Advertisement

ಅರುಣಾಚಲ: 131 ಅಭ್ಯರ್ಥಿಗಳು ಕರೋಡ್‌ಪತಿಗಳು, ಸಿಎಂ ಖಂಡು ಅತೀ ಸಿರಿವಂತ

09:04 AM Apr 09, 2019 | Sathish malya |

ಇಟಾನಗರ : ಅರುಣಾಚಲ ಪ್ರದೇಶದಲ್ಲಿ ಇದೇ ಎ.11ರಂದು ಲೋಕಸಭೆ ಮತ್ತು ವಿಧಾನಸಭೆಗೆ ಜತೆಯಾಗಿ ಚುನಾವಣೆ ನಡೆಯಲಿದೆ. ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 184 ಅಭ್ಯರ್ಥಿಗಳ ಪೈಕಿ 131 ಮಂದಿ ಕರೋಡ್‌ಪತಿಗಳಾಗಿರುವುದು ದಾಖಲಾಗಿದೆ.

Advertisement

ಮೂರನೇ ಬಾರಿ ಚುನಾಯಿತರಾಗಲು ಮುಕ್‌ತೋ ಕ್ಷೇತ್ರದಲ್ಲಿ ಕಣದಲ್ಲಿರುವ ಮುಖ್ಯಮಂತ್ರಿ ಪೆಮಾ ಖಂಡು ಅವರು ಇತರೆಲ್ಲ ಅಭ್ಯರ್ಥಿಗಳಿಗಿಂತ ಅತ್ಯಂತ ಸಿರಿವಂತರಾಗಿದ್ದು ಅವರ ಆಸ್ತಿಪಾಸ್ತಿ 163 ಕೋಟಿ ರೂ.ಗಳಿಗೂ ಹೆಚ್ಚಿದೆ ಎಂದು ಅಸೋಸಿಯೇಶನ್‌ ಫಾರ್‌ ಡೆಮೋಕ್ರಾಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ತಿಳಿಸಿದೆ.

ಚುನಾವಣಾ ಕಣದಲ್ಲಿರುವವರ ಪೈಕಿ 67 ಅಭ್ಯರ್ಥಿಗಳು (ಶೇ.36 ಮಂದಿ) 5 ಕೋಟಿ ಗಿಂತ ಹೆಚ್ಚಿನ ಆಸ್ತಿಪಾಸ್ತಿ ಹೊಂದಿದ್ದಾರೆ; 44 ಮಂದಿ ಅಭ್ಯರ್ಥಿಗಳ ಆಸ್ತಿ ಪಾಸ್ತಿ 2ರಿಂದ 5 ಕೋಟಿ ರೂ. ವರೆಗೆ ಇದೆ ಎಂದು ಎಡಿಆರ್‌ ತಿಳಿಸಿದೆ.

2016ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ ಖಂಡು ಅವರ ಚರಾಸ್ತಿ 1,43,87,82,786 ರೂ. ಇದೆಯಾದರೆ 19,62,75,356 ರೂ. ಸ್ಥಿರಾಸ್ತಿ ಇದೆ ತಮ್ಮ ಅಫಿದಾವಿತ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next