Advertisement

AI ನ್ಯೂಸ್‌+ಪಾರ್ಶ್ವವಾಯು ರೋಗಿಗೂ ಎಐ ಮಾತು

09:25 PM Aug 26, 2023 | Team Udayavani |

ಈಗಾಗಲೇ ಹಲವು ಕ್ಷೇತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ಅಸಾಧಾರಣ ಕೆಲಸಗಳಿಗೆ ಸಹಕಾರಿಯಾಗುತ್ತಿರುವ ಕೃತಕ ಬುದ್ಧಿಮತ್ತೆಯು ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ತನ್ನ ಅಸಾಧಾರಣ ಸಾಮರ್ಥ್ಯ ತೋರುತ್ತಿದೆ.

Advertisement

ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆಯೊಬ್ಬರಿಗೆ ಎಐ ತಂತ್ರಜ್ಞಾನವು ಮಾತನಾಡಲು ಸಹಕರಿಸಿದೆ. ಹೌದು, ಇತ್ತೀಚೆಗಷ್ಟೇ ಅಮೆರಿಕದ ಯುಸಿಎಸ್‌ಎಫ್ ವೈದ್ಯಕೀಯ ಸಂಶೋಧಕರು ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆಯೊಬ್ಬರ ಮಿದುಳಿನ ಸಂವಹನಗಳನ್ನು ಎಐ ಆಧಾರಿಯ ಬಿಸಿಐ ತಂತ್ರಜ್ಞಾನದ ಮೂಲಕ ಸಂಗ್ರಹಿಸಿ, ಅದನ್ನು ಎಐ ತಂತ್ರಜ್ಞಾನಕ್ಕೆ ಅನ್ವಯಿಸಿದ್ದಾರೆ.

ಈ ವೇಳೆ ತಂತ್ರಜ್ಞಾನವು ಸಂವಹನಗಳನ್ನು ಪರಿಶೀಲಿಸಿ, ಅವುಗಳನ್ನು ಅಕ್ಷರಗಳಿಗೆ ಪರಿವರ್ತಿಸಿ, ಧ್ವನಿಗೂಡಿಸಿ ಮಹಿಳೆ ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ಮಾತಿನ ರೂಪದಲ್ಲಿ ವ್ಯಕ್ತ ಪಡಿಸಿದೆ. ಇದರಿಂದ ಪ್ರತಿ ಬಾರಿ ಮಹಿಳೆ ಮಾತನಾಡಲು ಪ್ರಯತ್ನಿಸಿದಾಗೆಲ್ಲ ಆಕೆಯ ಮಿದುಳಿನ ಸಂಜ್ಞೆಯನ್ನು ಸ್ವತಃ ಎಐ ಗ್ರಹಿಸಿ ಮಾತಿನಲ್ಲಿ ಹೇಳುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next