Advertisement
ಇಷ್ಟೊಂದು ಚಂದದ ಆಭರಣಗಳು ಎಲ್ಲಿ ಸಿಗುತ್ತವೆ? ಎಲ್ಲಿದೆ ಟೆಟ್ರಾ ಪ್ಯಾಕ್ ಹ್ಯಾಂಡ್ ಬ್ಯಾಗ್ ಹಾಗೂ ಪರ್ಸ್‌ಗಳು ಸಿಗುವ ಸ್ಥಳ ಎಂದು ಯೋಚಿಸುತ್ತಿದ್ದಿರಾ? ಹಾಗಿದ್ದರೆ ಇಲ್ಲಿದೆ ನೋಡಿ ಮಾಹಿತಿ; ಕರ್ನಾಟಕ ಕಾಯರ್ ಸಹಕಾರ ಒಕೂಟ್ಕ, ಚಿತ್ತಾರ ಸಹಯೋಗದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಆರ್ಟಿಸ್ತಾನ್ ಮೇಕರ್ಸ್ ಮಾರ್ಕೆಟ್ ಮೇಳದಲ್ಲಿ ನಿಮಗಿವು ದೊರೆಯಲಿವೆ.
Related Articles
Advertisement
ಕಸದಿಂದ ರಸವಾಗಿ ಬದಲಾದ ವಸ್ತುಗಳ ಮೆರಗು: ಜ್ಯೂಸ್ ಕುಡಿದು ಬಿಸಾಡಿದ ಟೆಟ್ರಾ ಪ್ಯಾಕ್‌ಗಳಿಂದ ಅನುಲೈಫ್ ಸಂಸ್ಥೆ ತಯಾರಿಸಿದ ಹ್ಯಾಂಡ್ ಬ್ಯಾಗ್‌ಗಳು ಹಾಗೂ ಅಕ್ಕಿಚೀಲಗಳಿಂದ ತಯಾರಿಸಿದ ಲ್ಯಾಪ್‌ಟಾಪ್ ಬ್ಯಾಗ್‌ಗಳು ಮತ್ತು ಅಲಂಕಾರಿಕಾ ಪರ್ಸ್‌ಗಳು ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿತ್ತು.
ಸಿಲ್ಕ್ ಸೀರೆಗಳು, ಕಲಾಂಕಾರಿ ಸೀರೆಗಳು, ಕೊಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಹ್ಯಾಂಡ್ ಲೂಮ್ ಸೀರೆಗಳು, ಡಿಸೈನರ್ ಕುರ್ತಾಗಳು, ಲುಕ್‌ನಾವಿ ಕುರ್ತಾಗಳು, ಕಲಾಂಕಾರಿ ಕುರ್ತಾಗಳು, ಕಾಶ್ಮೀರಿ ಕುರ್ತಾಗಳು, ಗುಜರಾತಿ ಕುರ್ತಾಗಳು, ಬಾಂಧಾನಿ ಕುರ್ತಾಗಳು
ಹಾಗೂ ಖಾದಿ ಕುರ್ತಾಗಳು ಮತ್ತು ಬಗೆ ಬಗೆಯ ದುಪ್ಪಟಗಳು ತರುಣಿಯರ ಮನ ಸೆಳೆದಿದ್ದವು. ಇದಷ್ಟೇ ಅಲ್ಲದೆ ಇದಕ್ಕೆ ಹೊಂದುವ ಸಿಲ್ವರ್ ಜರ್ಮನ್ ಆಭರಣಗಳು, ಮರದ ಆಭರಣಗಳು, ಟ್ರೆಂಡಿ ಆಭರಣಗಳು, ಕರಕುಶಲ ಆಭರಣಗಳು ಮೆಳಕ್ಕೆ ಮತ್ತಷ್ಟು ಮೆರಗು ನೀಡಿದ್ದವು.
ಸ್ಥಳೀಯ ಕಲಾವಿದರಿಗೆ ಮಾರುಕಟ್ಟೆ ಒದಗಿಸುವ ಇಂತಹ ಮೇಳಗಳು ಹೆಚ್ಚಾಗಿ ನಡೆಯಬೇಕು. ಸರ್ಕಾರ ಇಲ್ಲಿನ ಕಲಾವಿದರಿಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ಸಾಮಗ್ರಿ, ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ಒದಗಿಸಬೇಕು. ಇದರಿಂದ ಕರ್ನಾಟಕದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿದೆ.-ಮಾನ್ವಿತಾ ಕಾಮತ್, ನಟಿ