Advertisement
ಟ್ಯೂಷನ್‌ಗೆ ಹೋಗದೇ ಕೇವಲ ಕಾಲೇಜು ತರಗತಿಗಳನ್ನಷ್ಟೇ ಅವಲಂಬಿಸಿ ಉಭಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ವಿಶೇಷ. ಅರುಣ ಡಿ.ಕೆ. ಗಣಿತದಲ್ಲಿ 100, ಕಂಪ್ಯೂಟರ್ ಸಾಯನ್ಸ್‌ನಲ್ಲಿ 100 ಅಂಕ ಪಡೆದಿದ್ದರೆ, ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರದಲ್ಲಿ 97, ಇಂಗ್ಲಿಷ್‌ನಲ್ಲಿ 94, ಸಂಸ್ಕೃತದಲ್ಲಿ 99 ಅಂಕ ಪಡೆದಿದ್ದಾರೆ.
Related Articles
Advertisement
ಧಾರವಾಡದ ಜೆಎಸ್‌ಎಸ್ ಸಿಬಿಎಸ್‌ಇ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ (10/10) ಸಾಧನೆ ಮಾಡಿದ ಅರುಣ, ಜೆಇಇ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಜೆಇಇ ಅಡ್ವಾನ್ಸ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಿದ್ದಾರೆ. ಅರುಣ ಐಐಟಿ ಮಾಡುವಗುರಿ ಹೊಂದಿದ್ದಾರೆ.
ತಂದೆಗೆ ಸಾಧನೆ ಅರ್ಪಣೆ: ಕೆಲ ತಿಂಗಳ ಹಿಂದೆ ತಂದೆ ಕಳೆದುಕೊಂಡ ಶ್ರುತಿ ಭರದ್ವಾಜ್ 587 ಅಂಕ ಗಳಿಸಿದ್ದಾರೆ. ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಅಂಕ ಸಾಧನೆಯನ್ನು ತಂದೆಗೆ ಸಮರ್ಪಿಸಿದ್ದಾರೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಶ್ರುತಿ 100ಕ್ಕೆ 100 ಅಂಕ ಗಳಿಸಿದ್ದು, ಹಿಂದಿಯಲ್ಲಿ 97, ಇಂಗ್ಲಿಷ್ ನಲ್ಲಿ 90 ಅಂಕ ಗಳಿಸಿದ್ದಾರೆ. ಏರ್‌ಫೋರ್ಸ್ ಎಂಜಿನಿಯರ್ ಆಗುವ ಗುರಿ ಹೊಂದಿದ ಶ್ರುತಿ, ಬಿಇ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ.
ಶ್ರುತಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ತಂದೆ ರವೀಂದ್ರ ಭಾರದ್ವಾಜ್ ಕಾರ್ಪೋರೇಶನ್ ಬ್ಯಾಂಕ್ ಹಾವೇರಿ ಶಾಖೆ ವ್ಯವಸ್ಥಾಪಕರಾಗಿದ್ದರು. 9 ತಿಂಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡರು. ಅವರು ಆಸ್ಪತ್ರೆಯಲ್ಲಿದ್ದಾಗ ನನ್ನ ಬಗ್ಗೆ ಕಾಳಜಿ ಮಾಡಬೇಡ. ನನ್ನ ಕಾಳಜಿಗೆ ವೈದ್ಯರಿದ್ದಾರೆ. ನೀನು ಉತ್ತಮ ಸಾಧನೆ ಮಾಡು ಎಂದು ಹೇಳಿದ್ದರು. ಅವರ ಮಾತಿನಿಂದ ಸ್ಫೂರ್ತಿ ಪಡೆದು ಅಧ್ಯಯನ ಮಾಡಿದೆ ಎಂದರು.
ದಿನಕ್ಕೆ 4-5 ಗಂಟೆ ಅಧ್ಯಯನ ಮಾಡುತ್ತಿದ್ದೆ. ಕಾಲೇಜಿನಲ್ಲೇ ಉತ್ತಮವಾಗಿ ವಿಷಯ ಬೋಧನೆ ಮಾಡುತ್ತಿದ್ದರಿಂದ ಟ್ಯೂಷನ್‌ಗೆ ಹೋಗಲಿಲ್ಲ ಎಂದರು. ಮಾಧ್ಯಮಿಕ ಶಿಕ್ಷಣವನ್ನು ನಿರ್ಮಲಾ ಠಕ್ಕರ್ ಮಾಧ್ಯಮಿಕ ಶಾಲೆಯಲ್ಲಿ ಪಡೆದ ಶ್ರುತಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್ ಗಳಿಸಿದ್ದರು.