Advertisement
ರವಿವಾರ ನಡೆದ ಆಸ್ಟ್ರೇಲಿ ಯನ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ಅವರು ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ಗೆಲುವಿನ ಮೆಟ್ಟಿ ಲೇರಿ ಟ್ರೋಫಿ ಹಿಡಿದು ಆನಂದಬಾಷ್ಪ ಸುರಿಸಿದರು. ಗೆಲುವಿನ ಅಂತರ 4-6, 6-3, 6-4.
Related Articles
ಇದು ಈ ವರ್ಷ ಅರಿನಾ ಸಬಲೆಂಕಾ ಸಾಧಿ ಸಿದ ಸತತ 11ನೇ ಗೆಲುವು. 2023ರಲ್ಲಿ ಅವರು ಕಳೆದುಕೊಂಡದ್ದು ಈ ಫೈನಲ್‌ನ ಮೊದಲ ಸೆಟ್ ಮಾತ್ರ. ಇದರೊಂದಿಗೆ ಅವರ ಸತತ 20 ಸೆಟ್‌ಗಳ ಗೆಲುವಿಗೆ ಬ್ರೇಕ್ ಬಿತ್ತಾದರೂ ಟ್ರೋಫಿ ಗೆಲ್ಲಲು ಯಾವುದೇ ಅಡ್ಡಿಯಾಗಲಿಲ್ಲ. ಮೊದಲ ಗ್ರ್ಯಾನ್‌ಸ್ಲಾಮ್ ಗೆಲುವಿನೊಂದಿಗೆ ಅವರು ಸೋಮವಾರದ ನೂತನ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ದ್ವಿತೀಯ ಸ್ಥಾನ ಅಲಂಕರಿಸಲಿದ್ದಾರೆ. ಐಗಾ ಸ್ವಿಯಾಟೆಕ್ ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
Advertisement
ಅಲೆನಾ ರಿಬಾಕಿನಾ ಅವರಿಗೆ ಇದು ದ್ವಿತೀಯ ಗ್ರ್ಯಾನ್‌ಸ್ಲಾಮ್ ಫೈನಲ್. ಅವರು 2022ರ ವಿಂಬಲ್ಡನ್ ಫೈನಲ್‌ಗೆ ಲಗ್ಗೆಯಿರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ನಾಲ್ಕನ್ನೂ ಸೋತ ರಿಬಾಕಿನಾ“ರಾಡ್ ಲೆವರ್ ಅರೇನಾ’ದಲ್ಲಿ ಸಬಲೆಂಕಾ- ರಿಬಾಕಿನಾ ನಡುವಿನ ಹೋರಾಟ 2 ಗಂಟೆ, 28 ನಿಮಿಷಗಳ ತನಕ ಸಾಗಿತು. ಇದು ಇವರಿಬ್ಬರ ನಡುವಿನ 4ನೇ ಮುಖಾಮುಖೀ ಆಗಿತ್ತು. ನಾಲ್ಕರಲ್ಲೂ ಸಬಲೆಂಕಾ ಅವರೇ ಬಲ ಪ್ರದರ್ಶನಗೈದು ಗೆದ್ದು ಬಂದರು. ಅತ್ಯಾಕರ್ಷಕ ಹಾಗೂ ಪ್ರಬಲ ಬ್ಯಾಕ್‌ಹ್ಯಾಂಡ್ ವಿನ್ನರ್ ಮೂಲಕ ಸಬಲೆಂಕಾ ಗಮನ ಸೆಳೆದರು. ಡಬಲ್ ಏಸ್‌ಗಳೊಂದಿಗೆ ಸಬಲೆಂಕಾ ತಮ್ಮ ಆಟ ಆರಂಭಿಸಿದ್ದರು. ಆದರೆ ರಿಬಾ ಕಿನಾ 3 ಏಸ್ ಸಿಡಿಸಿ ತಿರುಗೇಟು ನೀಡಿದರು. ಹೀಗಾಗಿ ಮೊದಲ ಸೆಟ್ ರಿಬಾಕಿನಾ ಪಾಲಾಯಿತು. ಇದನ್ನು ಕಳೆದುಕೊಂಡ ಬಳಿಕ ಸಬಲೆಂಕಾ ಹಿಂತಿರುಗಿ ನೋಡಲಿಲ್ಲ. ಆಸೀಸ್ ಜೋಡಿಗೆ
ಡಬಲ್ಸ್ ಪ್ರಶಸ್ತಿ
ಪುರುಷರ ಡಬಲ್ಸ್ ಪ್ರಶಸ್ತಿ ಆತಿಥೇಯ ದೇಶದ ರಿಂಕಿ ಹಿಜಿಕಾಟ-ಜೇಸನ್ ಕ್ಯುಬ್ಲಿರ್ ಪಾಲಾಗಿದೆ. ಫೈನಲ್‌ನಲ್ಲಿ ಅವರು ಹ್ಯುಗೊ ನಿಸ್-ಜಾನ್ ಝೀಲಿನ್‌ಸ್ಕಿ ವಿರುದ್ಧ 6-4, 7-6 (4)ರಿಂದ ಗೆದ್ದು ಬಂದರು. ಇದು ಇವರಿಬ್ಬರಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. ಕಳೆದ 5 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಆಸ್ಟ್ರೇಲಿಯದ ಪುರುಷ ಜೋಡಿಗೆ ಒಲಿದ 3ನೇ ಪ್ರಶಸ್ತಿಯೂ ಆಗಿದೆ.