Advertisement

ಕೇಜ್ರಿವಾಲ್‌ ಅಬಕಾರಿ ಹಗರಣದ ಕಿಂಗ್‌ಪಿನ್‌- BJP ಗಂಭೀರ ಆರೋಪ

06:03 PM Apr 15, 2023 | Team Udayavani |

ನವದೆಹಲಿ: ದೆಹಲಿಯ ಆಮ್‌ಆದ್ಮಿ ಸರ್ಕಾರವನ್ನು ಅಬಕಾರಿ ಹಗರಣ ಬೆಂಬಿಡದಂತೆ ಕಾಡತೊಡಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ  ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಜೈಲುಪಾಲಾಗಿದ್ದಾರೆ. ಇದೀಗ ಸ್ವತಃ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೂ ಈ ಪ್ರಕರಣ ಉರುಳಾಗುವ ಸಾಧ್ಯತೆಯಿದೆ.

Advertisement

ಈ ಕೇಸ್‌ಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ CBI ಸಮನ್ಸ್‌ ನೀಡಿದ್ದು, ಪ್ರಕರಣವೀಗ ದೆಹಲಿ ಮುಖ್ಯಮಂತ್ರಿ ಕುರ್ಚಿಯನ್ನೇ ಅಲ್ಲಾಡಿಸುವ ಹಂತ ತಲುಪಿದೆ. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರದ ವಿರುದ್ಧ ವಿಪಕ್ಷಗಳು  ಮುಗಿಬಿದ್ದಿವೆ.

CBI ಸಮನ್ಸ್‌ ಬಳಿಕ ಆಮ್‌ ಆದ್ಮಿ ಪಕ್ಷದ ವಿರುದ್ಧ ಕಿಡಿ ಕಾರುತ್ತಿರುವ ಬಿಜೆಪಿ, ಶನಿವಾರ ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೇ ಕಿಂಗ್‌ಪಿನ್‌ ಅನ್ನುವ ಮೂಲಕ ಹೊಸ ಬಾಂಬ್‌ ಸಿಡಿಸಿದೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಬಿಜೆಪಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ʻಅರವಿಂದ್‌ ಕೇಜ್ರಿವಾಲ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಸತ್ಯತೆ  ಹೊರಬರಲಿದೆ. ಈ ಪರೀಕ್ಷೆಯಲ್ಲಿ ಲಿಕ್ಕರ್‌ ಹಗರಣದ ಕಿಂಗ್‌ಪಿನ್‌ ಸ್ವತಃ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಎಂಬ ವಿಚಾರವೂ ಬಹಿರಂಗವಾಗಲಿದೆʼ ಎಂದು ಹೇಳಿದ್ದಾರೆ.

ಅಲ್ಲದೆ, ಈ ಹಗರಣದ ಮೂಲಕ ಕೇಂದ್ರ ಸರ್ಕಾರ ಆಮ್‌ ಆದ್ಮಿ ಪಾರ್ಟಿಯನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ ಮಾತನಾಡಿದ ಗೌರವ್‌ ಭಾಟಿಯಾ, ʻಇದು ಗೂಬೆಕೂರಿಸುವ ಸಮಯವಲ್ಲʼ ಎಂದು ಆಪ್‌ಗೆ ಎದುರೇಟು ನೀಡಿದ್ದಾರೆ. ಸಿಬಿಐ ಸಮನ್ಸ್‌ ನೀಡಿದ ಬಳಿಕ ಅರವಿಂದ್‌ ಕೇಜ್ರಿವಾಲ್‌ ಭಯದಿಂದ ನಡುಗುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

ದೆಹಲಿ ಸಿಎಂ ಮತ್ತು ಆಮ್‌ ಆದ್ಮಿ ಪಾರ್ಟಿಗೆ ಕೆಲವು ಪ್ರಶ್ನೆಗಳನ್ನು ಇಟ್ಟಿರುವ ಬಿಜೆಪಿ, ಸಾರ್ವಜನಿಕರಿಗೆ ಸರಿಯಾದ ಉತ್ತರ ನೀಡುವಂತೆ ಒತ್ತಾಯಿಸಿದೆ. ʻನಾವು ಕೇಜ್ರಿವಾಲ್‌ ಅವರಿಗೆ 5 ಪ್ರಶ್ನೆಗಳನ್ನು ಇಟ್ಟಿದ್ದೇವೆ. ಅವರು ಅದರಲ್ಲಿ ಒಂದಕ್ಕಾದರೂ ಉತ್ತರಿಸಬೇಕು. ಆದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿಲ್ಲʼ ಎಂದು ಬಿಜೆಪಿ ಆರೋಪಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next