ಸಿನಿಮಾ ಅಂದರೆ ಯಾರಿಗೆ ತಾನೆ ಆಸೆ ಇರಲ್ಲ. ನಾನು ಹೀರೋ ಆಗಬೇಕು, ನಿರ್ದೇಶಕ ಎನಿಸಿಕೊಳ್ಳಬೇಕು, ಸಂಕಲನಕಾರ ಅಂತ ಕರೆಸಿಕೊಳ್ಳಬೇಕು ಸೇರಿದಂತೆ ಸಿನಿಮಾದ ಇತರೆ ವಿಭಾಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಯಾರಿಗೆ ಇರಲ್ಲ ಹೇಳಿ. ಆಸೆ ಎಲ್ಲರಲ್ಲೂ
ಇದ್ದೇ ಇರುತ್ತೆ. ಆದರೆ, ಅಂಥದ್ದೊಂದು ಅವಕಾಶ ಬೇಕಲ್ಲವೆ?
ಸಿನಿಮಾ ಆಸಕ್ತಿ ಇದ್ದವರಿಗೆ ಒಂದು ವೇದಿಕೆ ಅಂದರೆ, ಅದು ನಟನೆ, ನಿರ್ದೇಶನ ಸೇರಿದಂತೆ ಇತರೆ ವಿಭಾಗಗಳ ಕಲಿಕೆ ಇರುವ ಶಾಲೆ. ಬೆಂಗಳೂರಿನಲ್ಲಂತೂ ಸಾಕಷ್ಟು ನಟನೆ, ನಿರ್ದೇಶನ ಇತ್ಯಾದಿ ವಿಷಯಗಳ ತರಬೇತಿ ಶಾಲೆಗಳು ತಲೆ ಎತ್ತಿವೆ. ಪ್ರತಿ ವರ್ಷ ಕಲಿತುಕೊಂಡು ಬರುವ ಅದೆಷ್ಟೋ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಕಾಣಸಿಗುತ್ತಾರೆ. ಈಗ ಅಂತಹ ಆಸಕ್ತರಿಗೆಂದೇ ಹೊಸದೊಂದು ನಟನೆ, ನಿರ್ದೇಶನ
ಶಾಲೆಯೊಂದು ಶುರುವಾಗಿದೆ.
ಅದರ ಹೆಸರು “ಕಲಾವಿದ ಫಿಲಂ ಅಕಾಡೆಮಿ’ ಅಂದಹಾಗೆ, ಇದು ನಟರಾದ ಯತಿರಾಜ್ ಮತ್ತು ಅರವಿಂದ್ ರಾವ್ ಅವರ ಸಾರಥ್ಯದಲ್ಲಿ
ಶುರುವಾಗಿರುವ ಫಿಲಂ ಅಕಾಡೆಮಿ. ಶುಕ್ರವಾರ ಈ “ಕಲಾವಿಧ ಫಿಲಂ ಅಕಾಡೆಮಿ’ಗೆ ಚಾಲನೆ ಸಿಕ್ಕಿದೆ. ಬಸವೇಶ್ವರ ನಗರದಲ್ಲಿರುವ
ವಾಟರ್ ಟ್ಯಾಂಕ್ ಬಸ್‌ನಿಲ್ದಾಣ ಸಮೀಪದ 3ನೇ ಹಂತ, ನಾಲ್ಕನೆ ಬ್ಲಾಕ್‌ನ 3 ನೇ ಮಹಡಿಯಲ್ಲಿರುವ ಈ “ಕಲಾವಿಧ ಫಿಲಂ ಅಕಾಡೆಮಿ’ಯಲ್ಲಿ
ಮೂರು ತಿಂಗಳ ನಟನೆ, ಆರು ತಿಂಗಳ ನಿರೂಪಣೆ, ನಿರ್ದೇಶನ ಮತ್ತು ಸಂಕಲನ ಕುರಿತ ತರಗತಿಗಳು ಆರಂಭವಾಗಲಿವೆ.