Advertisement

ಕಲಾವಿದರು, ನೇರ ಪ್ರೇಕ್ಷಕರು ಐದೈದು, ಪರೋಕ್ಷ ಪ್ರೇಕ್ಷಕರು 500!

10:42 PM Jun 28, 2020 | Sriram |

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕೋವಿಡ್‌-19 ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿ ಯಕ್ಷಗಾನ ತಾಳಮದ್ದಲೆ ಶನಿವಾರ ನಡೆದಿದೆ. ಬೆರಳೆಣಿಕೆ ಕಲಾವಿದರಷ್ಟೇ ಪ್ರೇಕ್ಷಕರಿದ್ದರು. ಆದರೆ ಇದು ಆನ್‌ಲೈನ್‌ನಲ್ಲಿ ಪ್ರಸಾರಗೊಂಡು ನೂರಾರು ಪ್ರೇಕ್ಷಕರನ್ನು ತಲುಪಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವೇದಿಕೆಗಳನ್ನು ಸೃಷ್ಟಿಸಿಕೊಂಡು ಜನರು ತಾಳಮದ್ದಲೆಯನ್ನು ವೀಕ್ಷಿಸಿದರು.

Advertisement

ಮಣಿಪಾಲ ಆಸ್ಪತ್ರೆ ವೈದ್ಯೆ ಡಾ|ಶೈಲಜಾ ಭಟ್‌ ಅವರು ಪರ್ಯಾಯ ಶ್ರೀಅದಮಾರು ಮಠದ ಸಹಕಾರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. “ಕೋಮಲಾಂಗಿ ಕೇಳೇ’ ಕಥಾನಕವನ್ನು ಕಲಾವಿದರು ಪ್ರಸ್ತುತಪಡಿಸಿದರು.

ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕೋವಿಡ್‌-19 ಲಾಕ್‌ಡೌನ್‌ ಬಳಿಕ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ.

ಅದಮಾರು ಮಠದ ಮೂಲಯತಿ ಶ್ರೀನರಹರಿತೀರ್ಥರಿಂದ ಮೊದಲು ಪ್ರವರ್ತಿತವಾದ ಯಕ್ಷಗಾನ ಕಲೆ ಜನಸಾಮಾನ್ಯರಲ್ಲಿ ಸಾಂಸ್ಕೃತಿಕ, ಧಾರ್ಮಿಕ ಜಾಗೃತಿಯನ್ನು ಮೂಡಿಸಿದೆ. ಇನ್ನು ಮುಂದೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಹಾರೈಸಿದರು. ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್‌, ಪದ್ಯಾಣ ಗಣಪತಿ ಭಟ್‌, ವಾಸುದೇವ ರಂಗಾ ಭಟ್‌, ಕಾಸರಗೋಡು ಸುಬ್ರಾಯ ಹೊಳ್ಳ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next