ನವದೆಹಲಿ: ದೇಶದಲ್ಲೇ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ ಹೆಗ್ಗಳಿಕೆ ದೆಹಲಿಗೆ ಸಲ್ಲುತ್ತದೆ ಇದರೊಂದಿದೆ ದೆಹಲಿ ದೇಶದ ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಇ-ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ವರ್ಷ ದೆಹಲಿಯಲ್ಲಿ 100 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವುದಾಗಿ ದೆಹಲಿ ಸರ್ಕಾರ ಘೋಷಿಸಿತ್ತು ಅದರಂತೆ 42 ಕಡೆಗಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಇಂದು ಉದ್ಘಾಟನೆ ಮಾಡಲಾಯಿತು ಇದರೊಂದಿದೆ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಮುಂದಿನ ದಿನಗಳಲ್ಲಿ ದೆಹಲಿಯ ಉಳಿದ ಭಾಗಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಎಲೆಕ್ಟ್ರಿಕ್ ವಾಹನಗಳ ಓಡಾಟದಿಂದ ಕಳೆದ ಎಂಟು ವರ್ಷಗಳಲ್ಲಿ ದೆಹಲಿಯ ಮಾಲಿನ್ಯ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. 2014 ರಿಂದ ಮಾಲಿನ್ಯದ ಮಟ್ಟವು 30% ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
2020ರಲ್ಲಿ ನಾವು ದೇಶದ ಮೊದಲ ಇವಿ ನೀತಿಯನ್ನು ಮಾಡಿದ್ದೇವೆ. 25ರಷ್ಟು ಇವಿ ವಾಹನಗಳನ್ನು ಖರೀದಿಸುವುದು ನಮ್ಮ ಗುರಿಯಾಗಿತ್ತು. ಇಂದು ಶೇಕಡಾ 13 ರಷ್ಟು ಇವಿ ವಾಹನಗಳನ್ನು ದೆಹಲಿಯಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಹೇಳಿದರು.
ದೆಹಲಿ ಸರ್ಕಾರವು ನಗರದ ಪ್ರತಿಯೊಂದು ಭಾಗದಲ್ಲಿ ಸಮರ್ಥವಾದ ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ. ಪ್ರತಿ ಯೂನಿಟ್‌ಗೆ ಚಾರ್ಜ್ ಮಾಡುವ ವೆಚ್ಚವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ಕಡಿಮೆಯಿರಲಿದೆ ಮತ್ತು ಜನರು ಇವಿ ಚಾರ್ಜಿಂಗ್‌ಗೆ ಪ್ರತಿ ಯೂನಿಟ್‌ಗೆ ಮೂರು ರೂಪಾಯಿಗಳಿಗಿಂತ ಕಡಿಮೆ ಖರ್ಚು ಬೀಳಲಿದೆ ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ರಾಜಧಾನಿಯಲ್ಲಿ ಮಾರಾಟವಾದ ಒಟ್ಟು ವಾಹನಗಳಲ್ಲಿ ಇ-ವಾಹನಗಳು ಶೇಕಡಾ 16.7 ರಷ್ಟಿದೆ, ಇದು ದೇಶದಲ್ಲೇ ಅತಿ ಹೆಚ್ಚು. ಎಲ್ಲಾ ಚಾರ್ಜಿಂಗ್ ಕೇಂದ್ರಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯನ್ನು ಆಧರಿಸಿವೆ ಎಂದು ಹೇಳಿದರು.
ಇದನ್ನೂ ಓದಿ: ಲಿಥಿಯಂ ಐಯಾನ್ ಬ್ಯಾಟರಿಯ ಸೃಷ್ಟಿಕರ್ತ, ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಬಿ ಗುಡೆನಫ್ ನಿಧನ