Advertisement

ಕೋವಿಡ್: ಕಂಗಾಲಾದ ಕಲಾವಿದರು

04:00 PM Oct 30, 2020 | Suhan S |

ಕನಕಪುರ: ಕಲೆ ಸಾಹಿತ್ಯ ಸಂಸ್ಕೃತಿಗೆ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಆದರೆ ಅದನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರ ಬದುಕು ಕೋವಿಡ್  ಮಹಾಮಾರಿಯಿಂದ ಬೀದಿಗೆ ಬಿದ್ದಿದೆ.

Advertisement

ಡೊಳ್ಳು ಕುಣಿತ, ಸೋಬಾನೆ ಪದ, ತಮಟೆ ವಾದ್ಯ, ಗೊರವರ ಕುಣಿತ, ಕರಡಿ ಕುಣಿತ, ಕಂಸಾಳೆ ಪದ, ವೀರಬಾಹು, ವೀರಗಾಸೆ ಕುಣಿತ, ಸಿದ್ದಪ್ಪಾಜಿ, ಮಹದೇಶ್ವರ, ಮಂಟೇಸ್ವಾಮಿ ಭಕ್ತಿ ಗೀತೆಗಳನ್ನು ಪೂರ್ವಿಕರ ಕಾಲದಿಂದಲೂ ಗಾಯಕರು, ಕಲಾವಿದರು ಇವುಗಳನ್ನು ಕಟ್ಟಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.

ಕಾರ್ಯಕ್ರಮಗಳು ಸ್ತಬ್ಧ: ಪಾರಂಪರಿಕವಾದ ದಸರಾ ಉತ್ಸವ, ಊರ ಹಬ್ಬ, ನವರಾತ್ರಿ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವದಂತಹ ಹಬ್ಬಗಳಲ್ಲಿ ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ ಇತ್ತೀಚೆಗೆ ಒಕ್ಕರಿಸಿದ ಕೋವಿಡ್  ದಿಂದ ನಾಡು-ನುಡಿ ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಗಳು ಎಲ್ಲವೂ ಸ್ತಬ್ಧಗೊಂಡಿವೆ. ಇದರಿಂದ ಕಲಾವಿದರು ಬದುಕು ನಡೆಸುವುದು ಕಷ್ಟವಾಗಿದೆ.

ಸದ್ಬಳಕೆಯಾಗದ ಅನುದಾನ: ಗಣೇಶ ಚತುರ್ಥಿ ತಮಟೆ ನಾದ, ಕಲೆಗಳ ಪ್ರದರ್ಶನವಿಲ್ಲದೆ ಕಳೆದುಹೋಗಿದೆ. ದಸರಾ ಉತ್ಸವ ಬೆರಳೆಣಿಕೆಯಷ್ಟು ಮಂದಿಗೆ ಸೀಮಿತವಾಗಿದೆ. ಮುಂಬರುವ ಕನ್ನಡ ರಾಜ್ಯೋತ್ಸವ ಸರಳತೆಗೆ ಸಾಕ್ಷಿಯಾಗಲಿದೆ. ಇನ್ನು ಗ್ರಾಮೀಣ ಭಾಗದ ಊರ ಹಬ್ಬಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈ ಎಲ್ಲಾ ಕಾರ್ಯಕ್ರಮಗಳು ಕಲಾವಿದರಿಂದಲೇ ಕಳೆಕಟ್ಟುತ್ತಿದ್ದವು. ಆದರೆ, ಕೋವಿಡ್   ಮಹಾಮಾರಿ ಎಲ್ಲಾ ರಂಗಗಳ ಮೇಲೆ ಪರಿಣಾಮ ಬೀರಿ ದೇಶದ ಆರ್ಥಿಕತೆಯನ್ನು ಬುಡಮೇಲಾಗಿಸಿದೆ. ಇದರಿಂದ ಬೀದಿಗೆ ಬಿದ್ದ ಕಲಾವಿದರನ್ನು ಕೈ ಹಿಡಿಯಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಇಲಾಖೆಗೆ ಬಂದಿದ್ದ ಕೋಟ್ಯಂತರ ರೂ. ಅನುದಾನಸದ್ಬಳಕೆಯಾಗದೆ, ಸರ್ಕಾರ ಹಿಂಪಡೆದಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.

ನೆರವು ಬೇಕಿದೆ ಕಲಾವಿದರಿಗೆ: ಕೋವಿಡ್   ಸಂಕಷ್ಟದಲ್ಲಿ ಕುಲಕಸುಬುದಾರರು, ವಾಹನ ಚಾಲಕರು, ರೈತರು ಹಾಗೂ ಇತರೆ ರಂಗದವರಿಗೆ ಸಹಾಯಧನ ನೀಡಿದ್ದ ಸರ್ಕಾರ ಕಲಾವಿದರನೆರವಿಗೆ ಘೋಷಣೆ ಮಾಡಿದ 2 ಸಾವಿರ ರೂ. ಧನ ಸಹಾಯ ಜಿಲ್ಲೆಯ ಕಲಾವಿದರಿಗೆ ಸಮರ್ಪಕವಾಗಿ ತಲುಪದೇ ಇರುವುದು ಮಾತ್ರ ವಿಪರ್ಯಾಸವೇ ಸರಿ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ

Advertisement

ಮಟ್ಟದ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳದೆ, ಹಿಂದಕ್ಕೆ ಕಳುಹಿಸಿದ್ದಾರೆ. ಇಂತಹ ಬದ್ಧತೆ ಇಲ್ಲದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೇಗೆ ಪ್ರೋತ್ಸಾಹಿಸಬಲ್ಲರು. ಇಂತಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಕಲಾವಿದರ ಬದುಕು ನಾಶವಾಗುತ್ತಿದೆ. ಸರ್ಕಾರಕಲಾವಿದರ ನೆರವಿಗೆ ಬರಬೇಕಿದೆ ಎಂದು ದಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋವಿಡ್  ದಿಂದ ಸಂಕಷ್ಟದಲ್ಲಿದ್ದ ಕಲಾವಿದರಿಗೆ ಸರ್ಕಾರ 2 ಸಾವಿರ ರೂ. ಧನ ಸಹಾಯ ಘೋಷಣೆ ಮಾಡಿತ್ತು. ಆದರೆ, ಹಲವು ರಾಜ್ಯಮಟ್ಟದ ಕಲಾವಿದರಿಗೆ ಅದು ತಲುಪಿಲ್ಲ. ಇನ್ನೂ ಗ್ರಾಮೀಣ ಭಾಗದ ಕಲಾವಿದರಿಗೆ ತಲುಪಲು ಹೇಗೆ ಸಾಧ್ಯ ಸರ್ಕಾರ ಕಲಾವಿದರನ್ನು ಕಡೆಗಣಿಸಿದ್ದು, ಸಾಕು ಇನ್ನಾದರೂ ಸ್ಪಂದಿಬೇಕಿದೆ. ವೆಂಕಟಾಚಲ, ದೊಡ್ಡಾಲಹಳ್ಳಿಯ ರಾಜ್ಯ ಮಟ್ಟದ ಜಾನಪದ ಕಲಾವಿದ.

 

ಬಿ.ಟಿ.ಉಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next