Advertisement
ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಮರಿಕೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಕಿನ್ನಿಮಜಲಿನಲ್ಲಿ ಡಂಪಿಂಗ್ ಯಾರ್ಡ್ ಹಾಗೂ ಸ್ಮಶಾನ ಭೂಮಿ ನಿರ್ಮಾಣ ಮಾಡುವುದು ಹಾಗೂ ಅಲ್ಲಿಗೆ ರಸ್ತೆ ನಿರ್ಮಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಇದರಿಂದಾಗಿ ಗ್ರಾ.ಪಂ. ವ್ಯಾಪ್ತಿಯ ಡಂಪಿಂಗ್ ಯಾರ್ಡ್ ಮತ್ತು ಸ್ಮಶಾನ ಭೂಮಿ ಮಾಡುವ ವಿಚಾರದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಯಿತು. ಸದಸ್ಯ ಇಸ್ಮಾಯಿಲ್ ಮಲಾರು ಮಾತನಾಡಿ, ಗ್ರಾ.ಪಂ.ಗೆ ಡಂಪಿಂಗ್ ಯಾರ್ಡ್ ಅತೀ ಅಗತ್ಯ. ಇದರ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟು ಅಲ್ಲೆ ಮಾಡಿದರೆ ಉತ್ತಮ ಎಂದರು.
Related Articles
ಈ ಬಗ್ಗೆ ಮೊದಲಿಗೆ ನೊಟೀಸ್ ನೀಡುವುದು ಹಾಗೂ ಅದಕ್ಕೂ ಸ್ಪಂಧಿ ಸದಿದ್ದಲ್ಲಿ ಮನೆಯನ್ನೇ ಕ್ಯಾನ್ಸಲ್ ಮಾಡಲಾಗುವುದು. ಈಗಾಗಲೇ ಗ್ರಾ.ಪಂ.ನಿಂದ ದೊರಕುವ ಅನುದಾನದ ಕಂತು ಅರ್ಧ ಪಡಕೊಂಡವರು ಮನೆಯ ಕಾಮಗಾರಿ ಆರಂಭಿಸದೇ ಹೋದಲ್ಲಿ ಅದರ ಮೊತ್ತವನ್ನು ವಾಪಸ್ ಪಡೆಯಲಾಗುವುದು ಎಂದು ತೀರ್ಮಾನಿಸಲಾಯಿತು.
Advertisement
ವೈದ್ಯರ ಸರ್ಟಿಫಿಕೇಟ್ಕೋಳಿ ಫಾರಂ ಮಾಡುವವರು ಕಡ್ಡಾಯವಾಗಿ ವೈದ್ಯರ ಸರ್ಟಿಫಿಕೇಟ್ ಮೊದಲೇ ಪಡದುಕೊಂಡಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ವೈದ್ಯರ ಸಟಿಫಿಕೇಟ್ ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಭೆ ನಿರ್ಣಯ ಕೈಗೊಂಡಿತು. ಕೋಳಿ ತ್ಯಾಜ್ಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ. ಇದನ್ನು ಪತ್ತೆ ಹಚ್ಚುವ ಕಾರ್ಯ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಲ್ಪವಾದರೂ ಬುದ್ದಿ ಜ್ಞಾನ ಇರುವವರು ಒಟ್ಟಾರೆಯಾಗಿ ಕೋಳಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಲು ಸಾಧ್ಯವಿಲ್ಲ, ಅವರಾಗಿಯೇ ಬದಲಾಗಬೇಕಷ್ಟೇ ಎಂದು ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಹೇಳಿದರು. ಪಿಡಿಒ ಜಗದೀಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುಷಾ ಡಿ. ವರದಿ ವಾಚಿಸಿದರು. ಗುಮಾಸ್ತೆ ಮಮತಾ ಸಹಕರಿಸಿದರು. ಪರವಾನಿಗೆ ಬೇಡ
ಕಾರ್ಪಾಡಿ ಬಳಿಯ ಬಸ್ ತಂಗುದಾಣಕ್ಕೆ ತಾಂತ್ರಿಕ ಕಾರಣದಿಂದ ಬಸ್ ನಿಲ್ಲಿಸಲು ಸಂಬಂಧಪಟ್ಟ ಇಲಾಖೆ ನಿರಾಕರಿಸಿದೆ. ಇದೇ ತಂಗುದಾಣಕ್ಕೆ ಗ್ರಾ.ಪಂ. ಪರವಾನಿಗೆ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ ಗ್ರಾ.ಪಂ. ಪರವಾನಿಗೆ ನೀಡಿದರೆ ಸಮಸ್ಯೆ ಆಗಬಹುದು. ಆದ್ದರಿಂದ ಅನುಮತಿ ನೀಡುವುದು ಬೇಡ ಎಂದು ಸಭೆ ನಿರ್ಣಯ ಕೈಗೊಂಡಿತು.