ನವ ದೆಹಲಿ : ಫೈಜರ್ ಮತ್ತು ಮೊಡೆರ್ನಾ ಕಂಪೆನಿಗಳು ನೇರವಾಗಿ ದೆಹಲಿ ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು(ಸೋಮವಾರ , ಮೇ 24) ಫೈಜರ್ ಹಾಗೂ ಮಾಡೆರ್ನಾ ಕಂಪೆನಿಗಳ ಆ್ಯಂಟಿ ಕೋವಿಡ್ 19 ಲಸಿಕೆಗಳನ್ನು ಆಮದು ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.
“ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ನಾವು ಲಸಿಕೆಗಳಿಗಾಗಿ ಫೈಜರ್, ಮಾಡರ್ನಾ ಕಂಪೆನಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಎರಡೂ ಕಂಪನಿಗಳು ಲಸಿಕೆಗಳನ್ನು ನೇರವಾಗಿ ನಮಗೆ ಮಾರಾಟ ಮಾಡಲು ನಿರಾಕರಿಸಿವೆ. ಉಭಯ ಕಂಪೆನಿಗಳು ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಆದಷ್ಟು ಶೀಘ್ರದಲ್ಲಿ ಲಸಿಕೆಗಳನ್ನು ಆಮದು ಮಾಡಿಕೊಂಡು ರಾಜ್ಯಗಳಿಗೆ ವಿತರಿಸುವಂತೆ ಕೇಂದ್ರಕ್ಕೆ ಅವರು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ : ಮೇ.25ರಿಂದ ಜೂ.7ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
ದೇಶದಾದ್ಯಂತ ಕೋವಿಡ್ ಸೋಂಕಿನ ಅಲೆಯ ಪರಿಣಾಮ ತುಂಬಾ ಕೆಟ್ಟದಾಗಿ ಬೀರಿರುವ ಕಾರಣ, ಸೋಂಕನ್ನು ತಡೆಗಟ್ಟಲು ಲಸಿಕೆ ನೀಡುವುದು ಕೂಡ ಹೆಚ್ಚಾಗಬೇಕು. ದೇಶದಲ್ಲಿ ಸದ್ಯಕ್ಕೆ ಲಸಿಕೆಗಳ ಕೊರತೆ ಇದೆ. ಲಸಿಕೆಗಳ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಬೇಕು.
Related Articles
ಇನ್ನು, ದೇಶದಲ್ಲಿ ಕೇಲವ ಎರಡು ಕಂಪೆನಿಗಳು ಮಾತ್ರ ಸದ್ಯಕ್ಕೆ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಆ ಕಂಪೆನಿಗಳು ತಿಂಗಳಿಗೆ ಕೇವಲ ಆರರಿಂದ ಏಳು ಕೋಟಿ ಡೋಸ್ ಗಳಷ್ಟು ಮಾತ್ರ ಲಸಿಕೆಗಳನ್ನ ತಯಾರಿಸುತ್ತಿವೆ. ಭಾರತದ ಸಧ್ಯದ ಸ್ಥಿತಿಗೆ ಅದು ಸಾಕಾಗುವುದಿಲ್ಲ. ಮತ್ತು ತಿಂಗಳಿಗೆ ಇಷ್ಟೇ ಪ್ರಮಾಣದಲ್ಲಿ ಲಸಿಕೆಗಳನ್ನು ದೇಶದಲ್ಲಿ ಉತ್ಪಾದನೆಯಾದರೇ, ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಿಸುವಾಗ ಬರೋಬ್ಬರಿ ಎರಡು ವರ್ಷಗಳು ಕಳೆಯಬಹದು. ಅಷ್ಟರೊಳಗಾಗಿ ಸೋಂಕಿನ ಮತ್ತಷ್ಟು ಅಲೆಗಳು ಬರಬಹುದು. ಕೋವಿಡ್ ನ್ನು ಮೆಟ್ಟಿ ನಿಲ್ಲಲು ಲಸಿಕೆಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಎಲ್ಲರಿಗೂ ಲಸಿಕೆ ಹಾಕಿಸುವ ಯೋಜನೆ ಕೇಂದ್ರ ಸರ್ಕಾರದ್ದಾಗಬೇಕು ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಕೇಂದ್ರ ಸರ್ಕಾರಕ್ಕೆ ದೇಶ ವಿದೇಶಗಳ ಲಸಿಕೆ ಉತ್ಪಾದಿಸುವ ಕಂಪೆನಿಗಳಿಗೆ ಭಾರತದಲ್ಲಿ ಲಸಿಕೆಯನ್ನು ತಯಾರಿಸಲು ಅನುಮತಿಸುವಂತೆ ಕೇಜ್ರಿವಾಲ್ ಕೇಳಿಕೊಂಡಿದ್ದರು.
ಇದನ್ನೂ ಓದಿ : ಎನ್ ಟಿ ಆರ್ ಜೊತೆಗಿನ ಚಿತ್ರಕ್ಕೆ ಪ್ರಶಾಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ?
ಸದ್ಯಕ್ಕೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಭಾರತವು ನೀಡುತ್ತಿದೆ.
ಫೈಜರ್ / ಬಯೋಎನ್ ಟೆಕ್ ಮತ್ತು ಮಾಡರ್ನಾ ಕೋವಿಡ್ ಲಸಿಕೆಗಳು ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್ -19 ರೂಪಾಂತರಗಳಾದ ಬಿ .1.617 ಮತ್ತು ಬಿ .1.618 ಗಳಿಂದ ರಕ್ಷಿಸುತ್ತವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಏತನ್ಮಧ್ಯೆ, ದೇಶದಲ್ಲಿ ನೀಡಲಾಗುತ್ತಿರುವ ಲಸಿಕೆಗಳ ಪ್ರಮಾಣವು ಸೋಮವಾರ(ಮೇ. 24) ಬೆಳಿಗ್ಗೆಯ ಹೊತ್ತಿಗೆ 19.60 ಕೋಟಿ ಡೋಸ್ ಗಳು ದಾಟಿದ್ದು, ಅದರಲ್ಲಿ ಕೋವಿಡ್ 19 ಲಸಿಕೆ ಅಭಿಯಾನದ 3 ನೇ ಹಂತದ ಅಡಿಯಲ್ಲಿ 18-44 ವಯಸ್ಸಿನವರಿಗೆ 1 ಕೋಟಿ ಡೋಸ್ ಗಳು ಸೇರಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಕಠಿಣ ಲಾಕ್ ಡೌನ್ ನಿಂದ ಬ್ಯಾಂಕ್ -ವಿಮಾ ಕಚೇರಿ ಬಂದ್: ಗ್ರಾಹಕರು, ರೈತರ ಪರದಾಟ