ನವದೆಹಲಿ: ಗುಜರಾತ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿ ಎದ್ದಿದ್ದ ವಿವಾದ ಕೊನೆಗೂ ತಣ್ಣಗಾಗಿದೆ. ರಾಜ್ಯಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಅವರು ಮಂಗಳವಾರ ಈ ಕುರಿತು ಸ್ಪಷ್ಟನೆ ನೀಡಿದ್ದು, “ದೇಶದ ಕುರಿತಾಗಿರುವ ಮಾಜಿ ಪ್ರಧಾನಿ ಸಿಂಗ್ ಅವರ ಬದ್ಧತೆಯನ್ನು ಪ್ರಶ್ನಿಸಿಲ,’ ಎಂದು ಹೇಳಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಸಂಸತ್‌ನ ಎರಡೂ ಸದನಗಳಲ್ಲಿ ಗದ್ದಲವೆಬ್ಬಿಸುತ್ತಾ ಬಂದಿದ್ದ ಪ್ರತಿಪಕ್ಷಗಳು ಸರ್ಕಾರದ ಸ್ಪಷ್ಟನೆಗೆ ಒಪ್ಪಿದ್ದು, ಕಲಾಪಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗುವ ಸುಳಿವು ನೀಡಿವೆ.
“ಮಾಜಿ ಪ್ರಧಾನಿ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತಿತರ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಜತೆಗೂಡಿ ಸಂಚು ರೂಪಿಸಿದ್ದಾರೆ’ ಎಂದು ಗುಜರಾತ್ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಆರೋಪಿಸಿದ್ದರು.
ಇದರಿಂದ ಕೆಂಡಾಮಂಡಲವಾಗಿದ್ದ ಪ್ರತಿಪಕ್ಷಗಳು, ನಿರಂತರವಾಗಿ ಸದನದಲ್ಲಿ ಗದ್ದಲವೆಬ್ಬಿಸಿದ್ದವು. ಈ ವಿವಾದಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಮಂಗಳವಾರ ಹೆಜ್ಜೆಯಿಟ್ಟ ಸಚಿವ ಜೇಟಿÉ, “ಸಿಂಗ್ ಹಾಗೂ ಅನ್ಸಾರಿ ಅವರ ಕುರಿತು ಪ್ರಧಾನಿ ಮೋದಿ ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ನಾಯಕರನ್ನೂ, ದೇಶದ ಮೇಲಿನ ಅವರ ಬದ್ಧತೆಯನ್ನೂ ನಾವು ಗೌರವಿಸುತ್ತೇವೆ. ಪ್ರಧಾನಿ ಮೋದಿ ಅವರು ಈ ಬದ್ಧತೆಯನ್ನು ಪ್ರಶ್ನಿಸಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, “ಕೊನೆಗೂ ಸ್ಪಷ್ಟೀಕರಣ ನೀಡಿದ್ದಕ್ಕೆ ಜೇಟಿÉ ಅವರಿಗೆ ಧನ್ಯವಾದ’ ಎಂದರು. ಜತೆಗೆ, ಚುನಾ ವಣೆ ವೇಳೆ ಮಣಿಶಂಕರ್ ಅಯ್ಯ ರ್ ನೀಡಿದ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ ಎಂದೂ ಹೇಳಿದರು.
ಪತ್ತೆಯಾಗಿಲ್ಲ 661 ಮಂದಿ: ಏತನ್ಮಧ್ಯೆ, ಒಖೀ ಚಂಡಮಾರುತದಿಂದಾಗಿ ನಾಪತ್ತೆ ಯಾ ಗಿದ್ದ ಮೀನುಗಾರರ ಪೈಕಿ 845 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 661 ಮಂದಿ ಪತ್ತೆಯಾಗಿಲ್ಲ ಎಂದು ಲೋಕಸಭೆಗೆ ಸಚಿವೆ ನಿರ್ಮಲಾ ಸೀತಾರಾ ಮನ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಲಕ್ಸುರಿ ವಾಹನಗಳ ಮೇಲಿನ ಸೆಸ್ ಅನ್ನು ಈಗಿರುವ ಶೇ.15ರಿಂದ ಶೇ.25ಕ್ಕೇರಿಸುವ ವಿಧೇಯಕವೂ ಅಂಗೀಕಾರವಾಗಿದೆ.