Advertisement
ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ನೇತೃತ್ವದಲ್ಲಿ ನಡೆದ ವಜ್ರ ಮಹೋತ್ಸವದ ಅಂಗವಾಗಿ ಒಂದೇ ವೇದಿಕೆಯಲ್ಲಿ ಒಂದೇ ವೇಳೆ 60 ಕಲಾವಿದರಿಂದ ಭಾರತದ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯಂ, ಕೊಚುಪುಡಿ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್, ಓಡಿಸ್ಸಿ, ಕಥ್‌ಕಳಿ ನೃತ್ಯಗಳ ಜುಗಲ್‌ಬಂದಿ ನಡೆಯಲಿದೆ. 60 ಕಲಾವಿದರಿಂದ ತಾಳ- ವಾದ್ಯ, ಜುಗಲ್ ಬಂದಿ ಮತ್ತು ಮ್ಯೂಸಿಕಲ್ ಇನ್‌ಸ್ಟುÅಮೆಂಟ್ ಹಾಗೂ ಸ್ಟಿÅಂಗ್ ಸಲಕರಣೆಗಳಿಂದ ತಾಳವಾದ್ಯ, ಗಾಯನ, ಗಾಳಿ ವಾದ್ಯ ವೈವಿಧ್ಯಮಯ ಇನ್‌ಸ್ಟುÅಮೆಂಟ್‌ಗಳಿಂದ ಜುಗಲ್ ಬಂದಿಯನ್ನು ಆಯೋಜಿಸಲಾಗಿದ್ದು, ಸೇರಿದ ನೂರಾರು ಮಂದಿ ಕಲಾಭಿಮಾನಿಗಳನ್ನು ರಂಜಿಸಿತು. ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ದಕ್ಷಣ ನಿರ್ದೇಶನದಲ್ಲಿ ಅರುಣೋದಯ ಕಲಾನಿಕೇತನ ಸಂಸ್ಥೆಯ ವಿವಿಧ ಶಾಖೆಗಳ ಮಕ್ಕಳಿಂದ ನೃತ್ಯಗಳು ಪ್ರದರ್ಶನಗೊಂಡಿತು. ಸಂಸ್ಥೆಯ ನಿರ್ದೇಶಕ, ಸಮಾಜ ಸೇವಕ ರಾಜು ಶ್ರೀಯಾನ್ ಅವರ ಸಹಕಾರ ದೊಂದಿಗೆ ಸಂಸ್ಥೆಯ ಟ್ರಸ್ಟಿಗಳಾದ ಸಂಜೀವ ಕೆ. ಸಾಲ್ಯಾನ್, ಗೋಪಾಲ್ ಪುತ್ರನ್, ಸುರೇಶ್ ಕಾಂಚನ್ ಅವರ ಪ್ರೋತ್ಸಾಹದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
Advertisement
ಅರುಣೋದಯ ಕಲಾನಿಕೇತನ ಸಂಸ್ಥೆ: ವಜ್ರಮಹೋತ್ಸವ,ನೃತ್ಯ ವೈಭವ
05:43 PM Nov 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.