ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇಂದು ಗುರುವಾರ 50 ವರ್ಷ ತುಂಬಿತು.
ಕೇಜ್ರಿ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅನೇಕ ರಾಜಕಾರಣಿಗಳು ಅವರಿಗೆ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.
‘ನಿಮಗೆ ದೇವರು ದೀರ್ಘ ಆಯುರಾರೋಗ್ಯ ಭಾಗ್ಯ ಕರುಣಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. “ಥ್ಯಾಂಕ್ಯೂ ಸೋ ಮಚ್ ಸರ್” ಎಂದು ಕೇಜ್ರಿವಾಲ್ ಟ್ವಿಟರ್‌ನಲ್ಲೇ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.
ಕೇಜ್ರಿವಾಲ್ ಅವರಿಗೆ ಜನ್ಮದಿನದ ಶುಭಾಶಯ ಹೇಳಿರುವ ರಾಜಕೀಯ ನಾಯಕರಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲ ಕೂಡ ಸೇರಿದ್ದಾರೆ. ನಿಮ್ಮಿಂದ ದೇಶಕ್ಕೆ ಇನ್ನಷ್ಟು ವರ್ಷಗಳ ಸೇವೆ ಲಭಿಸಲಿ ಎಂದು ಉಮರ್ ಅಬ್ದುಲ್ಲ ಹೇಳಿದ್ದಾರೆ.