Advertisement
ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನೆಮಾಸ್ ಚಿತ್ರ ಮಂದಿರದಲ್ಲಿ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಆಯೋಜಿಸಲಾದ 4 ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೋರಂಜನ ಸಿನೆಮಾಗಳಿಗೆ ಸರಿಸಾಟಿಧಿಯಾಗಿ ಕಲಾತ್ಮಕ ಚಿತ್ರಗಳೂ ಬೆಳೆಯುತ್ತಿವೆ. ಚಲನಚಿತ್ರೋತ್ಸವದಿಂದ ಕಲಾತ್ಮಕ ಸಿನೆಮಾಗಳಿಗೆ ಪ್ರೋತ್ಸಾಹ ದೊರಕಿದಂತಾಗಿದೆ. ಪ್ರೇಕ್ಷಕರಿಗೂ ಉತ್ತಮ ಚಿತ್ರ ವೀಕ್ಷಿಸಲು ಸಾಧ್ಯವಾಗುತ್ತಿದೆ ಜಗತ್ತಿನ ಸಿನೆಮಾ ರಂಗದಲ್ಲಿ ಭಾರತೀಯ ಸಿನೆಮಾಗಳಿಗೆ ಈಗ ಹೆಚ್ಚಿನ ಗೌರವ ಲಭ್ಯವಾಗುತ್ತಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯಸಿನೆಮಾಗಳು ಪ್ರದರ್ಶನ ಕಾಣು ತ್ತಿರುವುದು ಇದಕ್ಕೆ ಉದಾಹರಣೆ ಎಂದು ಅವರು ಹೇಳಿದರು. ನಾನು ಕ್ಲಾಪ್ ಬಾಯ್ ಆಗಿ ಸಿನೆಮಾ ಕ್ಷೇತ್ರ ಪ್ರವೇಶಿಸಿದ್ದೆ. ಈಗ “ಕಾಸವ್’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ. ಇಂದಿಗೂ ನನಗೆ ಕ್ಲಾಪ್ ಬೋರ್ಡ್ ಕುತೂಹಲದ ಸಂಗತಿಯಾಗಿಯೇ ಉಳಿದಿದೆ ಎಂದು ಅವರು ನೆನಪಿಸಿಕೊಂಡರು.
Related Articles
ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಮಾತ ನಾಡಿ, ಮಂಗಳೂರು ಹಲವು ಭಾಷೆಯ ಚಿತ್ರರಂಗಗಳಿಗೆ ಕಲಾವಿದರು, ನಿರ್ದೇಶಕರು, ತಂತ್ರಜ್ಞರನ್ನು ಒದಗಿಸಿದ ನೆಲ. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಸುನೀಲ್ ಶೆಟ್ಟಿ ಸೇರಿದಂತೆ ಹಲವು ಜನಪ್ರಿಯ ನಟ, ನಟಿಯರು, ರೋಹಿತ್ ಶೆಟ್ಟಿಯಂತಹ ಪ್ರತಿಭಾವಂತ ನಿರ್ದೇಶಕರು ಮಂಗಳೂರಿನಕೊಡುಗೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಿಟ್ಟೆ ವಿವಿ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.
Advertisement
ಖ್ಯಾತ ಚಿತ್ರ ನಿರ್ಮಾಪಕ, ವಿಮರ್ಶಕ ಮನು ಚಕ್ರವರ್ತಿ, ಎನ್. ರಾಮಚಂದ್ರನ್, ಭಿಜಯ ಜನ, ಗಿರಿದೇವ್ ಹಸನ್, ಸಜಿನ್ ಬಾಬು, ನಿಟ್ಟೆ ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ರವಿರಾಜ್ ಮೊದಲಾದವರು ಉಪಸ್ಥಿತರಿದ್ದರು. ವಿಲ್ಮಾ ಸೆರಾವೋ ನಿರೂಪಿಸಿದರು.
5 ದೇಶಗಳ 55 ಸಿನೆಮಾ ಭಾರತ್ ಸಿನೆಮಾಸ್‌ನಲ್ಲಿ ಎ. 27ರ ವರೆಗೆ 5 ದೇಶಗಳ ಒಟ್ಟು 55 ಸಿನೆಮಾಗಳು ಮತ್ತು ದೇಶದ ಹಲವು ಭಾಷೆಗಳ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಪಿ.ಎನ್. ರಾಮಚಂದ್ರ, ಅನಿರುದ್ಧ ರಾಯ್ ಚೌಧರಿ, ಬಿಜಯ ಜೇನ, ಪ್ರದೀಪ್ತ ಭಟ್ಟಾ
ಚಾರ್ಯ, ಸಿನೆಮಾ ಕಲಾವಿದರಾದ ಮನೋಹರ್ ಶೃಂಗ, ಪ್ರತೀಕ್ ಗಾಂಧಿ ಹರಿಸ್ರವ, ಹೇಮಂತ್ ಭಾಗವಹಿಸುತ್ತಾರೆ. ಚಿತ್ರ ಪ್ರದರ್ಶನದ ಬಳಿಕ ಸಂವಾದ,ಚಿತ್ರಕಥೆ ಬರವಣಿಗೆ ಕಾರ್ಯಾಗಾರ ಕೂಡ ನಡೆಯುತ್ತದೆ. ಹಿಂದಿ, ತುಳು, ಬಂಗಾಲಿ, ಕನ್ನಡ, ಗುಜರಾತಿ, ಮಲಯಾಳ ಮತ್ತು ವಿದೇಶದ ಕೆಲವು ಚಿತ್ರಗಳ ಪ್ರದರ್ಶನವಿರುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.