Advertisement

20 ಕೋಟಿಗೆ ಹರಾಜಾದ ಕಲಾಕೃತಿ

06:00 AM Dec 01, 2018 | Team Udayavani |

ಮುಂಬೈ: ಭಾರತದ ಖ್ಯಾತ ಚಿತ್ರ ಕಲಾವಿದ ತೆಯ್ಯಬ್‌ ಮೆಹ್ತಾ ಅವರ “ದುರ್ಗಾ ಮಹಿಷಾಸುರ ಮರ್ದಿನಿ’ ಎಂಬ ಕಲಾಕೃತಿಯು ಮುಂಬೈ ನಲ್ಲಿ ನಡೆದ ಹರಾಜಿನಲ್ಲಿ 20.49 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ನ್ಯೂಯಾರ್ಕ್‌ ಮೂಲದ, ವಿವಿಧ ಕಲಾ ಪ್ರಕಾರ ಗಳ ಹರಾಜು ಸಂಸ್ಥೆ  “ಸೋತಿºà’ ವತಿ ಯಿಂದ ಭಾರತದಲ್ಲಿ ನಡೆಸಲಾದ ಮೊದಲ ಹರಾಜು ಪ್ರಕ್ರಿಯೆ ಇದು. ಇಲ್ಲಿ ವಿವಿಧ ಕಲಾವಿದರ ಒಟ್ಟು 55.40 ಕೋಟಿ ರೂ. ಮೌಲ್ಯದಷ್ಟು  ಕಲಾಕೃತಿ ಗಳು ಮಾರಾಟ ವಾಗಿವೆ. ಕಲಾವಿದೆ  ಅಮ್ರಿತಾ ಶೆರ್‌-ಗಿಲ್‌ ಅವರ “ದ ಲಿಟಲ್‌ ಗರ್ಲ್ ಇನ್‌ ಬ್ಲ್ಯೂ ಕಲಾಕೃತಿ 18.69 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next