Advertisement
ಬಿಜೆಪಿಯ ಕೆಲವು ನಾಯಕರ ನಿರ್ಲಕ್ಷ್ಯದ ಧೋರಣೆಗೆ ಬೇಸತ್ತು ಪುತ್ತಿಲ ಪರಿವಾರ ಹೆಸರಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸಿ ಪ್ರಬಲ ಹೋರಾಟ ನೀಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಹೆಚ್ಚು ಮತಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಇದರಿಂದ ಬಿಜೆಪಿಯ ಹಿಡಿತದಿಂದ ಪುತ್ತೂರು ಕ್ಷೇತ್ರ ಮಾಯವಾಗಿತ್ತು.
Related Articles
Advertisement
ಪಕ್ಷದ ಗೆಲುವಿಗೆ ಶ್ರಮಿಸುವೆ: ಪುತ್ತಿಲಇದೇ ವೇಳೆ ಅರುಣ್ ಮಾತನಾಡಿ, ನಾನೊಬ್ಬ ಆರ್‌ಎಸ್‌ಎಸ್ ಕಾರ್ಯ ಕರ್ತ ನಾಗಿದ್ದವನು, ಪಕ್ಷದಲ್ಲೂ ಇದ್ದವನು, ಯಾವುದೇ ಪದಾಧಿಕಾರಿ ಹುದ್ದೆ ಇಲ್ಲದೇ ಕೆಲಸ ಮಾಡಿದವನು, ಇಲ್ಲೂಯಾವುದೇ ಹುದ್ದೆ ಬಯಸಿ ಪಕ್ಷಕ್ಕೆ ಸೇರಿಲ್ಲ, ಬದಲಿಗೆ ಪ್ರಧಾನಿ ಮೋದಿ ಯವರನ್ನು ಮತ್ತೆ ಹತ್ತು ವರ್ಷ ಪ್ರಧಾನಿಯಾಗಿ ಮಾಡಬೇಕು ಎನ್ನು ವುದಕ್ಕಾಗಿ ಸೇರಿದ್ದೇನೆ ಎಂದರು. ಲೋಕಸಭಾ ಚುನಾವಣೆಯ ಈ ಕಾಲಘಟ್ಟದಲ್ಲಿ ಇದೊಂದು ಒಳ್ಳೆಯ ಹೆಜ್ಜೆ. ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ದೇಶ ಅಭಿವೃದ್ಧಿ ಕಂಡಿದೆ. ಇನ್ನೂ 10 ವರ್ಷ ಅವರ ಆಡಳಿತ ದೇಶಕ್ಕೆ ಬೇಕಿದೆ. ಅದಕ್ಕಾಗಿ ನಮ್ಮೆಲ್ಲಾ ಕಾರ್ಯಕರ್ತರೂ ಪಕ್ಷದಲ್ಲಿ ಸಕ್ರಿಯರಾಗಿ ದುಡಿಯುವರು ಎಂದು ಪುತ್ತಿಲ ಹೇಳಿದರು. ಜಿಲ್ಲಾ ಚುನಾವಣ ಉಸ್ತುವಾರಿ ನಿತಿನ್ ಕುಮಾರ್, ಪ್ರ. ಕಾರ್ಯದರ್ಶಿ ಕಿಶೋರ್, ಪ್ರಭಾರಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ವಿದ್ಯಾಗೌರಿ ಉಪಸ್ಥಿತರಿದ್ದರು.