Advertisement
ರಾಷ್ಟ್ರದ ಭವಿಷ್ಯ ರೂಪುಗೊಳ್ಳುವುದು ಆಯಾ ದೇಶದ ಶೈಕ್ಷಣಿಕ ಸಾಮರ್ಥ್ಯದ ಮೂಲಕ. ಅದನ್ನು ರೂಪಿಸುವವರು ಶಿಕ್ಷಕರು. ಶಿಕ್ಷಕರ ಬಲದಿಂದಲೇ ಮಕ್ಕಳು ದೇಶದ ಕಣ್ಮಣಿಗಳಾಗುತ್ತಾರೆ. ವಿದ್ಯಾರ್ಥಿಗಳು ಸತøಜೆಗಳಾಗುತ್ತಾರೆ.ಮೊದಲು ಎÇÉಾ ತರಗತಿಗಳ ಎಲ್ಲ ವಿಷಯಗಳನ್ನು ಒಬ್ಬರೇ ಶಿಕ್ಷಕರು ನಿರ್ವಹಿಸಿ ಪಾಠಗಳನ್ನು ಹೇಳುತ್ತಿದ್ದರು. ಈಗ ಕನ್ನಡ, ಆಂಗ್ಲ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಹೀಗೆ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಶಿಕ್ಷಕರಿ¨ªಾರೆ. ಅಂತೆಯೇ ಶಿಕ್ಷಣ ಸಂಸ್ಥೆಗಳೂ ಬೆಳೆದಿವೆ. ಖಾಸಗಿ ವಲಯದಲ್ಲಿ ಅಸಂಖ್ಯಾತ ಶಿಕ್ಷಣ ಸಂಸ್ಥೆಗಳಿದ್ದರೆ, ಸರ್ಕಾರಿ ವಲಯದಲ್ಲಿ ಸರ್ಕಾರಿ ಮತ್ತು ವಸತಿ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ ಜವಾಹರ ನವೋದಯ, ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಏಕಲವ್ಯ ಮಾದರಿ ಶಾಲೆಗಳು ರಾಜ್ಯದ ಉದ್ದಗಲಕ್ಕೂ ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿವೆ. ಈ ಸಂಸ್ಥೆಗಳಲ್ಲಿ 3376 ಬೋಧಕ, ಬೋಧಕೇತರ ಹು¨ªೆಗಳನ್ನು ಅಲಂಕರಿಸಲು ಕರ್ನಾಟಕ ಲೋಕಸೇವಾ ಆಯೋಗ ಅಂತಜಾìಲದ ಮೂಲಕ ಅವಕಾಶ ಕಲ್ಪಿಸಿದೆ.
ಗ್ರೂಪ್ “ಬಿ’ನಲ್ಲಿ ಪ್ರಾಂಶುಪಾಲರಿಗೆ 309 ಹು¨ªೆಗಳಿದ್ದು, ಗ್ರೂಪ್ “ಸಿ’ನಲ್ಲಿ ಕನ್ನಡ ಭಾಷಾ ಶಿಕ್ಷಕರು – 253, ಆಂಗ್ಲ – 288, ಹಿಂದಿ – 191, ಗಣಿತ – 165, ವಿಜ್ಞಾನ – 271, ಸಮಾಜ ವಿಜ್ಞಾನ – 239, ದೈಹಿಕ ಶಿಕ್ಷಣ – 189, ಗಣಕ ಯಂತ್ರ ಶಿಕ್ಷಕರು – 226, ಪ್ರಥಮ ದರ್ಜೆ ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳು – 465, ನಿಲಯ ಪಾಲಕರು – 517, ಶುಶ್ರೂಷಕರು(ಸಾಫ್ಟ್ ನರ್ಸ್)- 263 ಒಟ್ಟು 3376 ಹು¨ªೆಗಳಿವೆ. ಇದರಲ್ಲಿ ರಾಜ್ಯ ವೃಂದ, ಹೈದರಾಬಾದ್ ಕರ್ನಾಟಕ ಮತ್ತು ಉಳಿಕೆ ಸ್ಥಾನಗಳಿಗೆ ಹು¨ªೆಗಳನ್ನು ವಿಂಗಡಿಸಲಾಗಿದೆ(ಮೊರಾರ್ಜಿ) ವಿದ್ಯಾರ್ಹತೆ
ಪ್ರಾಂಶುಪಾಲ ಹುದ್ದೆಗೆ ಎಲ್ಲ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ, ಕನಿಷ್ಠ ದ್ವಿತೀಯ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಪದವಿಯವರೆಗೆ ಕಡ್ಡಾಯ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಿರಬೇಕು.
ಮೊರಾರ್ಜಿ ವಸತಿ ಶಾಲಾ ಭಾಷಾ ಶಿಕ್ಷಕರಾಗಲು ಕಲಾ ಪದವಿಯೊಂದಿಗೆ ಆಯಾ ಭಾಷೆಗಳಲ್ಲಿ ನಾಲ್ಕು ವರ್ಷದ ಜ್ಞಾನ, ಜೊತೆಗೆ ಬಿ.ಎಡ್ ಕೋರ್ಸ್ ಪೂರ್ಣಗೊಳಿಸಿರಬೇಕು.
Related Articles
Advertisement
ಸಮಾಜ ವಿಜ್ಞಾನ ಶಿಕ್ಷಕರಾಗಲು ಆರ್ಟ್ಸ್ ಪದವಿಯೊಂದಿಗೆ ಕಲಾ ಶಾಸ್ತ್ರಗಳ ಐಚ್ಛಿಕ ಅಧ್ಯಯನ, ಬಿ.ಎಡ್ ಕೋರ್ಸ್ ಮುಗಿಸಿರಬೇಕು. ಸ್ನಾತಕೋತ್ತರ ಪದವಿಯವರೆಗೆ ಕಡ್ಡಾಯ ಭಾಷೆಯಾಗಿ ಕನ್ನಡ ಅಭ್ಯಸಿಸಿರಬೇಕು.
ಇನ್ನು ದೈಹಿಕ ಶಿಕ್ಷಣ ಶಿಕ್ಷಕ, ಗಣಕಯಂತ್ರ ಶಿಕ್ಷಕರಾಗಲು ಪದವಿಯೊಂದಿಗೆ ಆ ಕ್ಷೇತ್ರದ ಜ್ಞಾನ, ಕಡ್ಡಾಯ. ಕನ್ನಡ ಅಭ್ಯಾಸ ಸಾಕು.
ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದವಿಯೊಂದಿಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್, ನಿಲಯ ಪಾಲಕರಿಗೆ ಪದವಿಯೊಂದಿಗೆ ಬಿ.ಎಡ್ ಪದವಿ, ಶುಶ್ರೂಷಕರಿಗೆ ಬಿ.ಎಸ್ಸಿ ನರ್ಸಿಂಗ್ ಮತ್ತು ಕಡ್ಡಾಯ ಕನ್ನಡ ಅಗತ್ಯ.ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 35. ಪರಿಶಿಷ್ಟರಿಗೆ, ಅಂಗವಿಕಲರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಸಂಬಳ
ಗ್ರೂಪ್ “ಬಿ’ ಪ್ರಾಂಶುಪಾಲ ಹುದ್ದೆಗೆ 22,800- 43,200 ರೂ.
ಗ್ರೂಪ್ “ಸಿ’ ಕನ್ನಡ, ಆಂಗ್ಲ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ, ಗಣಕ ಯಂತ್ರ ಶಿಕ್ಷಕರು ಮತ್ತು ಶುಶ್ರೂಷಕರಿಗೆ 17,650- 32,000 ರೂ.
ಪ್ರಥಮ ದರ್ಜೆ ಸಹಾಯಕರು, ನಿಲಯ ಪಾಲಕರಿಗೆ 14,550- 26,700 ರೂ. ತಿಂಗಳ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು “kpscapps2.com/kries_bc2017/’ ಮೂಲಕ ಹೊಸ ರಿಜಿಸ್ಟ್ರೇಷನ್ ಆರಂಭಿಸಬೇಕು. ನಂತರ ಬರುವ ಪರದೆಯಲ್ಲಿ ಹೆಸರು, ತಂದೆ, ತಾಯಿ ಹೆಸರು, ಜನ್ಮದಿನಾಂಕ, ಆಧಾರ್ ಸಂಖ್ಯೆ, ಮೊಬೈಲ… ನಂಬರ್, ಇಮೇಲ… ವಿಳಾಸ ತುಂಬಿ ಸಬಿ¾ಟ್ ಮಾಡಿದ ಕೂಡಲೆ ನಿಮ್ಮ ಮೊಬೈಲ… ಅಥವಾ ಇಮೇಲ್ ಐಡಿಗೆ ಒಂದು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಮಾಹಿತಿ ಬರುತ್ತದೆ. ಅದನ್ನು ಬಳಸಿ ಪುಟ ತೆರೆಯಬೇಕು. ಅಲ್ಲಿ ನೀವು ಭರ್ತಿ ಮಾಡಿದ ಎಲ್ಲ ವಿವರ ಕಾಣಿಸಿಕೊಳ್ಳುತ್ತದೆ. ಅಲ್ಲಿ ಕಂಟಿನ್ಯೂ ಬಟನ್ ಒತ್ತಿದ ಕೂಡಲೆ ಅರ್ಜಿ ನಮೂನೆ ಮೂಡುತ್ತದೆ. ಪರ್ಸನಲ್ ಡಿಟೇಲ್ಸ…, ಕ್ವಾಲಿಫಿಕೇಷನ್ ಡಿಟೇಲ್ಸ…, ಅಡಿಷನಲ… ಡಿಟೇಲ್ಸ… ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಅÂಂಡ್ ಪೇಮೆಂಟ್ ಡಿಟೇಲ್ಸ… ಎಂಬ ನಾಲ್ಕು ಆಯ್ಕೆಗಳಿರುತ್ತವೆ. ಪರ್ಸನಲ್ ಡಿಟೇಲ್ಸ… ಆಯ್ಕೆ ಮಾಡಿಕೊಂಡು ಯಾವ ಹು¨ªೆಗೆ ಅರ್ಜಿ ಸಲ್ಲಿಸುವಿರಿ ಎಂಬ ಬಗ್ಗೆ ಮಾಹಿತಿ ನೀಡಬೇಕು. ಮುಂದಿನ 2 ಆಯ್ಕೆಗಳನ್ನು ಹಂತ ಹಂತವಾಗಿ ಓದಿಕೊಂಡು ವಿಷಯಗಳನ್ನು ಭರ್ತಿ ಮಾಡಬೇಕು. ಡಾಕ್ಯುಮೆಂಟ್ ಅಪ್‌ಲೋಡ್ ಅÂಂಡ್ ಪೇಮೆಂಟ್ ಡಿಟೇಲ್ಸ…ನಲ್ಲಿ ಸ್ಕ್ಯಾನ್ ಮಾಡಲಾದ ಭಾವಚಿತ್ರ, ಸಹಿ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು. ಆಯ್ಕೆಯಲ್ಲಿ ಮಾಹಿತಿ ಭರ್ತಿ ಮಾಡಿದ ಬಳಿಕ ಮತ್ತೂಮ್ಮೆ ವಿಷಯಗಳನ್ನು ಕೂಲಂಕಷವಾಗಿ ವೀಕ್ಷಿಸಿ ಸೇವ್ ಅಂಡ್ ಕಂಟಿನ್ಯೂ ಬಟನ್ ಒತ್ತಬೇಕು. ನಂತರ ಚಲನ್ ಒಂದು ಪರದೆ ಮೇಲೆ ಮೂಡುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಇ- ಪಾವತಿ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು. ಹಣ ಪಾವತಿಸಿದ ಎರಡು ದಿನಗಳ ಬಳಿಕ ಶುಲ್ಕ ಸ್ವೀಕೃತಿಯ ವಿವರಗಳನ್ನು ಪರಿಶೀಲಿಸುವುದು ಅಗತ್ಯ.
ಅರ್ಜಿ ಸಲ್ಲಿಸಲು ಜುಲೈ 24 ಕೊನೆ ದಿನವಾಗಿರುತ್ತದೆ. ಶುಲ್ಕ ಪಾವತಿಗೆ ಜುಲೈ 25 ಕಡೆ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- kpsc.kar.nic.in – ಎನ್. ಅನಂತನಾಗ್