ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಹಿಂದೆ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಮಾಸ್ಟರ್ ಮೈಂಡ್ ಇದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, “ಆರ್ಯನ್ ಖಾನ್ ಕ್ರೂಸ್ ಪಾರ್ಟಿಗೆ ಟಿಕೆಟ್ ಖರೀದಿಸಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್ವಾಲಾ ಅವರನ್ನು ಅಲ್ಲಿಗೆ ಕರೆತಂದರು. ಇದು ಅಪಹರಣ ಮತ್ತು ಸುಲಿಗೆಯ ವಿಚಾರವಾಗಿದೆ. ಮೋಹಿತ್ ಕಾಂಬೋಜ್ ಇದರ ಮಾಸ್ಟರ್ ಮೈಂಡ್. ಇದರಲ್ಲಿ ಸಮೀರ್ ವಾಂಖೆಡೆ ಪಾಲುದಾರ” ಎಂದು ಆರೋಪಿಸಿದ್ದಾರೆ.
ಮೊದಲ ದಿನದಿಂದ ಶಾರುಖ್ ಖಾನ್‌ಗೆ ಬೆದರಿಕೆ ಹಾಕಲಾಗಿದೆ ಎಂದು ನವಾಬ್ ಮಲಿಕ್ ಹೇಳಿಕೊಂಡಿದ್ದು, ಕ್ರೂಸ್ ಡ್ರಗ್ ಪ್ರಕರಣದಲ್ಲಿ ಸುಲಿಗೆ ಆರೋಪದಲ್ಲಿ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಹೆಸರು ಕೇಳಿಬಂದಿದ್ದರಿಂದ ಬಾಲಿವುಡ್ ಸೂಪರ್‌ಸ್ಟಾರ್ ಇನ್ನೂ ಬಹಿರಂಗವಾಗಿ ಮಾತನಾಡದಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ: ವಿಡಿಯೋ ವೈರಲ್
ಮೋಹಿತ್ ಕಾಂಬೋಜ್ ಅವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಹತ್ತಿರವಿದ್ದು, ಅಕ್ಟೋಬರ್ 7 ರ ರಾತ್ರಿ ಸ್ಮಶಾನವೊಂದರಲ್ಲಿ ಅವರಿಬ್ಬರು ಭೇಟಿಯಾದರು ಎಂದು ನವಾಬ್ ಮಲಿಕ್ ಹೇಳಿದ್ದಾರೆ.
ಮುಂಬೈ ಕ್ರೂಸ್ ಪಾರ್ಟಿಯಿಂದ ಬಂಧಿಸಿದ ನಂತರ ರಿಷಬ್ ಸಚ್‌ದೇವಾ, ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್‌ವಾಲಾ ಎಂಬ ಮೂವರನ್ನು ವಶಕ್ಕೆ ಪಡೆದ ಬಳಿ ಎನ್‌ಸಿಬಿ ಬಿಟ್ಟಿದೆ ಎಂದು ಆರೋಪಿಸಿದರು.