Advertisement
ಈ ಎ.ಐ. ತಂತ್ರಜ್ಞಾನಕ್ಕೆ “ಲ್ಯಾವೆಂಡರ್’ ಎಂಬ ಹೆಸರಿದೆ. ಉಗ್ರರು ತಮ್ಮ ಅಡಗುತಾಣದಲ್ಲಿ ಅಡಗಿ ದ್ದರೂ ಅವರನ್ನು ಪತ್ತೆಹಚ್ಚಲು ಇದು ಸಹಕರಿಸುತ್ತದೆ. ಉಗ್ರರ ಅಡಗುತಾಣಗಳನ್ನು ಉಡಾಯಿಸಲು ಕೂಡ ಇದರಿಂದ ಸಹಾಯವಾಗುತ್ತದೆ. ಲ್ಯಾವೆಂ ಡರ್ ಶೇ. 90ರಷ್ಟು ನಿಖರ ಮಾಹಿತಿ ನೀಡುತ್ತದೆ ಎಂದು ನಂಬಲಾಗಿದೆ. ಆದರೆ ಉಳಿದ ಶೇ. 10ರಷ್ಟು ನಿಖರತೆಯ ಕೊರತೆಯಿರುವ ಕಾರಣ ಅಮಾಯಕರು ಕೂಡ ದಾಳಿಗೆ ಬಲಿಯಾಗುವ ಸಾಧ್ಯತೆ ಇದೆ ಎನ್ನುತ್ತದೆ ವರದಿ.
Related Articles
Advertisement
ಈ ಹಿಂದೆ, “ಮೊದಲ ಬಾರಿಗೆ ಯುದ್ಧದಲ್ಲಿ ಎ.ಐ. ತಂತ್ರಜ್ಞಾನ ಬಳಕೆಯ ಸಾಧನೆಯನ್ನು ನಾವು ಮಾಡಿದ್ದೇವೆ’ ಎಂದು ಇಸ್ರೇಲ್ ಗುಪ್ತಚರ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖೀಸಿ 2021ರಲ್ಲಿ “ಜೆರುಸಲೇಮ್ ಪೋಸ್ಟ್’ ವರದಿ ಮಾಡಿತ್ತು.
ಹೇಗೆ ಕಾರ್ಯನಿರ್ವಹಿಸುತ್ತದೆ?
ಇಸ್ರೇಲ್ ಸೇನೆ ಕಚ್ಚಾ ದತ್ತಾಂಶಗಳನ್ನು ಲ್ಯಾವೆಂಡರ್ ಸಿಸ್ಟಂಗೆ ಒದಗಿಸುತ್ತದೆ.
ಇದರ ಆಧಾರದಲ್ಲಿ ಲ್ಯಾವೆಂಡರ್ ಸಿಸ್ಟಂ ಇತರ ಸಂಭಾವ್ಯ ಉಗ್ರರ ಪ್ರೊಫೈಲ್‌ಗಳನ್ನೂ ಸೃಷ್ಟಿಸುತ್ತದೆ.
ಜತೆಗೆ ಸಂಭಾವ್ಯ ಉಗ್ರರಿರುವ ಪ್ರದೇಶಗಳು ಹಾಗೂ ಮಾನವ ಗುರಿಗಳನ್ನು ಅದು ನಿಗದಿ ಮಾಡುತ್ತದೆ.
ಇದಾದ 20 ಸೆಕೆಂಡುಗಳಲ್ಲೇ ವೈಮಾನಿಕ ದಾಳಿ ನಡೆಯುತ್ತವೆ
ಎಐ ಬಳಸಿಲ್ಲ: ಇಸ್ರೇಲ್ ಸ್ಪಷ್ಟನೆ
ವರದಿಯ ಅಂಶಗಳನ್ನು ತಿರಸ್ಕರಿಸಿರುವ ಇಸ್ರೇಲ್ ಸೇನಾಪಡೆಯು, “ಲ್ಯಾವೆಂಡರ್ ಸಿಸ್ಟಂ ಎನ್ನುವುದು ಉಗ್ರರ ಅಡಗುದಾಣಗಳನ್ನು ಗುರುತು ಹಿಡಿಯುವ ವ್ಯವಸ್ಥೆಯೇ ಅಲ್ಲ. ಇದು ಕೇವಲ ಡೇಟಾಬೇಸ್ ಆಗಿದ್ದು, ಇದರ ಮೂಲ ಉದ್ದೇಶವು ಗುಪ್ತಚರ ಮಾಹಿತಿಯ ಪರಾಮರ್ಶನೆಯಷ್ಟೇ ಆಗಿದೆ’ ಎಂದು ಸ್ಪಷ್ಟನೆ ನೀಡಿದೆ.