ಹಲವು ಕಾರಣಗಳಿವೆ ಎಂಬುದಾಗಿ ಪೇಟೆ ತಜ್ಞರು ಹೇಳುತ್ತಾರೆ. ಈ ಬಾರಿ ಭೀಕರ ಬರಗಾಲ ಇದೆ. ಇರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸಮರ್ಪಕ ನೀರಿಲ್ಲದೆ ಇರುವುದರಿಂದ ಆವಕ ಕಡಮೆಯಾಗಿದೆ. ಹೊರದೇಶದಿಂದ ಬರುತ್ತಿದ್ದ ಅಡಕೆ ಮೇಲೆ ತೆರಿಗೆ ಹೆಚ್ಚಳ ಮಾಡಲಾಗಿದೆ.

Advertisement

ಇದಲ್ಲದೆ, ಮಳೆ ಸ್ಥಿತಿ ಮುಂದೆ ಹೇಗೋ ಎಂಬ ಆತಂಕದಿಂದ ವರ್ತಕರು ಅಡಕೆ ದಾಸ್ತಾನಿಗೆ ಮುಂದಾಗುತ್ತಿದ್ದಾರೆ. ಇದಲ್ಲದೆ, ಆರ್‌ಬಿಐ ಬ್ಯಾಂಕ್‌ ವ್ಯವಹಾರದ ಮೇಲೆ ವಿಧಿಸಿದ್ದ ಎಲ್ಲಾ ಷರತ್ತುಗಳನ್ನು ತೆಗೆದಹಾಕಿದ್ದೂ ಸಹ ಒಂದು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. 

ಅದೇನೆ ಇರಲಿ, ಕಳೆದ ಬಾರಿ ಬೆಲೆ ಏರಿಕೆ ಆದಾಗ ರೈತರ ಬಳಿ ಅಡಕೆ ಇರಲಿಲ್ಲ. ಈ ಬಾರಿ ರೈತರು ಇನ್ನಿಲ್ಲದ ಸಾಹಸ ಮಾಡಿ, ಅಡಕೆ ತೋಟ ಉಳಿಸಿಕೊಂಡು ಒಂದಿಷ್ಟು ಅಡಕೆ ದಾಸ್ತಾನು ಮಾಡಿಕೊಂಡಿದ್ದಾರೆ. ಈ ಅಡಕೆಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. 

* ಪಾಟೀಲ ವೀರನಗೌಡ 

Advertisement

Udayavani is now on Telegram. Click here to join our channel and stay updated with the latest news.

Next