ಹೊಸದಿಲ್ಲಿ: ಲೋಕಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿ ಸುವುದಕ್ಕಾಗಿ ಮಾತ್ರವೇ ನಾವು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಅದು ಶಾಶ್ವತ ದೋಸ್ತಿಯಲ್ಲ ಎಂದು ಆಮ್‌ಆದ್ಮಿ ಪಾರ್ಟಿ ವರಿಷ್ಠ, ದಿಲ್ಲಿ ಮುಖ್ಯಮಂತ್ರಿ ಅರ ವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅವರ ಹೇಳಿಕೆ ಇಂಡಿಯಾ ಮೈತ್ರಿಕೂಟಕ್ಕೆ ಆಘಾತ ಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಜೂನ್ 4ಕ್ಕೆ ಅತಿದೊಡ್ಡ ಆಶ್ಚರ್ಯ ಎದುರಾಗಲಿದ್ದು, ಇಂಡಿಯಾ ಕೂಟವು ಸರಕಾರವನ್ನು ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಜತೆಗೆ ಆಪ್ ಶಾಶ್ವತ ಮದುವೆ ಮಾಡಿಕೊಂಡಿಲ್ಲ.
ಸದ್ಯಕ್ಕೆ ಬಿಜೆಪಿಯನ್ನು ಸೋಲಿಸುವುದು, ಸರ್ವಾಧಿಕಾರ ಮತ್ತು ಗೂಂಡಾಗಿರಿಗೆ ಅಂತ್ಯ ಹಾಡುವುದು ನಮ್ಮ ಗುರಿಯಾಗಿದೆ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ಮತ್ತೆ ಜೈಲಿಗೆ ಹೋಗುವುದು ದೊಡ್ಡ ವಿಷಯವಲ್ಲ. ದೇಶದ ಭವಿಷ್ಯವೇ ಅಪಾಯದಲ್ಲಿದೆ. ಅವರು ಎಷ್ಟು ದಿನ ನನ್ನನ್ನು ಜೈಲಿನಲ್ಲಿಟ್ಟುಕೊಳ್ಳುತ್ತಾರೋ ಇಟ್ಟು ಕೊಳ್ಳಲಿ. ಆದರೆ ನಾನು ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವು ದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಪಕ್ಷಗಳ ಪ್ರಮುಖ ನಾಯಕರನ್ನು ಜೈಲಿಗೆ ಹಾಕುವ ಹುನ್ನಾರವನ್ನು ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು. ಪುತಿನ್ ಆಡಳಿತದಲ್ಲಿರುವ ರಷ್ಯಾ ಸ್ಥಿತಿಯೇ ಭಾರತಕ್ಕೂ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.
ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರಿಗೆ ಬಿಜೆಪಿ ಸೇರುವಂತೆ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭವಿಷ್ಯ ತೂಗುಯ್ನಾಲೆಯಲ್ಲಿದೆ. ಇದನ್ನು ಬಿಜೆಪಿಯವರು ಬೇಕಾದರೆ ನಿರಾ ಕರಿಸಲಿ ನೋಡೋಣ ಎಂದು ಕೇಜ್ರಿವಾಲ್ ಸವಾಲು ಹೇಳಿದರು.
ಕೇಜ್ರಿವಾಲ್ ಹೇಳಿದ್ದೇನು?
-ನಾನು ಮತ್ತೆ ಜೈಲಿಗೆ ಹೋಗು ವುದು ದೊಡ್ಡದಲ್ಲ. ದೇಶದ ಭವಿಷ್ಯವೇ ಅಪಾಯದಲ್ಲಿದೆ.
-3ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಪಕ್ಷ ನಾಯಕರನ್ನು ಜೈಲಿಗೆ ಹಾಕಲಿದೆ.