Advertisement
ಒಬ್ಬ ಗುರುಗಳು ತಮ್ಮ ಶಿಷ್ಯನೊಂದಿಗೆ ಸೇರಿ ಎಲ್ಲಿಗೊ ಹೋಗುತ್ತಿರುತ್ತಾರೆ. ಅವರಿಬ್ಬರು ಒಂದು ತೋಟದ ಬಳಿ ತಲುಪುತ್ತಾರೆ. ಇಬ್ಬರಿಗೂ ತುಂಬಾ ಬಾಯಾರಿಕೆ ಆಗಿದ್ದರಿಂದ ಆ ತೋಟದಲ್ಲಿದ್ದ ಒಂದು ಹಳೆಯದಾದ ಮನೆಯ ಬಳಿ ಹೋಗುತ್ತಾರೆ. ನೋಡುವುದಕ್ಕೆ ಚೆನ್ನಾಗಿ ಫಲವತ್ತತೆಯಿಂದ ಕೂಡಿದ ಭೂಮಿಯಾಗಿ ಕಂಡರೂ ಆ ತೋಟದ ಪರಿಸ್ಥಿತಿ ನೋಡಿದರೆ ಮಾತ್ರ ಅದರ ಯಜಮಾನ ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಅರ್ಥವಾಗುತ್ತದೆ. ಅಷ್ಟರಲ್ಲಿ ಆ ಮನೆಯಿಂದ ಒಬ್ಬ ವ್ಯಕ್ತಿ ಹೊರ ಗಡೆ ಬರುತ್ತಾನೆ. ಅವನೊಂದಿಗೆ ಅವನ ಹೆಂಡತಿ ಮತ್ತು ಮೂರು ಜನ ಮಕ್ಕಳು ಕೂಡ ಇರುತ್ತಾರೆ. ಅವರು ಹಳೆಯ ಬಟ್ಟೆಗಳನ್ನು ಧರಿಸಿರುತ್ತಾರೆ. ಆ ಗುರುಗಳು ಆತನೊಂದಿಗೆ “”ಕುಡಿಯುವುದಕ್ಕೆ ನೀರು ಸಿಗುತ್ತಾ?” ಎಂದು ಕೇಳುತ್ತಾರೆ. ಆಗ ಅವನು ಕುಡಿಯಲು ನೀರು ಕೊಡುತ್ತಾನೆ. ಆಗ ಗುರುಗಳು ಹೀಗೆನ್ನುತ್ತಾರೆ, “”ನಿಮ್ಮ ತೋಟ ನೋಡುವುದಕ್ಕೆ ಸುಂದರವಾಗಿ ಫಲವತ್ತತೆ ತುಂಬಿದ ಭೂಮಿಯಂತೆ ಕಾಣುತ್ತದೆ. ಆದರೆ, ಈ ತೋಟದಲ್ಲಿ ಯಾವುದೇ ರೀತಿಯ ಬೆಳೆಯನ್ನು ಬೆಳೆದಿಲ್ಲ. ಆದರೂ ನಿಮಗೆ ಹಣ ಎಲ್ಲಿಂದ ಬರುತ್ತದೆ? ನಿಮ್ಮ ಜೀವನ ಹೇಗೆ ಕಳೆಯುತ್ತೀರಿ?” ಎಂದು ಕೇಳುತ್ತಾರೆ. ಆಗ ಅವರು, “”ತಮ್ಮ ಬಳಿ ಒಂದು ಹಸು ಇದೆ, ಅದು ಹಾಲನ್ನು ಕೊಡುತ್ತದೆ. ಆ ಹಾಲನ್ನು ಮಾರಿದರೆ ಸ್ವಲ್ಪ ಹಣ ಸಿಗುತ್ತದೆ ಮತ್ತು ಉಳಿದ ಹಾಲನ್ನು ಕುಡಿದು ನಮ್ಮ ಜೀವನ ಕಳೆಯುತ್ತೇವೆ” ಎಂದು ಹೇಳುತ್ತಾನೆ.
Related Articles
Advertisement
ಆಗ ಆ ಶಿಷ್ಯ ಅವನ ಬಳಿ, “”ಇದನ್ನು ನೀವು ಮುಂಚೆಯೂ ಕೂಡ ಮಾಡಬಹು ದಿತ್ತಲ್ಲ?” ಎಂದು ಕೇಳುತ್ತಾನೆ. ಆಗ ಅವನು, “”ಹೌದು ಮಾಡಬಹುದಿತ್ತು. ಆದರೆ ಆ ಸಮಯದಲ್ಲಿ ಅಷ್ಟು ಕಷ್ಟ ಬೀಳುವ ಅಗತ್ಯ ಇಲ್ಲದಂತೆ ನಮ್ಮ ಜೀವನ ಕಳೆಯುತಿತ್ತು. ನನ್ನಲ್ಲಿ ಇಷ್ಟೊಂದು ಸಾಮರ್ಥ್ಯ ಇದೆ ಎಂದು ನನಗೆ ಯಾವಾಗಲೂ ಅನಿಸಿಲ್ಲ. ಯಾವಾಗ ನನ್ನ ಹಸು ಕಳುವಾಯಿತೋ ಆಗ ಮೈಬಗ್ಗಿಸಿ ಕೆಲಸ ಮಾಡಲೇಬೇಕಾಯಿತು. ಅದರ ಪ್ರತಿಫಲವೇ ಇದು”- ಎನ್ನುತ್ತಾನೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ತಾನು ಅರಿತುಕೊಂಡಾಗ ಮಾತ್ರ ಅವನು ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ.
ನಾವು ಸಹ ಪ್ರಸ್ತುತ ಜೀವಿಸುತ್ತಿರುವ ಈ ಜೀವನವನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿ ಮಾಡಿಕೊಳ್ಳಲು ಇಂಥ ಉದಾಹರಣೆಯಂಥ ಹಸು ತಡೆಯುತ್ತಿಲ್ಲ ತಾನೆ? ಸ್ವಲ್ಪ ಆಲೋಚನೆ ಮಾಡಿ ಹಾಗೆ ಅನಿಸಿದರೆ ಕಟ್ಟಿ ಹಾಕಿದ ಆ ಮನಸ್ಥಿತಿಯನ್ನು ಕೂಡಲೇ ತ್ಯಜಿಸಬೇಕು. ಒಂದು ವೇಳೆ ಧೀರೂಭಾಯಿ ಅಂಬಾನಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಬಿಡದೇ ಇದ್ದಿದ್ದರೆ ಈ ದಿನ ನಮಗೆ ರಿಲಾಯನ್ಸ್ ನಂತಹ ಒಂದು ಕಂಪೆನಿ ಇರುತ್ತಿರಲಿಲ್ಲ ವೇನೊ. ನಾರಾಯಣ ಮೂರ್ತಿಯವರು ಪಬ್ಲಿಕ್ ಕಂಪ್ಯೂಟರ್‌ನಲ್ಲಿ ಕೆಲಸ ಬಿಡದೇ ಇದ್ದಿದ್ದರೆ ಇವತ್ತು “ಇನ್ಫೋಸಿಸ್’ ಅನ್ನುವ ದೊಡ್ಡ ಕಂಪೆನಿ ಇರುತ್ತಿರಲಿಲ್ಲವೇನೋ! ಅವರೆಲ್ಲರೂ ಕೂಡಾ ಜೀವನದಲ್ಲಿ ದೊಡª ಗುರಿಯನ್ನು ಇಟ್ಟುಕೊಂಡಿದ್ದರು ಹಾಗೂ ತಮ್ಮ ಮನಸ್ಸು ಹೇಳಿದಂತೆ ಕೇಳಿದವರು. ಯಾರು ತಮ್ಮ ಜೀವನದ ಬಗ್ಗೆ ದೊಡª ಕನಸು ಕಾಣುತ್ತಾನೋ, ಏನಾದರೂ ಸಾಧಿಸಬೇಕು ಎನ್ನುವ ಬಲವಾದ ಕೋರಿಕೆ ಇರುತ್ತದೋ ಅವನು ಮಾತ್ರವೇ ಇಂತಹ ಹೆಜ್ಜೆ ತೆಗೆದುಕೊಳ್ಳಬಹುದು. ಅಂತಹವರು ಅಕ್ಕಪಕ್ಕದವರು ಹೇಳುವ ಮಾತುಗಳನ್ನು ಲೆಕ್ಕಿಸುವುದಿಲ್ಲ. ಕೇವಲ ಅವರು ಮಾಡಬೇಕೆಂದಿರುವುದರ ಬಗ್ಗೆಯೇ ಗಮನ ಹರಿಸುತ್ತಾರೆ. ಈ ಪ್ರಪಂಚದಲ್ಲಿ ಎಂತಹ ಶಕ್ತಿಯು ಕೂಡ ನಾವು ಸಕ್ಸಸ್ ಆಗುವುದನ್ನು ತಡೆಯಲು ಸಾಧ್ಯವೇ ಇಲ್ಲ.
ತ್ರಿಶಾಪತ್ರಿಕೋದ್ಯಮ ವಿಭಾಗ ಎಂ.ಪಿ.ಎಂ ಕಾಲೇಜು, ಕಾರ್ಕಳ