ಮಹಾನಗರ, ಮೇ 12: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ಮತ್ತು ಶ್ರೀ ಮೂಕಾಂಬಿಕಾ ಪ್ರಕಾಶನ ಮುಂಡೋಡು ಮಂಗಳೂರು ಇವುಗಳ ಆಶ್ರಯದಲ್ಲಿ ಮುಂಡೋಡು ಧರ್ಮಪಾಲ್ ರಾವ್ ಜಾಧವ್ ಬರೆದ ‘ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆರ್ಯ ಮರಾಠ ಕ್ಷತ್ರಿಯರು’ ಐತಿಹಾಸಿಕ ಗ್ರಂಥದ ಲೋಕಾರ್ಪಣೆನಗರದ ಸರಕಾರಿ ನೌಕರರ ಸಂಘದ ಕರಾವಳಿ ಸಭಾ ಭವನದಲ್ಲಿ ರವಿವಾರ ನಡೆಯಿತು.
ಇದೇ ವೇಳೆ ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಆರ್ಯ ಮರಾಠ ಕ್ಷತ್ರೀಯರ ಸಾಹಸಗಳು ಮುಂದಿನ ತಲೆಮಾರಿಗೆ ತಿಳಿಸಬೇಕಾಗಿದೆ. ಈಗೇನಿದ್ದರೂ ಮೊಬೈಲು ಯುಗವಾಗಿದ್ದು, ದೇಶದ ಏಳಿಗೆಗಾಗಿ ಹೋರಾಡಿದ ವ್ಯಕ್ತಿಗಳ ಬಗ್ಗೆ ದಾಖಲೀಕರಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ಮತ್ತು ಕ್ಷತ್ರಿಯ ಮರಾಠ ಪತ್ರಿಕೆಯ ವತಿಯಿಂದ ಸಾಹಿತಿ ಮುಂಡೋಡು ಧರ್ಮಪಾಲ್ ರಾವ್ ಜಾದವ್ ಅವರಿಗೆ ‘ಸಾಹಿತ್ಯ ರತ್ನ ಪ್ರಶಸ್ತಿ’ ಪ್ರಧಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆ.ಕೆ.ಎಂ.ಪಿ. ಬೆಂಗಳೂರು ಉಪಾಧ್ಯಕ್ಷ ಸುರೇಶ್ ರಾವ್ ಕೆ. ಲಾಡ್, ಕೆ.ಕೆ.ಎಂ.ಪಿ. ಬೆಂಗಳೂರು ಸಲಹೆಗಾರ ಸು. ವಿಠಲ್ ರಾವ್ ಗಾಯಕ್ವಾಡ್, ಕೆ.ಕೆ.ಎಂ.ಪಿ. ದ.ಕ. ಜಿಲ್ಲಾ ಘಟಕ ಸ್ಥಾಪಕಾಧ್ಯಕ್ಷ ಬಿ. ತಾನೋಜಿ ರಾವ್. ಬೇಕಲ್, ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಟಿ. ಸಂಜೀವ ರಾವ್ ಸಿಂಧ್ಯಾ, ಕೆ.ಕೆ.ಎಂ.ಪಿ. ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ಸುರೇಶ್ ರಾವ್ ಕರ್ಮೋರೆ, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ಎ. ಬಹುಮಾನ್, ಶ್ರೀ ಮೂಕಾಂಬಿಕಾ ಪ್ರಕಾಶನ ಮುಂಡೋಡು ಸಂಪಾದಕಿ ಮತ್ತು ಪ್ರಕಾಶಿಕಾ ಸರೋಜಾಪಾಲ್ ಜಾಧವ್ ಮುಂಡೋಡು ಮತ್ತಿತರರಿದ್ದರು.
ನಿಧಿ ಜಾಧವ್ ಪ್ರಾರ್ಥಿಸಿ, ಉಪನ್ಯಾಸಕಿ ಸುನೀತಾ ಗುರುರಾಜ್ ಸ್ವಾಗತಿಸಿದರು.