Advertisement

ಇಂದಿರಾರನ್ನು ಹಿಟ್ಲರ್‌ಗೆ ಹೋಲಿಸಿದ ಸಚಿವ ಜೇಟ್ಲಿ

06:00 AM Jun 26, 2018 | |

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 43 ವರ್ಷವಾದ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅವರನ್ನು ಹಿಟ್ಲರ್‌ಗೆ ಹೋಲಿಸಿರುವ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ.

Advertisement

ಜೇಟ್ಲಿ ತಮ್ಮ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿ, “ದ ಎಮರ್ಜೆನ್ಸಿ ರಿವಿಸಿಟೆಡ್‌’ ಶೀರ್ಷಿಕೆಯಡಿ ಭಾರತವನ್ನು ಪರಿವರ್ತನೆಯ ಹಾದಿಗೆ ಕೊಂಡೊಯ್ಯಬೇಕಿದ್ದ ಇಂದಿರಾ ವಂಶಪಾರಂಪರ್ಯ ಪ್ರಜಾ ಪ್ರಭುತ್ವದತ್ತ ತಳ್ಳಿದ್ದರು. 1933ರಲ್ಲಿ ಅಡಾಲ್ಫ್ ಹಿಟ್ಲರ್‌ ಜರ್ಮನಿಯಲ್ಲಿ ನಡೆಸಿದ ಘೋರ ಹತ್ಯಾಕಾಂಡದಿಂದ ಸ್ಫೂರ್ತಿಗೊಂಡ ಇಂದಿರಾ, ಭಾರತದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಸಂವಿಧಾನವನ್ನೇ ತಿದ್ದುಪಡಿ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ಪರಿವರ್ತಿಸಿದರು. ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್‌ ವಿಧಿಸಿದರು ಎಂದು ಕಿಡಿಕಾರಿದ್ದಾರೆ.

ಇಂದಿರಾಗಾಂಧಿ ಮೂಲಭೂತ ಹಕ್ಕುಗಳ ಕಲಂ 350 ಅನ್ನು ವಜಾಗೊಳಿಸಿ 352ರ ಅಡಿ ತುರ್ತು ಪರಿಸ್ಥಿತಿ ಹೇರಿ ಪ್ರತಿಪಕ್ಷಗಳನ್ನು ಹತ್ತಿಕ್ಕಿದರು. ಕಾನೂನು ಬಾಹಿರ ಕೃತ್ಯ ನಡೆಸಿ ದರು. ಬಹುತೇಕ ನಾಯಕರನ್ನು ಬಂಧಿಸಿದರು ಎಂದು ವಾಗ್ಧಾಳಿ ನಡೆಸಿದ್ದಾರೆ.
“ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂಬ ಅಂದಿನ ಕಾಂಗ್ರೆಸ್‌ ಅಧ್ಯಕ್ಷರ ಹೇಳಿಕೆಯನ್ನು ಉಲ್ಲೇಖೀಸಿರುವ ಜೇಟ್ಲಿ, ಜರ್ಮಿನಿಯಲ್ಲಿ ಹಿಟ್ಲರ್‌ ಸರ್ವಾಧಿಕಾರಿಯಾ ದಂತೆ ಇಂದಿರಾ ಕೂಡ ನಿರಂಕುಶ ಆಡಳಿತ ನಡೆಸಿದರು ಎಂದಿದ್ದಾರೆ.

ಮೋದಿ ಟ್ವೀಟ್‌: ಜೇಟ್ಲಿ ಅವರ ಪೋಸ್ಟ್‌ಗಳನ್ನು ಪ್ರಧಾನಿ ಮೋದಿ ಅವರೂ ಟ್ವೀಟ್‌ ಮಾಡಿದ್ದು, ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಗ್ಗೆ ಬರೆದಿರುವ ಜೇಟ್ಲಿ ಅವರ ಬ್ಲಾಗ್‌ ಓದಿ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ತನ್ನ ರಾಜಕೀಯ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವ ವನ್ನೇ ಕೊಲೆ ಮಾಡಿತು. ಅಧಿಕಾರದಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯವನ್ನು ಮೂಕಪ್ರೇಕ್ಷಕನನ್ನಾಗಿಸಿತು, ಮಾಧ್ಯಮಗಳನ್ನು ಮೌನವಾಗಿಸಿತು. 
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next